ಇಚಿಲಂಪಾಡಿ :ದಿನಾಂಕ 17-10-2021 ಭಾನವಾರದಂದು ಶ್ರೀ ಉಳ್ಳಾಕ್ಲು ದೈವಸ್ಥಾನದ ಪ್ರತಿಷ್ಠ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಗಿದ್ದು ಪೂಜನೀಯ ಶುಭಕರ ಹೆಗ್ಗಡೆಯವರು ಗೌರವಾಧ್ಯಕ್ಷರು, ಅಧ್ಯಕ್ಷ ರಾಗಿ ಶ್ರೀ ನಾರಾಯಣ ಪೂಜಾರಿ ಬರೆಮೇಲು, ಉಪಾಧ್ಯಕ್ಷ ರಾಗಿ ಶ್ರೀ ಜಯರಾಜ್ ಕೊರಮೇರು, ಪ್ರಧಾನ ಕಾರ್ಯದರ್ಶಿ ಯಾಗಿ ಶ್ರೀ ಗಿರೀಶ್ ಸಾಲಿಯಾನ್ ಬದನೆ, ಜತೆ ಕಾರ್ಯದರ್ಶಿ ಯಾಗಿ ರುಕ್ಮಯ ಗೌಡ ಕೊರಮೇರು ಹಾಗೂ ಕೋಶಾಧಿಕಾರಿ ಯಾಗಿ ಶ್ರೀ ಅನಿಲ್ ಉಮೆಸಾಗು ಇವರನ್ನು ಆಯ್ಕೆ ಮಾಡಲಾಗಿದೆ. ವಿವಿಧ ಉಪಸಮಿತಿಗಳಿಗೆ ಸಂಚಾಲಕ ಹಾಗೂ ಉಪಸಂಚಾಲಕರನ್ನೂ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಸಭೆಯಲ್ಲಿ ಪೂರ್ಣ ಪ್ರಮಾಣದ ಸಮಿತಿಯೊಂದಿಗೆ ಈ ದೇವತಾ ಕಾರ್ಯಗಳಲ್ಲಿ ಭಾಗಿಯಾಗಿ ಇತಿಹಾಸ ಪ್ರಸಿದ್ಧ ನಮ್ಮ ಉಳ್ಳಾಕ್ಲು ದೈವದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.
ಬ್ರಹ್ಮಕಲಶೋತ್ಸವ ಕ್ಕೆ ಅಣಿಯಾಗುತ್ತಿರುವ ಇಚ್ಲಂಪಾಡಿಯ ಶ್ರೀ ಉಳ್ಳಾಕ್ಲು ದೈವಗಳ ಶಿಲಾಮಯ ದೈವಸ್ಥಾನ