ಜಾತಿ ವೇಷ ಧರಿಸಿದ ಮಾನವ
ಪ್ರಾಣಿ ವೇಷ ಧರಿಸಿದ ಮಾನವ
ದೇವರಿಗೆ ಜಾತಿಗೆ ಕೇಡು ಬಗೆದಂತೆ —————————————– ಅವ್ಯಕ್ತ
ವಿದ್ಯೆ ಕಲಿಸುವ ವಿದ್ಯಾ ಸಂಸ್ಥೆಗಳು ಬಹುಪಾಲು
ಬುದ್ದಿ ಕಲಿಸುವ ವಿದ್ಯಾ ಸಂಸ್ಥೆಗಳು ನಗಣ್ಯ
ವಿದ್ಯೆ ಬುದ್ದಿ ಕಲಿಸುವ ಸಂಸ್ಥೆಗಳ ತೆರೆಯೆಂದ ————————– ಅವ್ಯಕ್ತ
ಅಮೇರಿಕಾ ಇಂಗ್ಲೆಂಡ್ ಜಪಾನ್ ವಿದ್ಯೆ ನಮಗೆ ಕೊಡಿ
ವಿದ್ಯೆ ಜೊತೆಗೆ ಬದುಕು ಪ್ರಾರಂಭಿಸಿ ನೆಮ್ಮದಿ ಬಾಳಲ್ಲಿ
ನಮ್ಮಲ್ಲಿಹ ವಿದ್ಯೆ ಸಮಾಜಕ್ಕೆ ಆರ್ಥಿಕ ಹೊರೆ ತಪ್ಪಿಸೆಂದ —————— ಅವ್ಯಕ್ತ