ಮೊಬೈಲ್ ಬಳಸುತಿರುವ ನಾವು ಅದರ ಸಾಮರ್ಥ್ಯದ ೧೦% ಮಾತ್ರ ಬಳಸುತಿದ್ದು – ಬಾಕಿ ಉಳಿದಿರುವ ೯೦% ಸಾಮರ್ಥ್ಯವನ್ನು ಸದುಪಯೋಗ ಮಾಡುವುದಕ್ಕೋಸ್ಕರ ಬಳಕೆದಾರರಾದ ನಾವೆಲ್ಲ ಸೇರಿ – ಪ್ರತಿ – ಊರು ದೇವಾಲಯ ದೈವಾಲಯ ವೃತಿ ಜಾತಿ ಶಾಲೆ ಗ್ರಾಮೀಣಾಭಿವೃದ್ಧಿ ಗಣೇಶೋತ್ಸವ ಸಂಘ ಸಂಸ್ಥೆಗಳು ಬ್ಯಾಂಕುಗಳು ………ಇತ್ಯಾದಿ ವಿಭಿನ್ನ ಕ್ಷೇತ್ರಗಳಲ್ಲಿ ಒಕ್ಕೂಟವನ್ನು ರಚಿಸಿಕೊಂಡ – ಆಯಾಯ ವಲಯಗಳಲ್ಲಿ ಬೇಕು ಬೇಕಾದುಗಳನ್ನು ಸಂಗ್ರಹಿಸಿ ಸೂಕ್ತ ವೆಬ್ಸೈಟ್ ಯಾ ಬ್ಲಾಗ್ನಲ್ಲಿ ಪ್ರಕಟಿಸಿದರೆ ಸಾಮಾಜಿಕ ಧಾರ್ಮಿಕ ಆರ್ಥಿಕ ಬೆಳವಣಿಗೆ ಜೊತೆ ಜೊತೆಗೆ ಪ್ರತಿ ವ್ಯಕ್ತಿಯ ಸ್ಥಾನ ಮಾನ ಘನತೆ ಗೌರವ ಸಂಪತ್ತು ವೃದ್ಧಿಸಿ ಸುಖ ಶಾಂತಿ ನೆಮ್ಮದಿ ಬಾಳಿಗೆ ನಾಂದಿಯಾಗಬಹುದು.
ನಾವು ಇಂದು ವಿದೇಶಿಯರು ಹುಟ್ಟು ಹಾಕಿದ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತ ಅವರ ಹೊಟ್ಟೆ ತುಂಬಿಸುವ ಕೆಲಸದಲ್ಲಿ ಮುಳುಗಿದ್ದು – ಮೊಬೈಲಿಗೆ ಹಾಕುವ ಹಣ ಮೊಬೈಲ್ ಕಂಪನಿಗೆ , ಮೊಬೈಲ್ ಹೊಟ್ಟೆಗೆ ಹಾಕಿದ ಹಣ ಇನ್ನೊಂದು ಕಂಪನಿಗೆ – ನಿರಂತರ ಸಮಯ ಶ್ರಮ ವ್ಯರ್ಥಮಾಡುತ್ತ – ಸೋಮಾರಿಗಳನ್ನು ಮತ್ತು ಮೊಬೈಲ್ ರೋಗಕ್ಕೆ ಬಲಿಯಾಗುತಿರುವ ರೋಗಿಗಳನ್ನು ನಿತ್ಯ ನಿರಂತರ ಕಾಣುವಂತಾಗಿದೆ. ಈ ನಿಟ್ಟಿನಲ್ಲಿ ನಾವು ನಮ್ಮ ಕೊಡುಗೆ ಇತ್ತು – ಆ ಮೂಲಕ ನಮ್ಮ ಅಭಿವೃದ್ಧಿಯೊಂದಿಗೆ ಮಾನವ ಜನಾಂಗದ ಏಳಿಗೆಗೆ ಕಂಕಣಬದ್ಧರಾಗೋಣ.
ಇದಕ್ಕೆ ಒಕ್ಕೂಟ ಅದರದ್ದೇ ಆದ website ಮಾಡಬಹುದು ಯಾ ಬ್ಲಾಗ್ ಯಾ ಈಗಾಗಲೇ ಈ ಸವಲತ್ತಿಗೆ ಮೀಸಲಾಗಿರುವ ಬುಲೆಟಿನ್ ಬಳಸಬಹುದು
ಒಕ್ಕೂಟದ ಮೂಲಕ ನಮಗೆ ಅನುಕೂಲವಾಗುವ ಕಾರ್ಯಕ್ರಮಗಳ ವಿವರ – ನಿಮ್ಮ ನಮ್ಮೆಲ್ಲರ ಚಿಂತನೆಯೊಂದಿಗೆ ವ್ಯಾಪ್ತಿ ವಿಸ್ತರಿಸಲಿದೆ
೧. ವೃತಿ ಜಾತಿ ಆಧಾರಿತ ಬುಲೆಟಿನ್ – ಮನೆ ಮಂದಿ ಸಹಿತ ಯಾ ರಹಿತ
೨. ಹುಟ್ಟು ಹಬ್ಬ ಮದುವೆ ದಿನ ದಶಮಾನೋತ್ಸವ ೨೫ನೆ ೫೦ನೆ ೧೦೦ನೆ ವರ್ಸಾಚರಣೆ – ಪ್ರಕಟಣೆ
೩. ಸಂಸಾರದ ಬುಲೆಟಿನ್ – ಸಂಸಾರದ ಪೂರ್ಣ ಪರಿಚಯ ಸಾಧ್ಯತೆ
೪. ಜಾತಿವಾರು ಬುಲ್ಲೆಟಿನಿಂದ – ವರ ವದು ಅನ್ವೇಷಣೆ – ಜಾತಿವಾರು ಅರಿವಿನ ಸಾಧ್ಯತೆ
೫. ವೃತಿವಾರು ಬುಲೆಟಿನ್ – ಸಮಾಜಕ್ಕೆ ಬೇಕು ಬೇಕಾದವರ ಸಂಪರ್ಕಕ್ಕೆ ಅನುಕೂಲ
೬. ಶ್ರದಾಂಜಲಿ ಪ್ರಕಟಣೆ – ಶಾಶ್ವತ ಕನಿಷ್ಠ ಶುಲ್ಕದಿಂದ
೭. ಜೀವನ ಚರಿತ್ರೆ ಪ್ರಕಟಣೆಗೆ ಉತ್ತಮ ವೇದಿಕೆ
೮. ಆವಿಸ್ಕಾರಗಳಿಗೆ ಪೂರಕ ವೇದಿಕೆ
೯. ವೆಚ್ಚದಾಯಕ ಹಣೆಪಟ್ಟಿಯಿಂದ ಮೊಬೈಲ್ ಬಿಡುಗಡೆ – ಸಂಪಾದನೆಗೆ ಮೂಲವೆಂಬ ಬಿರುದು
೧೦. ದೈವ ದೇವಾಲಯ ………ಇತ್ಯಾದಿ ಧಾರ್ಮಿಕ ಕ್ಷೇತ್ರ – ಕಾರ್ಯಕರಮಗಳ ಜಾಗತಿಕ ಮಟ್ಟದ ಪ್ರಕಟಣೆ
೧೧. ನಮ್ಮ ನಮ್ಮ ಊರುಗಳ ವಸ್ತು ಸ್ಥಿತಿ ಪ್ರಕಟಣೆಗೆ ವಿಪುಲ ಅವಕಾಶ
೧೨. ನಮ್ಮ ನಿಮ್ಮ ಅರಿವಿಗೆ ಬಂದ ವಿಚಾರ ವಿಷಯಗಳ ಜಾಗತಿಕ ಮಟ್ಟದ ಪ್ರಕಟಣೆ ಸಾಧ್ಯತೆ – ಉಚಿತ ಯಾ ಕನಿಷ್ಠ ಸೇವಾ ಶುಲ್ಕದೊಂದಿಗೆ
ಮಾನವ ಬದುಕಿನಲ್ಲಿ ಬರುವ ಏಲ್ಲಾ ಆವಿಸ್ಕಾರಗಳನ್ನು ಪೂರಕವಾಗಿ ಬಳಸಿ ಪ್ರಗತಿಯತ್ತ ಮುನ್ನಗೋಣ