
ಇಚ್ಲಂಪಾಡಿ ಗ್ರಾಮದ ಬಿಜೇರು ಮನೆ ಶ್ರೀಧರ ಗೌಡ ಮತ್ತು ಶ್ರೀಮತಿ ಲೋಲಾಕ್ಷಿ ರವರ ಮಗಳಾದ ನವ್ಯ ರವರು ಮೈಸೂರಿನಲ್ಲಿ ಫೆ.19 ರಿಂದ 22ರ ವರೆಗೆ ನಡೆದ ರಾಜ್ಯ ಮಟ್ಟದ ಶಾಲಾ ಮಕ್ಕಳ ಕ್ರೀಡಾಕೂಟದ ಬಾಲಕಿಯರ ವಿಭಾಗದಲ್ಲಿ 4×100 ಮೀಟರ್ ರಿಲೇಯಲ್ಲಿ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಇವರು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
