Women Bulletin-ಮಹಿಳಾ ಬುಲೆಟಿನ್

ಶೇರ್ ಮಾಡಿ

ಮಹಿಳೆಗೆ ಅಂದಿನಿಂದ ಇಂದಿನವರೆಗೂ ಯಾವ ಸ್ಥಾನ ಮಾನ ಸಮಾಜದಿಂದ ದೊರಕಬೇಕಾಗಿರುವುದು ಸಿಗುತಿಲ್ಲ. ಅದು ಬರಿ ಮರೀಚಿಕೆಯಾಗಿ ಮುಂದೆ ಮುಂದೆ ಸಾಗುತ್ತಾ ಇದೆ. ಇದಕ್ಕೆ ಕಾರಣ ಯಾರು ? ಸರಿ ಮಾಡುವುದು ಹೇಗೆ ? ಮುಂತಾದ ನೂರಾರು ಪ್ರಶ್ನೆಗಲು ಪ್ರಶ್ನೆಗಳಾಗಿ ಉಳಿಯಬಾರದು – ಸಕಲ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಾವು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಮುಂದಿಡುತಿದ್ದೇವೆ.
ಅರಸರ ಕಾಲವನ್ನು ಅವಲೋಕಿಸಿದಾಗ – ಬಹುಪಾಲು ಅರಸರು ಪುರುಷರೇ ಆಗಿದ್ದರು.ಪ್ರಸ್ತುತ ಸಮಾಜವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದಾಗಲೂ ಶೇಕಡಾ ೯೦ ಭಾಗವನ್ನು ಪುರುಷರು ತನ್ನದಾಗಿಸಿಕೊಂಡಿದ್ದು ಉಳಿದ ಭಾಗ ಮಾತ್ರ ಮಹಿಳೆಗೆ ದೊರಕಿರುವುದು, ಪ್ರಪಂಚದ ಅತಿ ಮುಖ್ಯ ಹುದ್ದೆಗಳಾದ – ಪ್ರಧಾನಿ , ಅಧ್ಯಕ್ಷ ……………….ಇತ್ಯಾದಿಗಳು ಕೂಡ ಪುರುಸರೇ ತಮ್ಮದಾಗಿಸಿಕೊಂಡಿರುವುದು ಖಟು ಸತ್ಯ. ವಿಶ್ವ ಮಟ್ಟದ – ಉದ್ಯಮಗಳು, ಶ್ರೀಮಂತರು ……….ಮುಂತಾದುಗಳು ೯೫ ಶೇಕಡಾ ಪುರುಷರಲ್ಲಿಯೇ ಇವೆ.
ದೇವರೊಂದಿಗೆ ಪ್ರಕೃತಿ – ಸಂತಾನಾಭಿವೃದ್ಧಿಗೆ ಹೆಣ್ಣು ಗಂಡುಗಳ ಭೇದಗಳನ್ನು ಮಾಡಿದ್ದು – ಬಹುತೇಕ ಸಂಸಾರದ ಭಾರವನ್ನು ಮಾತ್ರ ಪುರುಸರಿಗೆ, ದೈಹಿಕ ಭಾರವನ್ನು ಮಹಿಳೆಗೆ ಹೊರಿಸಿದ್ದು – ಕತ್ತೆಯ ಬಾಳು ಹೆಣ್ಣಿನ ಬಾಳು ಎನ್ನುವ ಕೆಲವು ಮಹಿಳೆಯರ ಉದ್ಘಾರ ಸಮಯೋಚಿತವು ಅರ್ತಪೂರ್ಣವೂ ಆಗಿರುವಂತೆ ಭಾಸವಾಗುತದೆ.
ತಾಯಿ ಹೆಣ್ಣು , ಸತಿ ಹೆಣ್ಣು ಆಗಿದ್ದು – ಪುರುಷರ ರಿಮೋಟ್ ಮಹಿಳೆಯಲ್ಲಿದ್ದರು ಮಹಿಳೆಯರೇ ಈ ಸ್ಥಿತಿಗೆ ಕಾರಣರೇ ಎಂಬ ಸಂದೇಹ ನಮ್ಮಲ್ಲಿದ್ದರು – ಪ್ರಕೃತಿ ಮತ್ತು ದೇವರು – ಮುಂದಿನ ಸಮಾಜದ ಬೆಳವಣಿಗೆಗಾಗಿ ಮಾಡಿರುವ ವ್ಯವಸ್ಥೆಯ ಮೂಲವನ್ನರಿತು – ಸ್ಥಾನ ಮಾನ ಗೌರವ ……….. ಸಕಲ ರೀತಿಯಲ್ಲಿಯೂ – ಒಂದೇ ನಾಣ್ಯದ ಎರಡು ಮುಖಗಳಂತೆ – ಸ್ತ್ರೀ ಪುರುಷರು ಬದುಕಿ ಬಾಳಿದಾಗ – ಪ್ರಕೃತಿಯ ಒಡೆಯ ನಿಟ್ಟುಸಿರು ಬಿಡಬಹುದು. ಇದಕ್ಕೆ ನಾವು ಬದ್ಧರಾಗಿರುತ್ತೆವೆ ಎಂಬ ದ್ರಢ ನಿರ್ಧಾರವನ್ನು ವ್ಯಕ್ತ ಪಡಿಸುತ್ತಾ – ಮುಂದಿನ ನಮ್ಮ ದಾರಿಯತ್ತ ಬೆಳಕು ಚೆಲ್ಲೋಣ
ಮಹಿಳಾ ಸಮಾಜದ ಒಕ್ಕರಳಿನ ಕೂಗು
ತಪ್ಪು ಮಾಡಿದವನಿಗೆ ಪುನಃ ಆ ರೀತಿಯ ತಪ್ಪು ಮಾಡದಂತೆ ಸತ್ಪ್ರಜೆಯನ್ನಾಗಿಸುವಂಥಹ ಶಿಕ್ಷೆ ಅನಿವಾರ್ಯ
ತಪ್ಪು ಮಾಡಿದವನಿಗೆ ೨೪ ಗಂಟೆಯೊಳಗೆ ಶಿಕ್ಷೆ ಆಗಲೇಬೇಕು. ಕಂಪ್ಯೂಟರ್ ಯುಗದ ಲಕ್ಷಣ
ನಮಗೆ ಸಮಾನತೆ ಕೊಡುವುದಾದರೆ – ಕೆಳಗಿನಿಂದ ಮೇಲಿನವರಿಗೂ ಕೊಡಿ. ಕೆಳಗೆ ಮಾತ್ರ ಬೇಡವೇ ಬೇಡ
ತಂದೆ ತಾಯಿ ಬಂದು ಬಳಗ ಒಡಹುಟ್ಟಿದವರು ಎಲ್ಲವನ್ನು ಬಿಟ್ಟು ಬರುವ ಹೆಣ್ಣಿನ ಸ್ಥಾನದಲ್ಲಿ ನಿಂತು -ಮುನ್ನಡೆಯಿರಿ
ಹೆಣ್ಣು ಮಣ್ಣಿನ ಪಾತ್ರ – ಗಂಡು ಹಿತ್ತಾಳೆ ಪಾತ್ರ – ಎಂಬ ಒಗಟು – ನಿಮ್ಮ ಕೈಯಲ್ಲಿರುವ ಆಯುಧ ಮಾತ್ರ
ಮಹಿಳೆಗೆ ಮಹಿಳೆಯೇ ದೊಡ್ಡ ವೈರಿ – ಮಹಿಳೆಯರಲ್ಲಿರುವ ವೈರತ್ವ ಕೊನೆಗೊಳ್ಳಲಿ
ಮಹಿಳೆಗೆ ತನಗೆ ತಾನೇ ವೈರಿ – ಸಂಕುಚಿತ ಚಿಂತನೆ ಮಂಥನ ಅನುಷ್ಠಾನ – ಮನೆ ವಸ್ತ್ರ ಚಿನ್ನ ಟಿ ವಿ ಮೊಬೈಲ್
ಮಹಿಳೆ ಯಾರೋ ನಿರ್ಮಿಸಿ ಕೊಟ್ಟ ಜೈಲಿನಲ್ಲಿ ತಾನೇ ಹೋಗಿ ಸೆರೆಮನೆ ವಾಸಕ್ಕೆ ಅಣಿಯಾಗುವುದು ದುರಂತ
ನನ್ನ ಬದುಕು ನನಗೆ – ಅರ್ಥೈಸಿ ಮುನ್ನಡೆಯೋಣ.
ಪ್ರತಿಯೊಬ್ಬ ಮಹಿಳಾಮಣಿಗಳು – ಈ ವೇದಿಕೆಯನ್ನು ಬಳಸಿ – ತಾನು ಯಾರು? ವ್ಯಕ್ತಿ, ವ್ಯಕ್ತಿತ್ವ, – ಏನು ಎಂತಹದು ಎಂದು ಪ್ರಪಂಚಕ್ಕೆ ಸಾರಿ ಸಾರಿ ಹೇಳೋಣ

See also  Daivaradane Bulletin - 2 - ದೈವಾರಾಧನೆ ಬುಲೆಟಿನ್ - 2

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?