Jackfruit to Global Market – ಹಲಸಿನ ಹಣ್ಣು ಜಾಗತಿಕ ಮಾರುಕಟ್ಟೆಗೆ

ಶೇರ್ ಮಾಡಿ

ಹಲಸಿನ ಹಣ್ಣು ಮಾನವನ ಹಸಿವನ್ನು ಪೂರೈಸುವ ಆಹಾರ ವಸ್ತುಗಳಲ್ಲಿ ಪ್ರದಾನ ಪಾತ್ರ ವಹಿಸುತಿದ್ದ ಕಾಲ ಇಂದು ಬದಲಾಗಿ ಕೇವಲ ೧೦ ಶೇಕಡಾ ಮಾತ್ರ ವಿಭಿನ್ನ ವಲಯಗಳಲ್ಲಿ ಬಳಕೆಯಾಗುತಿದ್ದು – ಈ ನಿಟ್ಟಿನಲ್ಲಿ ನಿರಂತರ ಆವಿಸ್ಕಾರಗಳಾಗಿ – ಹಲಸು ನೂರಕ್ಕೆ ನೂರು ಬಳಕೆಯಾಗುವ ಸುದಿನ ಬಂದಾಗ – ಅತ್ಯಂತ ಪೋಶಕಾಂಶಗಳಿಂದ ಕೂಡಿದ ವಿಷ ರಹಿತ ಆಹಾರ ಮಾನವರಿಗೆ ಸಿಗುವುದರ ಜೊತೆಗೆ ಕೃಷಿಕನ ಅಭಿವೃದ್ಧಿಯ ವೇಗ ಇಮ್ಮಡಿಗೊಳ್ಳುತದೆ.
ಈ ಕುರಿತು ಮಾನವ ಬಂದುಗಳ ಮನ ಮಿಡಿತ – ಸಂಗ್ರಹ ಜೋಳಿಗೆಯಲ್ಲಿರುವ ವಿಷಯಗಳು ಕೆಳಗಿನಂತಿವೆ
ಹಲಸಿನ ಮರ ಅಮೂಲ್ಯವಾದುದು – ಈ ಮರ ಬೆಳೆಸಿ ಸಂರಕ್ಷಿಸುವುದು ನಮ್ಮ ಪಾಲಿನ ಕರ್ತವ್ಯ
ರಬ್ಬರ್ ಬೋರ್ಡ್ ರೀತಿಯಲ್ಲಿ ಹಲಸಿನ ಬೋರ್ಡ್ ಸ್ಥಾಪಿಸಿ – ಹೆಚ್ಚು ರುಚಿಕರವಾದ ತಳಿ ಅಭಿವೃದ್ಧಿ, ಮಾರ್ಕೆಟ್ ರಚನೆಗೆ ಒತ್ತು, ಅರಣ್ಯ ಅಭಿವೃದ್ಧಿಗೆ ಪರೋಕ್ಷ ಬೆಂಬಲ ದೊರಕಿ – ಪ್ರಕೃತಿ ಸಮತೋಲನದತ್ತ ಮುನ್ನುಗ್ಗಲು ಅವಕಾಶ
ಹಲಸಿನ ಹಪ್ಪಳ , ಚಿಪ್ಸ್ ಹೊರತು ಪಡಿಸಿ ಹಲವಾರು ಅನ್ಯ ರೀತಿಯಲ್ಲಿ ಬಳಕೆಗೆ ಯೋಗ್ಯ ಅವಕಾಶಗಳ ಪರಿಚಯ – ಗಾರ್ಮಿನ ಅಭಿವೃದ್ಧಿ ಒಕ್ಕೂಟಗಳ ವಿಶೇಷ ಕಾಳಜಿ ಗುರುತರ ಸಾಧನೆಗೆ ಪೂರಕ
ಹಣ್ಣಾಗದ ಹಲಸಿನಿಂದ – ಹೋಳಿನಿಂದ ಉಪುಗರಿ ರೂಪದ ತಿಂಡಿ , ಪದಾರ್ಥಕ್ಕೆ ಬಳಕೆ , ಇತ್ಯಾದಿ – ವ್ಯಾಪಕ ಬಳಕೆ ಸಾಧ್ಯತೆ
ಹಲಸಿನ ಹಣ್ಣಿನ ಜಾಮ್ – ಹಲಸಿನ ಹಣ್ಣಿನ ಹೋಳನ್ನು ನೀರಿನಲ್ಲಿ ಹಾಕಿ ಬೇಯಿಸಿ – ನಂತರ ಹೋಳನ್ನು ಸೋಸಿ ತೆಗೆದು – ಸಿಗುವ ದ್ರವವನ್ನು ಕುದಿಸಿ ಜೇನುತುಪ್ಪದ ರೀತಿಯಾಗುವವರಿಗೆ ಇಂಗಿಸಿದಾಗ ಸಿಗುವುದೇ ಹಲಸಿನ ಜಾಮ್ – ರಾವೇ
ಹಲಸಿನ ಹಣ್ಣಿನ ತೆರನಾದ ಖಾದ್ಯಗಳ ವ್ಯಾಪಕ ಪ್ರಚಾರಕ್ಕೆ ಒತ್ತು
ಹಲಸಿನ ಬೀಜಗಳ ಬಳಕೆ ಶೇಕಡಾ ಒಂದಕಿಂತಲೂ ಕಡಿಮೆ – ಇದನ್ನು ಗರಿಷ್ಠ ಮಟ್ಟಕ್ಕೆ ತರಲು ಚಿಂತನೆ ಮತ್ತು ಆವಿಸ್ಕಾರ
ಒಂದು ಹಲಸಿನ ಹಣ್ಣಿನಿಂದ ಒಂದರಿಂದ ಐದು ಕಿಲೋಗೆ ಮಿಗಿಲಾಗಿ ಬೀಜ ಸಿಗುತಿದ್ದು – ಅದನ್ನು ಸರಿಯಾಗಿ ಒಣಗಿಸಿ ತೇವಾಂಶ ಹೀರಿಕೊಳ್ಳದ ರೀತಿಯಲ್ಲಿ ಪ್ಯಾಕ್ ಮಾಡಿದಾಗ ದೀರ್ಘ ಬಾಳಿಕೆ ಬರುವುದರಿಂದ ಹಲಸಿನ ಬೀಜದ ಮಾರ್ಕೆಟಿಗೆ ಚಿಂತನ – ಮಂಥನ – ಅನುಷ್ಠಾನದ ಅವಶ್ಯಕತೆಯಿದೆ
ಹಲಸಿನ ಕಾಯಿಯ ಹೋಳಿನಿಂದ ಮಾಡುವ ಉಪ್ಪಡು ಪಚ್ಚಿರ್ ವ್ಯಾಪಕ ಬೇಡಿಕೆಯಿರುವುದನ್ನು ಸಮರ್ಥ ಬಳಕೆ. ಪ್ರತಿ ಹಳ್ಳಿಯಲ್ಲಿಯೂ ಕೂಡ ಇದಕ್ಕೆ ಅವಕಾಶವಿರುವುದನ್ನು ಉಪಯೋಗಿಸೋಣ
ಹಲಸಿನ ಹಣ್ಣಿನ ದಾಸ್ತಾನಿಗಾಗಿ ಹವಾನಿಯಂತ್ರಣ ಕೊಠಡಿಗಳ ರಚನೆಗೆ ಕೋರಿಕೆ ಸಲ್ಲಿಸೋಣ
ಒಂದು ಹಲಸಿನ ಹಣ್ಣು – ಒಂದು ಹಲಸಿನ ಬೀಜ ಉಅಪಯೋಗಕ್ಕೆ ಬರದೇ ಹೋದರೆ – ನಮ್ಮ ವೈಫಲ್ಯತೆ
ಹಲವಾರು ರೋಗ ರುಜಿನಗಳಿಗೆ ಸಮರ್ಪಕ ಮದ್ದು ಹಲಸಿನ ಹಣ್ಣು ಎಂಬುದು ದ್ರಢಪಟ್ಟಿದೆ – ಅದನ್ನು ಬಳಸೋಣ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?