ಹಣ ಸಂಪಾದನೆ ಪುಣ್ಯ ಸಂಪಾದನೆ ವಿದ್ಯೆ ಇಲ್ಲದಿರೆ
ಹಣ ಸಂಪಾದನೆ ಪುಣ್ಯ ಸಂಪಾದನೆ ದೇಗುಲ ಇರುತಿರೆ
ವಿದ್ಯಾ ದೇಗುಲ ಬರಿದಾಗಿ ದೇವ ದೇಗುಲ ತುಂಬುತಿಹುದು —————————————- ಅವ್ಯಕ್ತ
ಮಾನವ ಸ್ವಾರ್ಥ ಮುಗಿಲು ಮುಟ್ಟಿದೆ
ಮಾನವರ ತ್ಯಾಗ ಪಾತಾಳಕ್ಕೆ ಇಳಿದಿದೆ
ಮಾನವರಲ್ಲಿ ಸ್ವಾರ್ಥ ತ್ಯಾಗ ಬೇಕೆಂದ ———————————————————- ಅವ್ಯಕ್ತ
ಮಠಾಧಿಪತಿಗಳ ದುರ್ಬಳಕೆ ಮಾಡುತಿಹರು ಸ್ವಾರ್ಥಿಗಳು
ಮಠಾಧಿಪತಿಗಳ ಸದ್ಬಳಕೆ ಮಾಡುತಿಹರು ತ್ಯಾಗಿಗಳು
ಮಠಕ್ಕೊಂದು ತ್ಯಾಗಿಗಳ ಸೇವಾಒಕ್ಕೂಟ ಬೇಕೆಂದ ——————————————— ಅವ್ಯಕ್ತ