ಸಾಮೂಹಿಕ ಪೂಜಾ ಪದ್ಧತಿ ದೇವರ ಇಚ್ಛೆ
ವ್ಯಕ್ತಿಕ ಪೂಜೆ ಪದ್ಧತಿ ಮಾನವ ಇಚ್ಛೆ
ದೇವರ ಇಚ್ಛೆ ಮಾನವರ ಇಚ್ಛೆಗೆ ಬಲಿಯಾಯಿತೆ ………………………………… ಅವ್ಯಕ್ತ
ಸಂಘ ಸಮಿತಿ ಮಾನವ ನಿರ್ಮಿತ
ಒಕ್ಕೂಟ ಪದ್ಧತಿ ದೇವ ನಿರ್ಮಿತ
ಒಕ್ಕೂಟ ಪದ್ಧತಿ ಮೂಲೆ ಗುಂಪೆ ……………………………………………………ಅವ್ಯಕ್ತ
ಪ್ರಜಾ ನ್ಯಾಯಾಲಯದಲ್ಲಿ ಮೇಲ್ಮನವಿ ಇರುವುದಯ್ಯ
ದೇವಾ ನ್ಯಾಯಾಲಯದಲ್ಲಿ ಮೇಲ್ಮನವಿ ಇಲ್ಲವಯ್ಯಾ
ಪ್ರಜಾದೇವಾ ನ್ಯಾಯಾಲಯಗಳಲ್ಲಿ ಆಯ್ಕೆ ಯಾವುದಯ್ಯ ………………………….ಅವ್ಯಕ್ತ
ದೇವರ ನಂಬಿಹ ಭಕ್ತರು ಇಹರು
ದೇವರ ತೀರ್ಪು ಅಂತಿಮ ಅರಿತಿಹರು
ನ್ಯಾಯಕ್ಕಾಗಿ ಹೋರಾಟ ಮಾಲ್ಪರು ಯಾರಯ್ಯ …………………………………….ಅವ್ಯಕ್ತ
ಪರಕೀಯರ ಆಡಳಿತದಿ ದೇಶದ ಸಂಪತ್ತು ಪರದೇಶಕ್ಕೆ
ದೇಶೀಯರ ಆಡಳಿತದಿ ದೇಶದ ಸಂಪತ್ತು ಮನೆಗೆ
ದೇವರ ಆಡಳಿತದಿ ದೇಶದ ಸಂಪತ್ತು ದೇಶಕ್ಕೆ ………………………………………ಅವ್ಯಕ್ತ
ಸೇವೆಗೆ ಸಾಧಕನಿಗೆ ವಿಪುಲ ಅವಕಾಶ ಇರುವುದಯ್ಯ
ವ್ಯಾಪಾರ ಬಾಧಕನಿಗೆ ಮಿತ ಅವಕಾಶ ಇರುವುದಯ್ಯ
ವಿಪುಲ ಮಿತ ಅವಕಾಶ ಆಯ್ಕೆ ನಿನ್ನದಯ್ಯಾ…………………………………………ಅವ್ಯಕ್ತ