Beedu bulletin – ಬೀಡು ಬುಲೆಟಿನ್

ಶೇರ್ ಮಾಡಿ

ಬೀಡು ಬುಲೆಟಿನ್
ಬೀಡು – ಮೂಲ ಅರಸರು ಆಡಳಿತ ಮಾಡಿಕೊಂಡು ಬರುತಿದ್ದರು ಎಂದು ಕೆಲವೊಂದು ಮೂಲಗಳಿಂದ ತಿಳಿದು ಬಂದ ವಿಚಾರ. ಈ ಅರಸರಿಗೆ ಅವರವರ ಆಳ್ವಿಕೆ ವ್ಯಾಪ್ತಿಗೆ ಅನುಗುಣವಾಗಿ ಸೀಮೆಗುತ್ತುಗಳು ಯಾ ಗುತ್ತುಗಳು ಇರುತಿದ್ದವು. ಸೀಮೆಗುತ್ತುಗಳ ಕೆಳಗೆ ಗುತ್ತುಗಳು , ಗುತ್ತುಗಳ ಆಡಳಿತಕ್ಕೆ ಒಳಪಟ್ಟು ಬಾರಿಕೆಗಳನ್ನು ಮಾಡಿಕೊಂಡು ಅರಸರು ತಮ್ಮ ಆಡಳಿತವನ್ನು ಲೋಪದೋಶ ಮುಕ್ತವಾಗಿ ನಡೆಸಿಕೊಂಡು ಬರುತಿದ್ದರು ಎನ್ನುವುದಕ್ಕೆ ಮಾನವರು ಬಾಯಿಮಾತಿನಿಂದ ಹೇಳುವ ವಿಚಾರಗಳಿಂದ ತಿಳಿದು ಬರುತದೆ.
ಅರಸರು ಸಾಮಂತ ಅರಸರು ಸೀಮೆ ಅರಸರು – ಗುತ್ತು ಸೀಮೆ ಗುತ್ತು – ಬಾರಿಕೆ – ಇತ್ಯಾದಿ ವಿಷಯಗಳು ದೈವಾರಾಧನೆ ವಿಷಯಕ್ಕೆ ಬಂದಾಗ ಬಹಿರಂಗ ವೇದಿಕೆಗೆ ಪ್ರವೇಶ ಮಾಡಿ ಗೊಂದಲಕ್ಕೆ ಕಾರಣವಾಗಿ – ಜೋತಿಷ್ಯ ಶಾಸ್ತ್ರಕ್ಕೆ ಮೊರೆ ಹೋಗಿ – ಮಾರಕ ಪೂರಕ ಸನ್ನಿವೇಶಗಳು ಸೃಷ್ಟಿಯಾಗಿ – ಕರಾವಳಿ ಸೀಮೆ ಜನರ ಬದುಕು ಗೊಂದಲದ ಗೂಡಾಗಿರುವುದು ವಾಸ್ತವ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ವಿಬ್ಬಿನ್ನ ವೇದಿಕೆಯಲ್ಲಿ ಆಶಿನರಾಗಿರುವ ವ್ಯಕ್ತಿಗಳು ಮನಬಿಚ್ಚಿ ತಮ್ಮ ಸ್ಥಾನ ಮನ ಘನತೆ ಗೌರವ ಮತ್ತು ಪ್ರಸ್ತುತ ಸಮಾಜದಲ್ಲಿ ನಡೆದುಕೊಂಡು ಹೋಗುವ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಿಕೊಟ್ಟಾಗ ಮಾತ್ರ – ಮನೆ ಮನೆಯಲ್ಲಿ , ಬೇರೆ ಬೇರೆ ಕುಟುಂಬಗಳಲ್ಲಿ , ಗುತ್ತುಗಳ ಮದ್ಯೆ , ಬೀಡುಗಳ ಮದ್ಯೆ ……….ಇತ್ಯಾದಿಗಳಲ್ಲಿ ಆಗುವ ಅನಾಹುತಗಳಿಗೆ ಇತಿಶ್ರೀ ಹಾಡಬಹುದು.
ದೈವಾರಾಧನೆಯ ಸಂಪೂರ್ಣ ಫಲ ನಮಗೆ ಬೇಕಾದರೆ ಅರಸು ಪದ್ದತಿಯಲ್ಲಿ ಅಳವಡಿಸಿದ ರೀತಿ ನೀತಿಗಳಿಗೆ ಮಾನ್ಯತೆ ಕೊಟ್ಟು – ಯಥಾವತ್ತಾಗಿ ನಡೆದುಕೊಂಡು ಹೋಗುವುದು ಅನಿವಾರ್ಯ. ಲೋಪದೋಷಗಳು ಯಾರಿಂದಲೇ ಬಂದಿದ್ದರು ಅದಕ್ಕೆ ಪರಿಹಾರ ಕಂಡುಕೊಂಡು – ಕಾರ್ಯಪ್ರವೃತ್ತರಾಗಬೇಕಾಗಿದೆ.
ದಯಮಾಡಿ ಯಾವ ಮನೆಯೆಂದು ಬೀಡಿನ ಕಾರ್ಯಕ್ರಮಗಳು ನಡೆಯ್ತವೆಯೋ – ಅವರು ತಮ್ಮ ಬೀಡಿನ ಭಾವಚಿತ್ರಗಳನ್ನು ಕಳುಹಿಸಿ ಕೊಟ್ಟು ಬೀಡು ಬುಲ್ಲೆಟಿನಿನನಲ್ಲಿ ಪ್ರಕಟಣೆಗೆ ಅವಕಾಶ ಕಲ್ಪಿಸಿ. ಹೆಚ್ಚಿನ ಮಾಹಿತಿಗೆ ಅವಕಾಶವಿದ್ದು ಸಂಪರ್ಕಿಸಿ – 9480241765

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?