Arecanut agriculture – Brief information -ಅಡಿಕೆ ಕೃಷಿ – ಸಂಕ್ಷಿಪ್ತ ಮಾಹಿತಿ

ಶೇರ್ ಮಾಡಿ

ಸಮಯ – ಶ್ರಮ – ಸಂಪತ್ತು – ಭೂಮಿ – ಸದುಪಯೋಗ ಮಾಡಿ ಗರಿಷ್ಠ ಮಟ್ಟದ ಪ್ರಯೋಜನ ಪಡೆಯಲು – ಸಕಲ ಮಾಹಿತಿಗಳನ್ನು ಎಲ್ಲ ಮೂಲಗಳಿಂದ ಪಡೆದು – ವಿಭಿನ್ನ ದೃಷ್ಟಿಕೋನಗಳಿಂದ ಪರೀಕ್ಷಿಸಿ – ಅತ್ಯುತಮವಾದುದನ್ನು ಆಯ್ಕೆಮಾಡಿದಾಗ ಬದುಕು ಅರ್ತಪೂರ್ಣವಾಗುತದೆ .
ಅಡಿಕೆ ಕೃಷಿ ಬಗ್ಗೆ ಸಂಗ್ರಹ ಮಾಹಿತಿ – ಆರಂಭ ಮಾತ್ರ – ಅಂತ್ಯವಲ್ಲ
ಅಡಿಕೆ ಗಿಡ ನಾಟಿ – ಗಿಡದಿಂದ ಗಿಡಕ್ಕೆ ೮-೯ ಅಡಿ ಪರವಾಗಿಲ್ಲ , ೯ – ೯ ಅಡಿ ಸೂಕ್ತ
ಮಂಗಳ ಅಡಿಕೆಯೇ ಸಾಕು – ಬಹು ಮಂದಿ – ಅಂಬೋಣ
ಜೂನ್ ಅಥವಾ ಜೂಲೈ ತಿಂಗಳಲ್ಲಿ ಅದೇ ವರುಷದ ಗಿಡಗಳ ನಾಟಿ ಉತ್ತಮ
೨ ಅಡಿ ಅಗಲ ೨ ಅಡಿ ಉದ್ದ ೧ ಅಡಿ ಮಣ್ಣು ಸಡಿಲಗೊಳಿಸಿ ತೊಟ್ಟೆ ಮುಳುಗುವಷ್ಟು ಹೊಂಡದಲ್ಲಿ ನಾಟಿ ಮಾಡಿ – ಸಡಿಲಗೊಳಿಸಿದ ಸ್ಥಳದಲ್ಲಿ ಬಿದ್ದ ನೀರು ಅಲ್ಲಿಯೇ ಇಂಗುವ ವ್ಯವಸ್ಥೆ ಅಗತ್ಯ
ಬಸಿ ಕಾಲುವೆ ಸಹಾಯದಿಂದ ನೀರಿನ ಮಟ್ಟವನ್ನು ಅಡಿಕೆ ತೋಟದಿಂದ ಎರಡು ಅಡಿ ಕೆಳಗೆ ನಿಲ್ಲಿಸುವುದು ಅತ್ಯಗತ್ಯ
ಹೊಳೆ, ತೋಡು – ಬದಿಗಳಲ್ಲಿ ಬಿದ್ದ ಅಡಿಕೆ ಗಿಡ – ಉತ್ತಮ ಫಸಲು ಕೊಡುವುದು ನಮಗೆ ಪಾಠ – ೬ ಇಂಚು ಕೆಳಗಿನ ಮಣ್ಣಿನಲ್ಲಿ ಸಸ್ಯಗಳಿಗಳ ಬೆಳವಣಿಗೆಗೆ ಬೇಕಾದ ಪೋಶಕಾಂಶಗಳ ಕೊರತೆ ನಮಗೆ ತಿಳಿದಿರಲಿ
ರಾಸಾಯನಿಕ ಗೊಬ್ಬರಗಳಿಂದ ಹಂತ ಹಂತವಾಗಿ ದೂರ ಸರಿಯೋಣ
ಗಿಡ ಒಂದಕ್ಕೆ ಪ್ರಥಮ ವರುಷ ೧ ಕಿಲೋ , ೨ ವರುಷ ೨ ಕಿಲೋ , ೩ ನೇ ವರುಷ ೩ ಕಿಲೋ ಕೋಳಿ ಹಿಕ್ಕೆ (ಬಳ್ಳಾರಿ) , ೪ ನೇ ವರುಷದಿಂದ ೧೦ ಕಿಲೋ ಆಡಿನ ಹಿಕ್ಕೆ ಮತ್ತು ೫ ಕಿಲೋ ಕೋಳಿ ಹಿಕ್ಕೆ – ಸ್ಥಳದ ಮಣ್ಣಿನ ಪೋಶಕಾಂಶ ಆದರಿಸಿ ಬಳಕೆ.
ಗಿಡ ಒಂದರಿಂದ ೧೦೦೦ ಅಡಿಕೆಗಳ ಗುರಿ – ಕನಿಷ್ಠ ೫೦೦ ಅಡಿಕೆ ಫಸಲು ಗಿಟ್ಟಿಸಿದರೆ ಮಾತ್ರ ಲಾಭದಾಯಕ
ಗಿಡಗಳ ಮರುನಾಟಿ (ಮದ್ಯ ಗಿಡನಾಟಿ) – ದೊಡ್ಡ ಗಿಡಗಳ ೨ ಅಡಿ ಅಂತರದಲ್ಲಿ ನಾಟಿಯಿಂದ ಪ್ರಯೋಜನಗಳು
ಗಿಡಗಳ ಗಂಟುಗಳು ಹತ್ತಿರವಿರುತದೆ – ಗಿಡಗಳಿಗೆ ಪ್ರತ್ಯೇಕ ಗೊಬ್ಬರ ಕೊಡುವ ಅವಶ್ಯಕತೆ ಇರುವುದಿಲ್ಲ – ಗಿಡಗಳು
ದೊಡ್ಡಗಿಡಗಳೊಂದಿಗೆ ಪೈಪೋಟಿಯಲ್ಲಿ ಬೆಳೆದು ಚಪ್ಪರದಂತಾಗುವುದು ತಪ್ಪುತ್ತದೆ- ಗಿಡಗಳು ಚಿಕ್ಕದಾಗಿ ಸದೃಢವಾಗಿ
ಬೆಳೆಯುವುದು ಕೊಯ್ಲಿಗೆ ಮತ್ತು ಮದ್ದು ಬಿಡಲು ಅನುಕೂಲ – ನಾಟಿ ಮಾಡಿ ೨ ಯಾ ೩ ನೇ ವರುಷದಲ್ಲಿ
ದೊಡ್ಡಮರಗಳನ್ನು ತೆಗೆದಾಗ ಉತ್ತಮ ಇಳುವರಿ ಸಾಧ್ಯತೆ – ಈ ರೀತಿ ಪ್ರಯೋಗದ ಲಾಭಪಡೆದವರು ಇದ್ದಾರೆ .
ಹಂತ ಹಂತವಾಗಿ ಕಳೆನಾಶಕ ಕಡಿಮೆ ಮಾಡುವುದು ಒಳಿತು.
ಮಿತಿ ಮೀರಿದ ಸಿಂಪರಣೆ ಮೇಲೆ ಹಂತ ಹಂತವಾಗಿ ಕಡಿತಗೊಳಿಸೋಣ
ಅಡಿಕೆ ತೋಟದ ಬದಿಗಳಲ್ಲಿ ಮರಗಳು ಸೂಕ್ತವಲ್ಲ
ಕರಾವಳಿ ಸೀಮೆಯಲ್ಲಿ ಅಡಿಕೆ ತೋಟದಲ್ಲಿ ಕರಿಮೆಣಸು ಮಾತ್ರ ಪೂರಕವಾಗಿರುವುದು ವಾಸ್ತವ – ಕೊಕೊ ಕೂಡ ಪೈಪೋಟಿ ನೀಡುತ್ತದೆ – ಗರಿಷ್ಠ ೧ ಅಡಿ ಆಳದವರೆಗೇ ಮಾತ್ರ ಮಣ್ಣು ಇದ್ದು ಕೆಳಗೆ ಶೇಡಿ ಮಣ್ಣು ಯಾ ಮೆದು ಕಲ್ಲು ಕಾರಣವಾಗಿರುತದೆ
ಘಟ್ಟ ಪ್ರದೇಶಗಳಲ್ಲಿ ಮಾತ್ರ ಬಹು ಬೆಳೆ ಪದ್ಧತಿ ಗರಿಷ್ಠ ಮಟ್ಟದ ಫಸಲು ಕೊಡಲು ಸಾಧ್ಯ
ಗಿಡಗಳಿಗೆ ಗೊಬ್ಬರ ಕೊಡುವ ಸಮಯದಲ್ಲಿ ವಿಪರೀತ ಪೋಲಾಗುವುದನ್ನು ತಪ್ಪಿಸಲು ಬೇಸಿಗೆ ಕಾಲ ಸೂಕ್ತ
ಗಿಡಗಳಿಗೆ ಕೋಳಿ ಹಿಕ್ಕೆ ಬೇಸಿಗೆ ಕಾಲದಲ್ಲಿ ಹಾಕಿದರೆ ಯಾವುದೇ ಕೆಟ್ಟ ಪರಿಣಾಮವಿಲ್ಲ – ಸಾಧಕರಿದ್ದಾರೆ.
ಕೃಷಿಕ ೫೦ ಶೇಕಡಕಿಂತ ಮಿಗಿಲಾಗಿ ಒಂದು ಬೆಳೆಯ ಅವಲಂಬನೆ ಕೆಟ್ಟ ಪದ್ದತಿಯ ಅನುಕರಣೆ
ತೋಟಕ್ಕೆ ನೀರಿಗಾಗಿ ಸ್ಪ್ರಿಂಕ್ಲರ್ ಬಳಕೆ – ಹನಿ ನೀರಾವರಿಗಿಂತ ಹೆಚ್ಚಿನ ನೀರು ಬೇಕಾಗಿದ್ದರು – ಅಧಿಪತ್ಯವನ್ನು ಸ್ಥಾಪಿಸಿರುವುದು ಪ್ರಾಣಿಗಳ ಉಪಟಳ, ನಿರಂತರ ಕಾಳಜಿ – ಇತ್ಯಾದಿಗಳಿಂದ
ಯಾವ ಪ್ರಾಣಿ ತ್ಯಾಜ್ಜಗಳಲ್ಲ್ಲಿ- ಎರಡು ಮೂರು ತಿಂಗಳು ಒಂದು ಸ್ಥಳದಲ್ಲಿ ಹಾಕಿದಾಗ ಎರೆಹುಳ ಉತ್ಪತಿಯಾದರೆ ಅದು ಸೂಕ್ತ
ಮುಂದುವರಿಯುವುದು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?