ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸ್ವಸ್ತಿ |ಶ್ರೀ ಕ್ರೋಧಿ ನಾಮ ಸಂವತ್ಸರ, ಧನು ಮಾಸ 25, 2025ನೇ ಜನವರಿ 9ನೇ ಗುರುವಾರದಂದು ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ವಿಜೃಂಭಣೆಯಿಂದ ಜರಗಲಿದೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ವೈದಿಕ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕೈಗೊಳ್ಳಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಿಸಿದೆ.
ಕಾರ್ಯಕ್ರಮಗಳ ವಿವರ:
08-01-2025 ಬುಧವಾರ
ಬೆಳಗ್ಗೆ 10:00 ಗಂಟೆ: ಊರ ಭಕ್ತಾದಿಗಳಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ
09-01-2025 ಗುರುವಾರ
ಬೆಳಗ್ಗೆ 9:00 ಗಂಟೆ: ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಕಲಶ ಪ್ರತಿಷ್ಠೆ
ಗಂಟೆ 11:30: ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಕಲಶಾಭಿಷೇಕ
ಮಧ್ಯಾಹ್ನ 12:30: ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ
ಪ್ರಧಾನ ಸೂಚನೆಗಳು:
08-01-2025 ಬುಧವಾರ ಬೆಳಗ್ಗೆ 9:00 ಗಂಟೆಗೆ ನಿಮ್ಮ ಮನೆ ಬಳಿ ಬರುವ ವಾಹನದ ಮೂಲಕ ಹಸಿರು ಹೊರೆ ಕಾಣಿಕೆ ಸಮರ್ಪಿಸಲು ಭಕ್ತಾದಿಗಳನ್ನು ವಿನಂತಿಸಲಾಗುತ್ತದೆ.
ವಾರ್ಷಿಕ ಮಹೋತ್ಸವದ ಪ್ರಯುಕ್ತ ಭಕ್ತಾದಿಗಳು ಸ್ವಇಚ್ಛೆಯಿಂದ ನೀಡುವ ತನು-ಮನ-ಧನ ಸಹಾಯವನ್ನು ಕೃತಜ್ಞತೆಯಿಂದ ಸ್ವೀಕರಿಸಲಾಗುವುದು.
ದೇವಸ್ಥಾನದ ಅಭಿವೃದ್ಧಿಗಾಗಿ ರೂ. 1000/-ಕ್ಕಿಂತ ಹೆಚ್ಚು “ವಾರ್ಷಿಕ ದೇಣಿಗೆ” ನೀಡುವ ಮೂಲಕ ಸಹಕರಿಸುವಂತೆ ವಿನಂತಿ.
ಭಕ್ತಾದಿಗಳು ದೇವಸ್ಥಾನಕ್ಕೆ ಬರುವಾಗ ತುಳಸಿ ದಳ, ಹೂವು, ಹಿಂಗಾರ ಮತ್ತು ಕೇಪುಳ ಹೂವುಗಳನ್ನು ತರಲು ವಿನಂತಿಸಲಾಗಿದೆ.
08-01-2025 ಬುಧವಾರ ಬೆಳಗ್ಗೆ 10:00 ಗಂಟೆಯಿಂದ ದೇವಸ್ಥಾನದಲ್ಲಿ ನಡೆಯುವ ಶ್ರಮದಾನದಲ್ಲಿ ಊರ ಪ್ರತಿಯೊಬ್ಬರು ಭಾಗವಹಿಸಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಭಕ್ತಾದಿಗಳು ಈ ಮಹತ್ವದ ಧಾರ್ಮಿಕ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.