ಮಕ್ಕಳನ್ನು ಹೆತ್ತವರನ್ನು ಮಕ್ಕಳಂತೆ ಸಾಕುತಿಹರು ಅಂದು
ಮಕ್ಕಳನ್ನು ಮಾತ್ರ ಮಕ್ಕಳಂತೆ ಸಾಕುತಿಹರು ಇಂದು
ಅಂದು ಇಂದು ಆಗದಿದ್ದೊಡೆ ಮಸಣಕ್ಕೆ ದಾರಿಯೆಂದ ——————————– ಅವ್ಯಕ್ತ
ಬದುಕಲ್ಲಿ ಶಾಲಾ ಕಾಲೇಜುಗಳು ಸಮಾನತೆ ಬೋಧಿಸುತಿಹರು
ಬದುಕಲ್ಲಿ ದೈವಸ್ಥಾನ ದೇವಸ್ಥಾನ ಅಸಮಾನತೆ ಮಾಡುತಿಹರು
ಪರಿಹಾರ ಮಡದಿದ್ದೊಡೆ ನಮ್ಮ ಕ್ಷೇತ್ರ ಇತಿಶ್ರೀಯೆಂದ ——————————— ಅವ್ಯಕ್ತ
ದೇವರ ಅಂಗಾಂಗ ಬೇರೆ ಬೇರೆ ಜಾತಿಯವರಲ್ಲಿ ಇಹುದು
ದೇವಾಲಯ ಸೇವಾ ಒಕ್ಕೂಟ ಜೋಡಣೆ ಕೆಲಸದಿ ತೊಡಗಿಹುದು,
ಮುಂದಿನ ಜನಾಂಗಕ್ಕೆ ದೇವರ ಮೂಲ ಸ್ವರೂಪ ಕಾಣುವುದಯ್ಯ ——————————————– ಅವ್ಯಕ್ತ