Avyaktha vachanagalu – Daiva

Share this

ದೈವಕ್ಕೆ ಅರಮನೆ ಅಂದು
ದೈವಕ್ಕೆ ಸೆರೆಮನೆ ಇಂದು
ದೈವಕ್ಕೆ ಮನಮಂದಿರ ಮುಂದು ……………………..ಅವ್ಯಕ್ತ

ದೈವದ ಮರ್ಮವ ಅರಿಯದೆ
ದೈವಕ್ಕೆ ನೇಮವ ಮಲ್ಪರೆ
ದೈವದ ಕೋಪಕ್ಕೆ ತುತ್ತಾಗುತಿಹರು ………………….ಅವ್ಯಕ್ತ

ಧನ ಪಿಶಾಚಿ ದೈವಕ್ಕೆ ನೇಮ ಮಲ್ಪರೆ
ಧನ ಪಿಶಾಚಿ ದೇವರಿಗೆ ಪೂಜೆ ಮಲ್ಪರೆ
ದೈವ ದೇವರು ಕ್ಷೇತ್ರದಿಂದ ಓಡಿ ಹೋಗುತಿಹರು ……….. ಅವ್ಯಕ್ತ

ಮಾನವತೆ ಮರೆತು
ದೈವಕ್ಕೆ ಮೊರೆಯಿಡೆ
ದೈವ ರಕ್ಷಿಸುವುದೆಂತು ………………………...ಅವ್ಯಕ್ತ

ದೇವರು ಬರೆದ ಬರಹ
ದೈವ ಓಧಿ ಹೇಳಿಹ
ಪಾಲಿಪುದು ಮನುಜ ಧರ್ಮವೆಂದ ………………...ಅವ್ಯಕ್ತ

See also  Swamiji Jain Mutt -Moodabidri

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you