ಜಗದಿ ಪರಿಚಯಿಸೆ ಕೋಟಿ ಕೋಟಿ ಕಕ್ಕುತಿಹರು
ಜಗದಿ ಪರಿಚಯಿಸೆ ನೂರು ಸಾಕೆಂದು ಸಾರುತಿಹರು
ಜಗದಿ ಮೂರ್ಖರು ಅರಿತೊಡೆ ಬಾಳು ಹಸನೆಂದ …………………….. ಅವ್ಯಕ್ತ
ನನ್ನ ಧರ್ಮ ಅಳಿವು ನನ್ನಿಂದ
ನನ್ನ ಧರ್ಮ ಉಳಿವು ನನ್ನಿಂದ
ಅರಿತು ಬಾಲಿದೊಡೆ ಧರ್ಮ ಉಳಿವುದೆಂದ ………………………….. ಅವ್ಯಕ್ತ
ನೂರು ರೂಪಾಯಿ ಬೆಲೆ ಲಕ್ಶ ಕೋಟಿ
ಲಕ್ಶ ಕೋಟಿ ಬೆಲೆ ನೂರು ರೂಪಾಯಿ
ಬಳಕೆ ಅರಿತವನಿಂದ ಕೇಳಿ ಅಳವಡಿಸೆಂದ ………………………………..ಅವ್ಯಕ್ತ
ಗಂಡು ಹೆಣ್ಣಿನ ಪಾಪದ ಕೊಡ
ಗಂಡು ಹೆಣ್ಣಿನ ಪುಣ್ಯದ ಕೊಡ
ದಾಂಪತ್ಯ ಜೀವನ ಬಂಧನಕ್ಕೆ ಕಾರಣವೆಂದ…………………………….. avyaktha