ನಗರ ಪ್ರದೇಶದಲ್ಲಿ ವ್ಯಾಪಾರ ಸಲುವಾಗಿ ಬಂದವರು ತನ್ನ ವ್ಯವಹಾರಕ್ಕಾಗಿ ಅರಮನೆಯನ್ನು ಕಟ್ಟಿಕೊಂಡು – ವ್ಯವಹಾರದೊಂದಿಗೆ ಆ ಪ್ರದೇಶದ ಆಡಳಿತವನ್ನು ಕೂಡ ನಡೆಸಿಕೊಂಡು ಹೋಗುತಿದ್ದರು – ಗ್ರಾಮೀಣ ಪ್ರದೇಶದ ಅರಸರಾಗಿ ಬೀಡು ಮನೆತನಗಳು – ನಗರ ಪ್ರದೇಶದ ಅರಸರಾಗಿ ಅರಮನೆ ಮನೆತನಗಳು ಅರಸು ಪದ್ಧತಿ ಆಳ್ವಿಕೆಯಲ್ಲಿ ಇದ್ದುದರ ಪುರಾವೆಗಳು ಇವೆ ಎಂದು ಜನಸಾಮಾನ್ಯರು ಆಡಿಕೊಳ್ಳುತಿದ್ದರು – ನಾವು ಇಲ್ಲಿ ಮೂಲವನ್ನು ಕೆದಕುವ ವಿಷಯಕ್ಕೆ ಕೈ ಹಾಕದೆ – ಅರಣಮನೆಯ ಸ್ಪಷ್ಟ ಅರಿವು ಪ್ರಸ್ತುತ ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ದೊರಕುವ ವೇದಿಕೆಯನ್ನು ಮಾತ್ರ ನಿರ್ಮಾಣ ಮಾಡುತಿದ್ದೇವೆ. ದಯಮಾಡಿ ಪ್ರಸ್ತುತ ಅರಮನೆಯಲ್ಲಿರುವವರು ತಮ್ಮ ತಮ್ಮ ಅರಮನೆಯ ಭಾವಚಿತ್ರ, ತಮ್ಮ ಹೆಸರು , ಊರಿನ ಹೆಸರು ನಮಗೆ ಕಳುಶಿಸಿ ಪ್ರಕಟಿಸಲು ಅವಕಾಶ ಕಲ್ಪಿಸಿ. ಅರಮನೆಯ ಅವಶೇಷಗಳು ಮಾತ್ರ ಇರುವ ಸ್ಥಳಗಳು ಗಮನಕ್ಕೆ ಬಂದವರು ಭಾವಚಿತ್ರ ಊರಿನ ಹೆಸರು ಯಜಮಾನನ ಅನುಮತಿ ಮತ್ತು ಹೆಸರಿನೊಂದಿಗೆ ಕಳುಹಿಸಿ ಪ್ರಕಟಣೆಗೆ ಸಹಕರಿಸಿ.
ನಮ್ಮ ಇತಿಹಾಸದ ಆಡಳಿತ ಬಗ್ಗೆ ತಿಸ್ಳಿದುಕೊಳ್ಳುವ ದೃಷ್ಟಿ ಮಾತ್ರ ಇದಾಗಿದ್ದು ಯಾರು ಕೂಡ ಅನ್ಯಥ ಭಾವಿಸದೆ – ಸಮಾಜದ ಚಿಂತಕರು – ಹಿತೈಷಿಗಳು ಸಹಕರಿಸಿ – ನಮ್ಮ ಪೂರ್ವಜರ ತ್ಯಾಗಮಯ ಜೀವನದ ಪುಟ್ಟ ಚಿತ್ರಣ ನಮ್ಮೆಲ್ಲರ ಬಾಳಿಗೆ ದಾರಿ ದೀಪವಾಗಲಿ.
ಸಂಪರ್ಕಿಸಿ -9480241765