ಮನುಷ್ಯ ಪ್ರಪಂಚಕ್ಕೆ – Man to World

ಶೇರ್ ಮಾಡಿ

ಮಾನವ ಸಕಲ ಕಲಾವಿದ – ಆದರೆ ತನಗೆ ಬೇಕಾದುದನ್ನು ತಾನು ಮಾಡಿಕೊಳ್ಳುವ ವಿಷಯದಲ್ಲಿ ತುಂಬಾ ಹಿಂದೆ ಬಿದ್ದಿದ್ದು – ಈ ನಿಟ್ಟಿನಲ್ಲಿ ಪುಟ್ಟ ಪ್ರಯತ್ನ – ಮನುಷ್ಯ ಪ್ರಪಂಚಕ್ಕೆ – ಟಿ ವಿ ಮೊಬೈಲ್ ಇತ್ಯಾದಿಗಳಿಂದ ಪ್ರಾರಂಭ ಮಾಡಿ ಸಕಲ ವಸ್ತುಗಳು – ನಮ್ಮ ಮೊಬೈಲ್ ಕಂಪ್ಯೂಟರ್ಗಳಲ್ಲಿ ಸಂಪೂರ್ಣ ಮಾಹಿತಿ ಪಡೆಯಲು ವಿಪುಲ ಅವಕಾಶಗಳಿವೆ – ಇಂತಹ ಬ್ರಹತ್ ಜಾಲವನ್ನು ಕಂಡುಹಿಡಿದು ಪರಿಚಯಿಸಿದ ಮಾನವ ತಮ್ಮ ಒಡನಾಡಿ ಮಾನವಕುಲವನ್ನು ಪರಿಚಿಸುವ ವಿಪುಲ ಉದ್ಯೋಗ ಉದ್ಯಮಕ್ಕೆ ಅವಕಾಶದತ್ತ ದೃಷ್ಟಿ ಹಾಯಿಸೋಣ
ವ್ಯಕ್ತಿ ಪರಿಚಯ – ವ್ಯಕ್ತಿಯ ಭಾವಚಿತ್ರದೊಂದಿಗೆ ಅವನ ಹೆಸರು ವಿಳಾಸ – ಇಚ್ಚಿಸಿದವರು ಮಾತ್ರ ತಮ್ಮ ಮೊಬೈಲ್ ಪ್ರಕಟಣೆ
ವೃತ್ತಿ ಪರಿಚಯ – ಹುಟ್ಟಿದ ವ್ಯಕ್ತಿ ಯಾವುದಾದರು ಒಂದು ಉದ್ಯೋಗದಲ್ಲಿ ತೊಡಗಿರುತಾನೆ . ಅದನ್ನು ತಿಳಿಯಪಡಿಸುವುದೇ ಇದರ ಉದ್ದೇಶ – ತಾನು ಮಾಡುವ ಕೆಲಸ ಯಾವುದೇ ಇರಬಹುದು – ಅದಕ್ಕೆ ಕೀಳರಿಮೆ ಬೇಡವೇ ಬೇಡ – ಉದ್ಯೋಗದಲ್ಲಿ ತೊಡಗಿ ಬದುಕುವ ಹವ್ಯಾಸ ಇದ್ದಾರೆ ಸಾಕು
ಜಾತಿ ಪರಿಚಯ – ಕೆಲವೊಂದು ಸಂದರ್ಭಗಳಲ್ಲಿ – ಬಹುತೇಕ ಹೆಚ್ಚಿನ ಸಂದರ್ಭಗಳಲ್ಲಿ – ಜಾತಿಯ ಬಗ್ಗೆ ತಿಳಿದುಕೊಳ್ಳುವ ಅನಿವಾರ್ಯತೆ ನಮಗೆಲ್ಲರಿಗೂ ಬಂದೆ ಬರುತದೆ. ಆದುದರಿಂದ ಈ ಬಗ್ಗೆ ಪರಿಚಯಿಸುವ ಅನಿವಾರ್ಯತೆ ಇದ್ದೆ ಇದೆ.
ಮನೆಮಂದಿ ಪರಿಚಯ – ಒಂದು ಮನೆಯಲ್ಲಿ ವಾಸಮಾಡುವವರ ಅರಿವು ನಮಗೆ ಮಾತ್ರವಲ್ಲ ಸಕಲರಿಗೂ ತಿಳಿದರೆ – ಅದರಿಂದ ಆಗುವ ಪ್ರಯೋಜನಗಳು – ಒಂದೆರಡು ಅಲ್ಲ – ಇದು ಬೇರೆ ಬೇರೆ ಸಂದರ್ಭಗಳಲ್ಲಿ ನಮ್ಮನ್ನು ಜಾಗ್ರತಗೊಳಿಸಿ ಮುನ್ನಡೆಯುವಂತೆ ಮಾಡುತದೆ
ಊರಿನ ಪರಿಚಯ – ನಮ್ಮ ಊರಿನ ಬಗ್ಗೆ ಕೂಡ ತಿಳಿಸುವ ಅವಶ್ಯಕತೆ ಇದ್ದೆ ಇದೆ. ನಾವು ಇತ್ತ ದೃಷ್ಟಿ ಹಾಯಿಸಿ ಮುನ್ನಡೆಯೋಣ
ವಂಶ ವೃಕ್ಷ – ಸುಮಾರು ಮೂರರಿಂದ ಪ್ರಾರಂಭಿಸಿ ಏಳು ತಲೆಮಾರಿನ ಬಗ್ಗೆ ಸಮಾಜಕ್ಕೆ ತಿಳಿಸುವ ವ್ಯವಸ್ಥೆಯೇ ವಂಶ ವೃಕ್ಷ – ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ಮತ್ತು ಪ್ರಸ್ತುತ ನ್ಯಾಯ ನ್ಯಾಯಾಲಯದಿಂದ ಗಿಟ್ಟಿಸಿಕೊಳ್ಳಲು ಇದರ ಅಗತ್ಯತೆ ನಮ್ಮ ನಿತ್ಯ ಬದುಕಿನಲ್ಲಿ ಎದ್ದು ಕಾಣುತಿದೆ
ಜೀವನ ಚರಿತ್ರೆ – ಜೀವನ ಪರಿಚಯ ಯಾ ಜೀವನ ಚರಿತ್ರೆ ಪ್ರಕಟಿಸಲು ಪ್ರತಿಯೊಬ್ಬರಿಗೂ ಬಯಕೆ ಇರುತದೆ. ಆದರೆ ಪೂರಕ ವ್ಯವಸ್ಥೆಗಳ ಕೊರತೆಯಿಂದ ಅದು ಕಾರ್ಯರೂಪಕ್ಕೆ ಬರುತಿಲ್ಲ . ಬಡವರಿಂದ ಆರಂಭಿಸಿ ಶ್ರೀಮಂತರ ತನಕ – ಬೇಕಾದಲ್ಲಿ ಬೇಕಾದವರಿಗೆ – ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯ – ಇದು ನಮ್ಮ ಅನಿವಾರ್ಯತೆಯಲ್ಲಿ ಮುಂದಕ್ಕೆ ಸಿಂಹಪಾಲು ಗಿಟ್ಟಿಸಲು ವಿಪುಲ ಅವಕಾಶಗಳಿವೆ.
ನಮ್ಮ ಮತ್ತು ನಿಮ್ಮ ಚಿಂತನ ಮಂಥನ ಅನುಷ್ಠಾನದಲ್ಲಿ – ಮುಂದಕ್ಕೆ ಮಾವಕುಲಕೋಟಿ ಚಿರಪರಿಚಿತರಾಗಿ ಬಾಳುವ ಸುದಿನದ ನಿರೀಕ್ಷೆ ನಮ್ಮದಾಗಲಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?