ಗುತ್ತು ಅರಸು ಪದ್ಧತಿ ಆಡಳಿತ ವ್ಯವಸ್ಥೆಯ ಒಂದು ಭಾಗ – ರಾಜ್ಯ ಗುತ್ತು , ಸೀಮೆ ಗುತ್ತು, ಗುತ್ತು ,ಉಪಗುತ್ತು , ಬೇರೆ ಬೇರೆ ವಿಭಾಗಗಳಿದ್ದು – ಅರಸರ ವ್ಯಾಪ್ತಿ ಮತ್ತು ಅನುಕೂಲಕ್ಕೆ ತಕ್ಕಂತೆ ತನ್ನ ಅದೀನದಲ್ಲಿ ಬೇಕು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಂಡು ಆಡಳಿತವನ್ನು ಗರಿಷ್ಠ ಮಟ್ಟದಲ್ಲಿ ನ್ಯಾಯ ನಿಷ್ಠೆಯಿಂದ ನಡೆಸಿಕೊಂಡು ಬರುತಿದ್ದ ಕಾಲ ಪ್ರಸ್ತುತ ಇತಿಹಾಸ. ಅಧಿಕಾರ, ಅಪರಿಮಿತವಾಗಿ ಹೊಂದಿದ್ದ ಹಿಡುವಳಿ,ತಪ್ಪು ಮಾಡಿದವನಿಗೆ ಸೂಕ್ತ ಶಿಕ್ಷೆ ವಿಧಿಸಿ ನ್ಯಾಯಯುತ ಬಾಳಿಗೆ ಮಾತ್ರ ಅವಕಾಶ ಎನ್ನುವ ಬದ್ಧತೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಸ್ತಾಂತರಗೊಂಡು – ತನ್ನ ಮನೆಯ ಸ್ಥಾನ ಮಾನ ಘನತೆ ಗೌರವ ಉಳಿಸಿ ಬೆಳೆಸುವುದರ ಜೊತೆಗೆ ಕಪ್ಪ ಕಾಣಿಕೆಯಿಂದ ಭರಿಸುವ ವೆಚ್ಚವನ್ನು ತನ್ನ ಸಂಪಾದನೆಯಿಂದ ಭರಿಸುವ ಕೂಪಕ್ಕೆ ತಳ್ಳಲ್ಪಟ್ಟು – ತನ್ನಿಂದ ಸಾಧ್ಯವಾದಷ್ಟು ಮಾಡುವ ಗುತ್ತು ಮನೆತನದವರ ಶೋಚನೀಯ ಪರಿಸ್ಥಿತಿ ಸಾವು ಬದುಕಿನ ಹೋರಾಟ ನಿತ್ಯ ನಿರಂತರ – ಅಂತ್ಯ ಹಾಡುವ ಅನಿವಾರ್ಯತೆ ನಮ್ಮ ಮುಂದಿದೆ. ತನ್ನಿಂದ ಸಾಧ್ಯವಿರುವುದನ್ನು ಮಾತ್ರ ಮಾಡಿಕೊಂಡು ಬರುವ ಗುತ್ತು ಮನೆತನಗಳು ದೈವ ಕೋಪಕ್ಕೆ ತುತ್ತಾಗಿ ದೈವ ದೇವರನ್ನು ಅಂಗಲಾಚುವ ಸ್ಥಿತಿ ದಿನದಿಂದ ದಿನಕ್ಕೆ ಘನಘೋರವಾಗುತಿದೆ. ತನ್ನ ಸಂಸಾರದ ಹೊರೆಯೊಂದಿಗೆ ಮಾತ್ರ ಬದುಕುವ ಅನ್ಯರ ಬದುಕಿನಿಂದ ವಂಚಿತನಾಗಿ ಸಮಾಜದ ಹೊರೆಯನ್ನು ತನ್ನ ಸಂಪಾದನೆಯಿಂದ ಹೊರುವ ಜೀತದಾಳು ನಾನೆ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಹಾತೊರೆಯುತಿದ್ದಾನೆ. ಸಮಾಜದ ಹೊರೆಯನ್ನು ಸಮಾಜದ ತಲೆಗೆ ಹೊರಿಸುವ ಎದೆಗಾರಿಕೆ ಗುತ್ತಿನವರಿಗೆ ಇದೆಯಾ? ಮನೆತನದಲ್ಲಿ ಹುಟ್ಟಿದ ತಪ್ಪಿಗೆ ಅನುಭವಿಸಲೇ ಬೇಕಾ ? ನಾವು ಮಾಡುತಿರುವ ತಪ್ಪನ್ನು ಸರಿಪಡಿಸಿದಾಗ ಸಕಲ ಪರಿಹಾರ ಒದಗಬಹುದೇ
ಗುತ್ತು ಬುಲ್ಲೆಟಿನಿನ ಉದಯ – ಗುತ್ತು ಮನೆತನಗಳ ನೋವನ್ನು ಅಳಿಸಿ – ಪರಿಹಾರದತ್ತ ಗಮನ ಹರಿಸಲು ಸಮಾಜವನ್ನು ಸನ್ನದ್ಧಗೊಳಿಸುವ ಸಂಕಲ್ಪ ನಮ್ಮದಾಗಿದೆ. ಗುತ್ತು ಮನೆತಗಗಳ ಅರಿವಿಗಾಗಿ ಪ್ರಥಮವಾಗಿ ಗುತ್ತು ಮನೆತನಗಳ ಭಾವಚಿತ್ರದೊಂದಿಗೆ ಊರಿನ ಹೆಸರು ಪ್ರಕಟಣೆ – ಅಂದಿನ ವೈಭವ -ಇಂದಿನ ವೈಭವದ ಕಲ್ಪನೆ – ಹೊಂದಾಣಿಕೆ ಸೂತ್ರದಲ್ಲಿ ನಾವು ಮಾಡಿಕೊಂಡ ಎಡವಟ್ಟುಗಳು – ಕಾರ್ಣಿಕ ದೈವ ನಾಟಕ ದೈವವಾದುದಕ್ಕೆ ನಮ್ಮ ಕೊಡುಗೆ ಇತ್ಯಾದಿ ಇತ್ಯಾದಿ .
ಗುತ್ತು ಮನೆತನದವರು – ಯಜಮಾನನ ಉಪಸ್ಥಿತಿಯಲ್ಲಿರುವ ತಮ್ಮ ಮನೆಯ ಭಾವಚಿತ್ರ ಮತ್ತು ವಿಳಾಸ ಮೊಬೈಲ್ ನಂಬರ್ ಬರೆದು ಪ್ರಕಟಣೆಗಾಗಿ ನಮಗೆ ಕಳುಹಿಸಿ. ಇದಕ್ಕೆ ಯಾವುದೇ ಶುಲ್ಕವಿಲ್ಲ -9480241765