ನಾವು ಮನ ವಚನ ಕಾಯದಿಂದ ಅನ್ಯರಿಗೆ ಸಮಾಜಕ್ಕೆ ದೈವ ದೇವಾಲಯಕ್ಕೆ ಸಂಘ ಸಮುಸ್ತೆಗಳಿಗೆ ಮಾಡುವ ಕೆಲಸ ಕಾರ್ಯಗಳು ಸೇವೆ ಎಂದು ಗುರುತಿಸಿಕೊಂಡಿದ್ದರು ಅನ್ಯ ಹಲವಾರು ಕ್ಷೇತ್ರಗಳು ಮುಂದುವರಿಯುತಿರುವ ಸಮಾಜದಲ್ಲಿ ನಮ್ಮ ಗೋಚರಕ್ಕೆ ಬರುತದೆ. ದಾನ ಮತ್ತು ಸೇವೆ ಮಾಡುವವರ ಪಟ್ಟಿಯಲ್ಲಿ ನಮ್ಮ ಕಣ್ಣಿಗೆ ಕಾಣುವುದು ಆರ್ಥಿಕ ಶ್ರೀಮಂತರು ಮಾತ್ರ ಆದರೂ ನಿಜ ಅರ್ಥದಲ್ಲಿ ಆಂತರಿಕ ಶ್ರೀಮಂತರು ಮೊದಲ ಸಾಲಿನಲ್ಲಿರುವುದು ವಾಸ್ತವ – ಮರ್ಮವನ್ನು ಅರಿತು ಮುನ್ನಡೆದಾಗ ಅರ್ಥಪೂರ್ಣ ಬದುಕು ನಮ್ಮದಾಗುತದೆ.
ನಾವು ನಮ್ಮ ಜನನದ ಮೂಲವನ್ನು ಅರಿತಾಗ ಎಲ್ಲಿ ಯಾರಿಗೆ ಹೇಗೆ ಸೇವೆ ಮಾಡಬೇಕೆಂಬ ಅರಿವು ನಮಗೆ ಆಗುತದೆ.
ಪ್ರತಿಯೊಬ್ಬರೂ ತಮ್ಮ ಮೂಲದ ಬಗ್ಗೆ ಅವಲೋಕಿಸಿದಾಗ – ಒಂದು ತಲೆಮಾರಿಗೆ ಎರಡು , ಎರಡು ತಲೆಮಾರಿಗೆ ನಾಲ್ಕು , ಮೂರೂ ತಲೆಮಾರಿಗೆ ಎಂಟು – ಇದೆ ರೀತಿಯಲ್ಲಿ ಪ್ರತಿ ತಲೆಮಾರಿಗೆ ಎರಡರಿಂದ ಗುಣಿಸಿದಾಗ ಹತ್ತು ತಲೆಮಾರಿಗೆ ೧೦೨೪ – ಇಪ್ಪತ್ತು ತಲೆಮಾರಿಗೆ ಸುಮಾರು ೧೦ ಲಕ್ಷ್ಯದಿಂದ ಮಿಗಿಲಾದ ಮಂದಿ -ನಾವು ಈ ಪ್ರರಂಚಕ್ಕೆ ಬರಲು , ಅವರು ಮಾಡಿದ ತ್ಯಾಗ ಸೇವೆ ಬಲಿದಾನದ ಫಲ. ಒಂದು ತಲೆಮಾರಿಗೆ ೩೦ ವರುಷ ಎಂಬುದು ಗೂಗಲ್ ಹುಡುಕಾಟದಿಂದ ಸಿಕ್ಕಿದ ಉತ್ತರದಿಂದ ೨೦ ತಲೆಮಾರಿಗೆ ಕೇವಲ ಬೇಕಾಗಿರುವುದು ೬೦೦ ವರುಷಗಳು ಮಾತ್ರ ಎಂಬುದನ್ನು ಗಣನೆಗೆ ತೆಗೆದುಕೊಂಡಾಗ ನಾವು ನಮ್ಮ ಸುತ್ತ ಮುತ್ತ ಇರುವ ಜೀವರಾಶಿಗಳಲ್ಲಿ ಮಾನವ ಕುಲವನ್ನು ಸೇರಿಸಿ ನಮ್ಮ ಹಿರಿಯರನ್ನು ಕಾಣುವ ಅನಿವಾರ್ಯತೆ ಇರುತದೆ. ಒಟ್ಟಿನಲ್ಲಿ ಒಂದೇ ಮಾತಿನಲ್ಲಿ ಹೇಳುವುದಾದರೆ ಜೀವರಾಶಿಗಳಲ್ಲಿ ಪ್ರಕೃತಿಯಲ್ಲಿ ದೇವರನ್ನು ಕಾಣುವ ಅತಿ ಶ್ರೇಷ್ಠ ಬದುಕು ಮುನ್ನಡೆಸಬೇಕು.ಈ ದೃಷ್ಟಿಕೋನದಲ್ಲಿ ಬದುಕಿನ ಮರ್ಮವ ಅರಿತು ಸೇವಾ ಒಕ್ಕೂಟವೆಂಬ ಸೂತ್ರವನ್ನು ಬದುಕಿನ ಸಕಲ ಕಾರ್ಯ ಕ್ಷೇತ್ರದಲ್ಲಿ ಅಳವಡಿಸಿದಾಗ ಕನಸಿನ ಸ್ವರ್ಗ ನಮ್ಮದಾಗುತದೆ.