ವರವ ಕೊಡು ಎನಗೆ ಶ್ರೀ ದುರ್ಗಾಂಬೆ
ಚರಣ ಕಮಲಂಗಳಿಗೆ ಪೊಡಮಡುವೆ ತಾಯೇ ||ವ||
ಶಂಕರನ ರಾಣಿ ದುರ್ಗಾಂಬೆ
ಭಕ್ತರನು ಸಲಹು ಜಗದಂಬೆ ||2 ||
ಈ ಪುಣ್ಯ ಮಣ್ಣಿನಲಿ ನೆಲೆ ನಿಂತ ದೇವಿ ||2 ||
ಕೈ ಹಿಡಿದು ಮುನ್ನಡೆಸು ಓ ಆದಿಶಕ್ತಿ ||ವ||
ಸಜ್ಜನರ ರಕ್ಷಿಸುವ ರಮಣೀ
ದುರ್ಜನರ ಪಾಲಿನ ಧಮನಿ
ನನ್ನ ಮನದಾ ತುಂಬ ನೀನೇ ತುಂಬಿರುವೇ ||2 ||
ನಮ್ಮನ್ನು ಉದ್ಧರಿಸು ಓ ದೀನ ಬಂಧು ||ವ||
ನವರಾತ್ರಿ ದಿನದಲ್ಲಿ ನಿನ್ನಾ
ನೋಡುವಾ ಸೌಭಾಗ್ಯ ಎನ್ನ
ದೀಪಾಲಂಕಾರ ನಿನ್ನ ಗುಡಿಯಲ್ಲಿ ||2 ||
ನಿತ್ಯ ನೆಲೆಸು ತಾಯೆ ನಮ್ಮ ಮನದಲ್ಲಿ ||ನಿ|| ||ವ||
ಬೀಡು ಬೈಲಿನ ದೇವಿ ದುರ್ಗೆ
ಕಷ್ಟಗಳ ಪರಿಹರಿಸು ಜನನಿ
ಮಾಂಗಲ್ಯ ಭಾಗ್ಯವನು ಕರುಣಿಸು ತಾಯೆ ||2 ||
ಶಿರಬಾಗಿ ನಮಿಸುವೆನು ಓ ಆದಿಮಾಯೆ ||2 || ||ವ||
ರಚನೆ :ನಂದ ಶಾಂತಪ್ಪ ಗೌಡ ಪಾದೆ
“ನವರಾತ್ರಿಯ ಒಂಭತ್ತು ದಿನಗಳು ಮತ್ತು ಒಂಭತ್ತು ರಾತ್ರಿಗಳು ನಿಮಗೆ ಜೀವನದುದ್ದಕ್ಕೂ ಉತ್ತಮ ಆರೋಗ್ಯ ಮತ್ತು ಅದೃಷ್ಟವನ್ನು ತರಲಿ. ನವರಾತ್ರಿ ಹಬ್ಬದ ಹಾರ್ದಿಕ ಶುಭ ಹಾರೈಕೆಗಳು“