ಜಾಗತಿಕ ಮಟ್ಟದ ಅತ್ಯಂತ ಪ್ರಬಲ ಆಯುಧ ಮೊಬೈಲ್ - ಕಂಪ್ಯೂಟರ್ನಲ್ಲಿ ಇರುವ ಎಲ್ಲಾ ಸೌಲಭ್ಯಗಳನ್ನು ತನ್ನದಾಗಿಸಿಕೊಂಡ ಫಲವಾಗಿ ಮೊಬೈಲನ್ನು ಸರಿಯಾಗಿ ಸಮರ್ಪಕವಾಗಿ ಬಳಸಿದರೆ - ಬೆರಳೆಣಿಕೆ ದಿನಗಳಲ್ಲಿ ಜಗತ್ತನ್ನೇ ಬದಲಾಯಿಸಬಹದು - ನಾವು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು ದೇವಾಲಯಗಳ ಪ್ರಗತಿಯ ವೇಗವನ್ನು ಆಮೆ ನಡಿಗೆಯಿಂದ ಮನೋವೇಗಕ್ಕೆ ದಾಪುಗಾಲಿಡುವ ಚಿಂತನ ಮಂಥನ ಅನುಷ್ಠಾನ ವೇದಿಕೆಗೆ ಸಂಗ್ರಹ ಸಲಹೆ - ಈ ಕೆಳಗಿನಂತಿವೆ
೧.ನಮ್ಮ ನಮ್ಮ ದೇವಾಲಯಗಳು ಆನ್ಲೈನ್ ದೇವಾಲಯಗಳು ಆಗುವುದು ಅನಿವಾರ್ಯ . ಇದಕ್ಕಾಗಿ ದೇವಾಲಯದ ಸಮಗ್ರ ಚಿತ್ರಣವನ್ನು ನೀಡಬಲ್ಲ ಹಲವಾರು ಭಾವಚಿತ್ರಗಳನ್ನು ಒಟ್ಟುಗೂಡಿಸಿದ ಒಂದು ಭಾವಚಿತ್ರ ಮತ್ತು ದೇವಾಲಯದ ಸಮಗ್ರ ಸಂಕ್ಷಿಪ್ತ ಮಾಹಿತಿಗೆ ಅವಕಾಶ ನಮ್ಮ ಟೆಂಪಲ್ ಬುಲ್ಲೆಟಿನಿನಲ್ಲಿ ಮತ್ತು ಗೂಗಲ್ ಬ್ಲಾಗಿನಲ್ಲಿದೆ
೨ ಪರಊರು ದೇಶ ವಿದೇಶಗಳಲ್ಲಿ ಇರುವ ನಮ್ಮವರಿಗೆ ಆನ್ಲೈನ್ ಪೂಜೆ , ದೇಣಿಗೆಗೆ .............. ಮುಕ್ತ ವೇದಿಕೆ ನಿರ್ಮಾಣ ಮಾಡೋಣ
೩.ಊರಿನಲ್ಲಿದ್ದುಕೊಂಡು ಕೆಲಸದ ಒತ್ತಡಕ್ಕೆ ಯಾ ಅನ್ಯ ಕಾರಣಗಳಿಂದ ದೂರ ಉಳಿದವರಿಗೆ ಪರೋಕ್ಷ ನಮ್ಮೊಂದಿಗೆ ಭಾಗವಹಿಸಲು ವಿಭಿನ್ನ ತಂತ್ರಗಾರಿಕೆ ಬಳಕೆ.
೪. ದಿನಚರಿ ಕೆಲಸ ಆರಂಭಕ್ಕೆ ಮುನ್ನ ಊರ ದೇವರ ಮೋರೆಯೊಂದಿಗೆ ಕಿರುಕಾಣಿಕೆ ಆನ್ಲೈನ್ ಮೂಲಕ ಸಮರ್ಪಣೆಗೆ - ಪ್ರೇರಣೆ ಪ್ರೋತ್ಸಹ
೫.ಮೊಬೈಲಿನಲ್ಲಿ ಪ್ರಥಮ ಆದ್ಯತೆ ನಮ್ಮ ದೇವವರಿಗೆ - ಸ್ಟೇಟಸ್ ................ಗಳಲ್ಲಿ
೬.ನಮ್ಮ ದೇವರ ಬಗ್ಗೆ ಸ್ವರಚಿತ ಕತೆ, ಕವನ, ವಚನ,ಗದ್ಯ, ಪದ್ಯ, ಕಿರುನಾಟಕ ...............ಇತ್ಯಾದಿ
೭.ನಾವು ಮೊಬೈಲಿನೊಳಗೆ - ಮೊಬೈಲ್ ದೇವಾಲಯದೊಳಗೆ - ನಮ್ಮ ಬದುಕಾಗಲಿ
೮.ಮೊಬೈಲ್ ವ್ಯಸನಿ - ದೇವರ ವ್ಯಸನಿಯಾಗಿ ಪರಿವರ್ತನೆ ಆದಾಗ ನಮ್ಮ ಬದುಕು -ಸುಖ ಶಾಂತಿ ನೆಮ್ಮದಿಯತ್ತ ಪಯಣ
ಮಾನವ ಕುಲಕೋಟಿಯ ಮನದಾಳದಲ್ಲಿ ನೂರಾರು ಶುಭಚಿಂತನೆಗಳು ವೇದಿಕೆ ಸಿಗದೆ ಮಣ್ಣಾಗುವುದಕ್ಕೆ ಇತಿಶ್ರೀ ಹಾಡಿ - ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು - ನಮ್ಮ ನಿಮ್ಮೆಲ್ಲರ ದೇವಾಲಯಗಳ ಸಮಗ್ರ ಅಭಿವೃದ್ಧಿಯತ್ತ ಮುನ್ನುಗ್ಗೋಣ.
Related