ಪ್ರಜಾ ಪದ್ದತಿಯಲ್ಲಿ ಅರಸು
ಪ್ರಜಾ ಪದ್ಧತಿ ಮಾನವ ಸೃಷ್ಟಿ – ಅರಸು ಪದ್ಧತಿ ದೇವರ ಸೃಷ್ಟಿ . ವಿಬಿನ್ನ ಕಾರಣದಿಂದ ಅರಸು ಪಟ್ಟ ಅಲಂಕರಿಸಿದವರು ನಮ್ಮ ದೇಶದಲ್ಲಿದ್ದಾರೆ. ಆತನ ಬದುಕು ಪ್ರಜೆಗಳಲ್ಲಿರುವ ದೈವ ದೇವರ ತೊಂದರೆ ತಪ್ಪಿಸಲು ಇರುವ ಆಯುಧ ಎಂದು ಅರಿತವರು ಬಹುಪಾಲು, ಬೆರಳೆಣಿಕೆ ಭಕ್ತರು ಅರಸು ವ್ಯಾಪ್ತಿಯ ಪ್ರತ್ಯಕ್ಷ ದೇವರೆಂದು ಜ್ಞಾನದ ಕಣ್ಣು ತೆರೆದು ನೋಡಿದಾಗ ಅರಿತವರು ಇದ್ದಾರೆ(ಮೊದಲಿನವರಿಗೆ ಚಟ್ಟ – ಎರಡನೇಯವರಿಗೆ ಪಟ್ಟ ). ಅರಸು ಪಟ್ಟ ಅಲಂಕರಿಸಿದ ವ್ಯಕ್ತಿಯೊಬ್ಬ ಏನು ಮಾಡಿದರೆ ಅರಸನಾಗಬಲ್ಲ.
೧ . ಅರಸು ಪದ್ದತಿಯ ಮರ್ಮವನ್ನು ಜನರಿಗೇ ಮನದಟ್ಟು ಆಗುವಂತೆ ತಿಳಿಸುವುದು ಮೊದಲ ಕೆಲಸ
೨. ಅರಸು ವ್ಯಾಪ್ತಿಯ ಜನರ ಎಸ್ಟೊ ತಲೆಮಾರುಗಳ ಹಿಂದಿನ ನಮ್ಮ ಪೂರ್ವಜರ ಇಚ್ಛೆ ದೈವ ದೇವರ ಅನುಗ್ರದಿಂದ ಯಜಮಾನ ಆಯ್ಕೆ ಅದುವೇ ಅರಸು ಪಟ್ಟ
೩. ಅರಸು ವ್ಯಾಪ್ತಿಯ ಜನರು ಯಾವುದೇ ಜಾತಿ ಧರ್ಮಕ್ಕೆ ಸೇರಿದ್ದರು ಪ್ರಕೃತಿ ಮುನಿಯದಿರಲು ಅರಸನ ಅಭಯ ಆಶೀರ್ವಾದ ಅನಿವಾರ್ಯ
೪. ಅರಸ ಮಾನವರನ್ನು ಮಾತ್ರವಲ್ಲ ಜೀವರಾಶಿಗಳಿಗೂ ಕೂಡ ಕಿಂಚಿತು ಕೇಡು ಬಯಸದೆ ನಡೆದಾಡುವ ದೇವರಾಗಿರಬೇಕು
೫. ಪ್ರತಿಯೊಬ್ಬರು ತಮ್ಮ ದುಡಿಮೆಯ ಒಂದು ಭಾಗವನ್ನು ಅರ್ಪಿಸಿದರೆ ಮಾತ್ರ ದೇವರ ಮತ್ತು ಅರಸರ ಅನುಗ್ರಹ ಸಾಧ್ಯ
೬. ಪ್ರಜಾ ಪದ್ದತಿಯಲ್ಲಿ ತಪ್ಪು ಮಾಡಿದವನಿಗೆ ಶಿಕ್ಷೆ ಕೊಡುವುದು ನ್ಯಾಯಾಲಯ , ಅರಸು ಪದ್ದತಿಯಲ್ಲಿ ದೈವ ಶಿಕ್ಷೆ ಕೊಡುವುದು , ಯಾರು ಎಲ್ಲಿದ್ದರು ತಪ್ಪಿತಸ್ಥನ ಹುಡುಕಿ ಶಿಕ್ಷೆ ಕೊಡುತ್ತದೆ. ಇಲ್ಲಿ ಕನಿಷ್ಠ ವೆಚ್ಚ, ಅಲ್ಪ ಸಮಯ,ಯಾವುದೇ ಜಂಜಾಟ ತೊಂದರೆ ಇಲ್ಲ, ದೂರು ಕೊಟ್ಟರೆ ಮಿಕ್ಕ ಕೆಲಸ ಅದುವೇ ನೋಡಿಕೊಳ್ಳುತ್ತದೆ.
೭. ಅರಸು ಪಟ್ಟದಲ್ಲಿ ಕೂತ ವ್ಯಕ್ತಿ ತನ್ನ ದುಡಿಮೆಯ ಒಂದು ಪೈಸೆ ವೆಚ್ಚ ಮಾಡಿದರು ಅದರ ಪಾಪದ ಹೊರೆ ಪ್ರಜೆಗಳ ಮೇಲಿರುತ್ತದೆ. ಯಾಕೆಂದರೆ ಆತನನ್ನು ಸಂಸಾರ ಬಿಡಿಸಿ, ನೀನು ನಮಗೆ ಯಜಮಾನನಾಗಿ ಬೇಕೆಂದು ಅದಿಕಾರದ ಪಟ್ಟದಲ್ಲಿ ಕೂರಿಸಿ ವಚನ ಭ್ರಷ್ಟರಾಗುವುದು ಅಲ್ಲಿಯ ಕ್ಷೇತ್ರಕ್ಕೆ.
೮. ಪ್ರಜಾ ಪದ್ದತಿಯ ಈಗಿನ ವ್ಯವಸ್ಥೆ ಮುಕ್ತ ಅರಸರ ಅಭಿಪ್ರಾಯಕ್ಕೆ ಮನ್ನಣೆ ಕೊಡುವ ಸ್ಥಿತಿಯಲ್ಲಿದ್ದರೆ ಅಲ್ಲಿಯ ಆಡಳಿತ ದೇವರ ಆಡಳಿತ – ಮನೆಯಲ್ಲಿ ಕೂತು, ಮಾರ್ಗದ ಬದಿಯಲ್ಲಿ ಕೂತು ಟೀಕೆ ಟಿಪ್ಪಣಿ ಮಾಡುವವರು ದೇವರ ಕೃಪೆಗೆ ವಂಚಿತರಾಗಿ ಬದುಕಿಗೆ ತಮಗೆ ತಾವೇ ಮುಳ್ಳಾಗುತಾರೆ.
೯. ಯಾವ ಸ್ಥಾನ ಮಾನ ಬದ್ಧತೆ ಅರಸರ ಕಾಲದಲ್ಲಿ ಇತ್ತೊ , ಅದು ವಾಸ್ತವವಾದರೆ ಮಾತ್ರ ಸುಖ ಶಾಂತಿ ನೆಮ್ಮದಿ ನೆಲಸಲು ಸಾಧ್ಯ ನಾಟಕ ನೋಡಲು ಮಾತ್ರ .
೧೦. ದೈವ ಮುನಿದರೆ ಯಾರಿಗೂ , ಎಲ್ಲಿಯೂ ಉಳಿಗಾಲವಿಲ್ಲ ಎಂಬ ಅಂದಿನ ಮಾತು ಇಂದಿನ ಮುಂದಿನ ಮಾತಗಳು ಅರಸರಿಂದ ಮಾತ್ರ ಸಾಧ್ಯ
೧೧. ಅರಸು ಪಟ್ಟಕ್ಕೆ ಬೆನ್ನು ಹಾಕಿ ಕೂತವರಿಗೆ ದೈವ ಬೆನ್ನು ಹಾಕಿ ಕೂತಿದೆ – ನೀವು ಮುಖ ತಿರುಗಿಸಿ – ದೈವ ಮುಖ ತಿರುಗಿಸಿ ನಿಮ್ಮನ್ನು ಕಾಯುತ್ತದೆ
೧೨. ಅರಸರು ಮನಕ್ಕೆ ಮನೆಗೆ ಬಂದಿದ್ದಾರೆ – ಕ್ಷೇತ್ರದ ದೈವ ದೇವರೊಂದಿಗೆ ಬಂದಿದ್ದಾರೆ – ಒಂದೇ ತಾಯಿಯ ಮಕ್ಕಳಂತೆ ಸುಖ ಶಾಂತಿ ನೆಮ್ಮದಿಯಿಂದ ಬಾಳೋಣವೆಂಬ ಕರೆಯೋಲೆಯೊಂದಿಗೆ – ದೇವರ , ದೇವಾ ದೂತರ ,ಬಂದು ಮಿತ್ರರ ಮನದಾಳಕ್ಕೆ ಸ್ಪಂದಿಸೋಣ – ಆಗಲೇ ಸ್ವರ್ಗ ನಮ್ಮ ನೆಲ .