ಮೊಬೈಲ್ ಪುಟ್ಟ ಮಕ್ಕಳಿಂದ ಹಿಡಿದು ಪ್ರತಿಯೊಬ್ಬ ವ್ಯಕ್ತಿಯು ಕೂಡ ನಿತ್ಯ ನಿರಂತರ ಬಳಸುವ – ಮನೋವೇಗವನ್ನು ತನ್ನದಾಗಿಸಬಲ್ಲ ಅತ್ಯಂತ ಪ್ರಭಾವಿ ಮಾಧ್ಯಮ. ಇದರ ಮಿತಿಮೀರಿ ಬಳಕೆ ಸಮಾಜದ ಮೇಲೆ ಕೆಲವೊಂದು ಕೆಟ್ಟ ಪರಿಣಾಮದ ಫಲವಾಗಿ, ನಿಯಂತ್ರಣ ಪೋಷಕರು ಗುರುಗಳು ಹೇರಿದ್ದರು – ಸಂಪೂರ್ಣ ಪ್ರಯೋಜನ ಪಡೆಯುವಲ್ಲಿ ವಿಫಲವಾಗಿರುವುದನ್ನು ಗಮನಿಸಿ ಬದಲಿ ಮಾರ್ಗೋಪಾಯದ ಚಿಂತನೆ – ಈ ವೇದಿಕೆ
ಮೊಬೈಲ್ ಬಗ್ಗೆ ನಮಗೆ ವಿದ್ಯಾರ್ಥಿಗಳೇ ಗುರುಗಳು – ಯಾವುದೇ ಸಣ್ಣ ಪುಟ್ಟ ರಿಪೇರಿ ಅನುಮಾನಗಳನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳುವುದು ವಾಸ್ತವ
ಆದುದರಿಂದ ಅವರಲ್ಲಿರುವ ಮೊಬೈಲ್ ಬಳಸುವ ಅಪರಿಮಿತ ಜ್ಞಾನವನ್ನು ಉಪಯೋಗಿಸಿ – ಸಮಾಜ ಸೇವೆಯೊಂದಿಂಗೆ ಸಂಪಾದನೆ ಮಾಡುವ ವಿಪುಲ ಅವಕಾಶದ ಕೆಲವೊಂದು ದಾರಿಗಳತ್ತ ಚಿಂತನೆ ಮುಂದಕ್ಕೆ
ಪ್ರಶ್ನೆ ; ನಮಗೆ ಮೊಬೈಲಿನಲ್ಲಿ ಮಾಡುವ ಕೆಲಸ ಕೊಡಿ ನಾವು ಮಾಡುತ್ತೆವೆ
ಉತ್ತರ ; ಈಗಾಗಲೇ ನಿಮ್ಮ ಅನುಭವಕ್ಕೆ ಬಂದಿರುವ ವಿಷಯಗಳನ್ನು ಹೊರತುಪಡಿಸಿ ಆವಿಸ್ಕಾರದತ್ತ ಗಮನಹರಿಸೋಣ
ಪ್ರಶ್ನೆ ; ನಾವು ಒಬ್ಬರೇ ಏಕಾಂಗಿಯಾಗಿ ಮಾಡುವುದು ಒಳಿತೋ ಯಾ ಕೆಲವೊಂದು ಮಂದಿ ಒಟ್ಟಾಗಿ ಸೇವಾ ಒಕ್ಕೂಟದಿಂದ ಮಾಡುವುದು ಒಳಿತೋ
ಉತ್ತರ ; ಸೇವಾ ಒಕ್ಕೂಟದಿಂದ ಮಾಡುವುದು ಒಳಿತು , ಏಕಾಂಗಿಯೂ ಅಡ್ಡಿಯಿಲ್ಲ
ಪ್ರಶ್ನೆ ; ನಾವು ವಿದ್ಯಾರ್ಥಿಗಳಾಗಿ ವಿದ್ಯಾರ್ಥಿಗಳಿಗೆ ಏನು ಮಾಡಬಹುದು
ಉತ್ತರ ;ನೀವು ನಿಮ್ಮ ವ್ಯಕ್ತಿ ಪರಿಚಯವನ್ನು ನಿಮ್ಮ ಪೋಷಕರೊಂದಿಗೆ ಸಮಾಜಕ್ಕೆ, ಪ್ರಪಂಚಕ್ಕೆ ಪರಿಚಯಿಸಿ ಸೇವೆಯೊಂದಿಗೆ ಸಂಪಾದನೆ ಮಾಡಿ
ಪ್ರಶ್ನೆ ; ಇದರಿಂದ ಲಾಭವೇನು
ಉತ್ತರ ; ಇದು ಭಾರತೀಯ ಸಂಸ್ಕೃತಿಯ ಉಳಿವಿಗೆ ಕಾರಣವಾಗುತದೆ. ನಮ್ಮ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗು ಅವಕಾಶ ಸಿಗುತದೆ
ಪ್ರಶ್ನೆ ; ನಾನು ಒಬ್ಬ ಕೃಷಿಕನ ಮಗ /ಮಗಳು ನಾನು ಏನು ಮಾಡಬಹುದು ತಿಳಿಸಿ
ಉತ್ತರ ; ಕೃಷಿ ಮಾಡುವವರ ಪರಿಚಯ ಕೃಷಿ ಕಾರ್ಮಿಕರ ಪರಿಚಯ,ಇತ್ಯಾದಿ ಮಾಡಿದರೆ ನಿಮ್ಮ ಹಿರಿಯರಿಗೆ ಸಹಾಯ ಮಾಡಿದಂತೆ ಆಗುತದೆ
ಪ್ರಶ್ನೆ ; ಕೂಲಿ ಕಾರ್ಮಿಕನ ಮಗ/ಮಗಳು ನಾನು ಏನು ಮಾಡಲಿ
ಉತ್ತರ ; ಕೂಲಿ ಕಾರ್ಮಿಕರನ್ನು ಪರಿಚಯಿಸುವ ಕೆಲಸ ಮಾಡಿದರೆ ಹೆಚ್ಚಿನ ಅವಕಾಶ ದೊರೆಯಲಿದೆ
ಪ್ರಶ್ನೆ ; ನಾನು ಒಬ್ಬ ವ್ಯಾಪಾರಿಯ ಮಗ/ಮಗಳು ನಾನು ಏನು ಮಾಡಲಿ
ಉತ್ತರ ; ನಿಮ್ಮ ಅಂಗಡಿಯ ಭಾವಚಿತ್ರ ಹಾಕಿ ಪೇಟೆಯ ಹೆಸರು , ಮೊಬೈಲ್ ನಂಬರು ಬೇಕಾದಲ್ಲಿ ಹಾಕಿ ಬಿಸಿನೆಸ್ ಬುಲೆಟಿನ್ ನಲ್ಲಿ ಪ್ರಕಟಿಸದರೆ ಪ್ರಯೋಜನವಾಗಲಿದೆ
ಪ್ರಶ್ನೆ ; ನಾನು ಟೀಚರ್ ಮಗ / ಮಗಳು ನನ್ನ ಕೆಲಸ ತಿಳಿಸಿ
ಉತ್ತರ ; ಟೀಚರ್ಸ್ ಸೇವಾ ಒಕ್ಕೂಟ ಮಾಡಿ ಟೀಚರ್ಸ್ ಬುಲೆಟಿನ್ ಇದರಲ್ಲಿ ಅವರ ಪರಿಚಯ ಮಾಡಲು ಸಹಕರಿಸಿ. ಇದರಿಂದ ಅವರ ವ್ಯಕ್ತಿ ಪರಿಚಯದೊಂದಿಗೆ ವ್ಯಕ್ತಿತ್ವ ಬೆಳಕಿಗೆ ಬರುತದೆ
ಪ್ರಶ್ನೆ ; ನಾನು ಚಾಲಕರ ಮಗ/ಮಗಳು ನನ್ನ ಕೆಲಸ ಬಗ್ಗೆ ತಿಳಿಸಿ
ಉತ್ತರ ; ಯಾವುದೇ ಕೆಲಸದ ಬಗ್ಗೆ ಕೀಳರಿಮೆ ಬೇಡ – ಚಾಲಕರ ಬುಲೆಟಿನ್ ಇದರಲ್ಲಿ ಅವರನ್ನು ಪರಿಚಯಿಸಿ – ಅವರ ಅನಿವಾರ್ಯತೆಯನ್ನು ಸಮಾಜಕ್ಕೆ ತಿಳಿಸಿ
ಪ್ರಶ್ನೆ ; ನಾನು ಫೋಟೋಗ್ರಾಫರ್ ಮಗ/ಮಗಳು ನಾನು ಏನು ಮಾಡಲಿ
ಉತ್ತರ ; ಭಾವಚಿತ್ರ ಸಹಿತ ಹೆಸರು ಜಾತಿಯ ಹೆಸರು ಊರಿನ ಹೆಸರು ಮೊಬೈಲ್ ನಂಬರು ಫೋಟೋಗ್ರಾಫರ್ ಬುಲೆಟಿನ್ ಇದರಲ್ಲಿ ಪ್ರಕಟಿಸಲು ಸಹಕರಿಸಿ, ಮಾತ್ರವಲ್ಲದೆ ಅನ್ಯ ವಲಯದಿಂದ ಅಪರಿಮಿತ ಸಂಪಾದನೆ ದಾರಿ ಬಗ್ಗೆ ತಿಳಿಸಿ
ಪ್ರಶ್ನೆ ; ನಾನು ಒಂದು ಜಾತಿಯವನು ನನ್ನ ಜಾತಿಯವರಿಗೆ ಏನ್ನನ್ನಾದರೂ ಮಾಡಬಹುದೇ
ಉತ್ತರ ; ಜಾತಿವಾರು ಸಂಘ ಸಮುಸ್ತೆಗಳ ಸಹಭಾಗಿತ್ವ ಯಾ ಜಾತಿಯ ನಿಮ್ಮದೇ ಒಕ್ಕೂಟ ಮೂಲಕ ಜಾತಿಯವರ ಸ್ಪಷ್ಟ ಪರಿಚಯ ಜಾತಿಯವರಿಗೆ ಆಗುವಂತೆ ಮಾಡಿದಾಗ ನೀವು ಆ ಜಾತಿಯಲ್ಲಿ ಹುಟ್ಟಿದಕ್ಕೆ ಸಾರ್ತಕವಾಗುತದೆ.
ಪ್ರಶ್ನೆ ; ಮಹಿಳೆಯರಿಗೆ ನಾವು ಏನು ಮಾಡಲಿ
ಉತ್ತರ ; ಹುಟ್ಟಿನಿಂದ ಸಾಯುವವಳ್ಳಿಯವರೆಗೆ ದುಡಿಯುವವರು ಮಹಿಳೆಯರು – ಅವರ ಪ್ರಾಮುಖ್ಯತೆ ಗೊತ್ತಾಗುವುದು ಅವರು ಇಲ್ಲದಿದ್ದಾಗ ಮಾತ್ರ – ಆದುದರಿಂದ ಮಹಿಳಾ ಬುಲೆಟಿನ್ ಇದರಲ್ಲಿ ಅವರ ವ್ಯಕ್ತಿ ಪರಿಚಯದ ಜೊತೆಗೆ ವ್ಯಕ್ತಿತ್ವ ಪರಿಚಯ ಮಾಡಿ ಹೆತ್ತು ಹೊತ್ತು ಬೆಳೆಸಿದ ಮಹಿಳೆಗೆ ಕೃತಜ್ಞತೆ ಸಲ್ಲಿಸಿ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ; ಅವ್ಯಕ್ತ ಬುಲೆಟಿನ್ – ಮೊಬೈಲ್ ೯೪೮೦೨೪೧೭೬೫
ಮುಂದುವರಿಯುವುದು