೧. ಪ್ರತಿ ದೇವಾಲಯಕ್ಕೆ ಒಂದು ದೇವಾಲಯ ಸೇವಾ ಒಕ್ಕೂಟ ಅತ್ಯಗತ್ಯ
೨. ಪ್ರತಿ ಒಕ್ಕೂಟ -ಅಧ್ಯಕ್ಷ , ಸಂಚಾಲಕ , ಉಪಾಧ್ಯಕ್ಷ , ಕಾರ್ಯದರ್ಶಿ , ವರದಿಗಾರ – ಎಂಬ ಐದು ವ್ಯಕ್ತಿಗಳಿಂದ ಚಾಲನೆ
೩. ದೈವಾಲಯ ಸೇವಾ ಒಕ್ಕೂಟ ರಚಿಸಿ ಅನುಷ್ಠಾನ
೪. ದೇವಾಲಯ ಮಹಿಳಾ ಸೇವಾ ಒಕ್ಕೂಟ ರಚಿಸಿ ಅನುಷ್ಠಾನ
೫. ವೃತ್ತಿವಾರು ಮತ್ತು ಜಾತಿವಾರು ಸೇವಾ ಒಕ್ಕೂಟ ರಚನೆ ಅನುಷ್ಠಾನಕ್ಕೆ ಆದ್ಯತೆ
೬. ಪ್ರತಿ ಕುಟುಂಬ ಸೇವಾ ಒಕ್ಕೂಟಕ್ಕೆ ಒತ್ತು
೭, ಪ್ರತಿ ವ್ಯಕ್ತಿಗಳನ್ನು (ಮೃತ ವ್ಯಕ್ತಿಗಳನ್ನು ಸೇರಿಸಿ ) ಜಾಗತಿಕ ಪ್ರಕಟಣೆ ಉಚಿತ – ೨೫ ಪದಗಳ ಮಿತಿ – ಭಾವ ಚಿತ್ರ ಸಹಿತ ಯಾ ರಹಿತ – ಸೇವಾ ಶುಲ್ಕದೊಂದಿಗೆ ಹೆಚ್ಚಿನ ಸೌಲಭ್ಯ
೮, ಪ್ರತಿಯೊಬ್ಬರಿಗೆ ಸೇವಾ ಒಕ್ಕೂಟ ರಚಿಸಿ ಮುನ್ನಡೆಸಲು ವೇದಿಕೆ ಉಚಿತ – ಸೇವಾ ಶುಲ್ಕ ಪ್ರತ್ಯೇಕ
೯. ವಿದ್ಯಾರ್ಥಿಗಳ ಸೇವಾ ಒಕ್ಕೂಟ ಅನಿವಾರ್ಯ – ಸ್ವಾರ್ಥ ಪ್ರಪಂಚಕ್ಕೆ ಇತಿಶ್ರೀ ಹಾಡಲು
೧೦. ಕನಿಷ್ಠ ತಿಂಗಳಿಗೊಂದು ಧಾರ್ಮಿಕ ಸಾಮಾಜಿಕ ಆರ್ಥಿಕ ಕಾರ್ಯಕ್ರಮಗಳ ಸಂಯೋಜನೆ
೧೧. ಮನದ ಹಸಿವು ನೀಗಿಸುವ ದೇವಾಲಗಳನ್ನಾಗಿ ಮಾಡುವ ದೃಢ ಸಂಕಲ್ಪ
೧೨. ನಮ್ಮನ್ನು ನಾವು – ಜೊತೆಗೆ ನಮ್ಮ ಹಿರಿಯರಿಗೂ ಆನ್ಲೈನ್ ಬದುಕು ಕಲ್ಪಿಸೋಣ
೧೩. ನಾವು ಸೃಷ್ಟಿಮಾಡಿದ ಜಾತಿ ಮತ ಭೇದ ಮೆಟ್ಟಿ ನಿಂತು ಮಾನವ ಬದುಕಿನತ್ತ ಪಯಣ ನಮ್ಮದಾಗಲಿ
೧೪. ದೇವಾಲಯಗಳ ಮೂಲ ಸ್ವರೂಪದತ್ತ ಗಮನ ಹರಿಸಿ – ಪ್ರಸ್ತುತ ಬದುಕಿನಲ್ಲಿ ಅಳವಡಿಸೋಣ
೧೫. ಭಕ್ತರು ಮತ್ತು ದೇವಾಲಯದ ಸಂಬಂಧ ವೃದ್ಧಿಗೆ ನೂತನ ಆವಿಸ್ಕಾರದತ್ತ ದಾಪುಗಾಲು ನಮ್ಮದಾಗಲಿ
೧೬. ಪರಿಪೂರ್ಣ ಶಿಕ್ಷಣ – ದೇವರ ಅರಿವು ಮತ್ತು ಬದುಕಿನ ಅರಿವು – ಇದು ದೇವಾಲಯದಿಂದ ಮಾತ್ರ ಸಾಧ್ಯವೆಂದು ಸಾದಿಸಿ ತೋರಿಸೋಣ
೧೭. ಪ್ರಸುತ ದರೋಡೆ ಮತ್ತು ವ್ಯಾಪಾರ ಬದುಕನ್ನು ಪರಿವರ್ತಿಸಿ ಸೇವಾ ಬದುಕಿನತ್ತ ಮಾನವರ ಬದುಕು ಸಾಗಿಸಲು ಭಗೀರಥ ಪ್ರಯತ್ನ ಸಾಗಲಿ
೧೮. ದೇವರಾಗಿ ಹುಟ್ಟಿದ ಮಗು ದಾನವರನ್ನಾಗಿ ಮಾಡುವ ಪ್ರಸ್ತುತ ಜಗತ್ತನ್ನು ಬದಲಿಸಿ – ಮಾನವರು ಮತ್ತು ದೇವಾ ಮಾನವರನ್ನು ಮಾತ್ರ ತಯಾರು ಮಾಡುವ ದಾರಿ ತೋರಿಸುವ ದೃಢ ಅಚಲ ಸಂಕಲ್ಪದೊಂದಿಗೆ ಅನುಷ್ಠಾನ – ದೇವಾಲಯ ಸೇವಾ ಒಕ್ಕೂಟದ ಉದಯ – ಸಾದಿಸಿ ತೋರಿಸೋಣ