Daivalaya campaign

ದೈವಾಲಯ ಅಭಿಯಾನ

ದೈವಾಲಯ – ಶುಲ್ಕ ರಹಿತ ಪ್ರಕಟಣೆ
ದೈವ ಇರುವ ಸ್ಥಳ ದೈವಾಲಯ.ಅರಸು ಪದ್ದತಿಯಲ್ಲಿದ್ದ ನ್ಯಾಯಾಲಯವೆ ದೈವಾಲಯ. ಇಂದಿಗು ಎಲ್ಲಿಯೂ ನ್ಯಾಯ ಸಿಗದಿದ್ದಾಗ, ದೈವಾಲಯದ ಮೂಲ ಅರಿತವರು ದೈವಗಳಲ್ಲಿ ಮೊರೆಹೋಗಿ ಅತಿ ಶೀಘ್ರ ತನ್ನ ಇಷ್ಟ ಈಡೇರಿಸಿ ಸಂತುಷ್ಟರಾಗುತಿದ್ಧಾರೆ . ಸಾರ್ವಜನಿಕ ದೈವಾಲಯಗಳ ಒಂದು ಭಾವಚಿತ್ರ ಮತ್ತು ಅದರ ಕುರಿತು ೫೦ ಪದಗಳಿಗೆ ಮೀರದಂತೆ ವಿವರಣೆ ಕಳುಹಿಸಿ ಪ್ರಕಟಣೆಗೆ ಸಹಕರಿಸಿ.

ದೈವ ಮತ್ತು ದೈವಾಲಯದ   ಬಗ್ಗೆ ಸ್ಪಷ್ಟವಾದ ಅರಿವು ಆರಾಧಕರಲ್ಲಿ ಬಂದುಯಾವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಪೂರ್ವಜರು ಹುಟ್ಟು ಹಾಕಿದ್ದಾರೋ  ಅದೇ ಉದ್ದೇಶ ಈಡೇರಿ ನಿಂದನೆ ಮಾಡುವವರಿಗೆ  ಕಡೆಗಣಿಸುವವರಿಗೆ ದೈವದ ನರ್ತಕನ ಬಾಯಿಂದ ನುಡಿಕಟೆಂಬ ಚಾಟಿಯೇಟು ಕೊಟ್ಟು ಕೋಟಿಗಟ್ಟಲೆ ವೆಚ್ಚಮಾಡಿ ನೂರಾರು ವರುಷ ಕಾಡು ಕುಳಿತು ಕಂಡ ಕಂಡವರಿಗೆ ಮೊರೆ ಹೋಗಿ ಸಿಗದ ನ್ಯಾಯ ಕ್ಷಣ ಮಾತ್ರದಲ್ಲಿ ಕೊಡಬಲ್ಲ ವ್ಯವಸ್ಥೆಗೆ ಮರು ಜೀವ ನೀಡಿ ಆಮೆ ನಡಿಗೆಯ ಆಡಳಿತ ವ್ಯವಸ್ಥೆಗೆ ಮನೋವೇಗ ನೀಡಬಲ್ಲ – ದೈತ್ಯ ಶಕ್ತಿಯೇ ದೈವಾರಾಧನೆ ಎಂದು ಡಂಗುರ ಸಾರೋಣ.

ಪುಸ್ತಕದ  ಬದನೆಕಾಯಿಯಾಗಿರುವ (ಅನುಷ್ಠಾನದ ಕೊರತೆಯಿಂದಾಗಿ )  – ಪ್ರಜಾಪ್ರಬುತ್ವ ಮತ್ತು ಅದರ ಸಹ ಸಂಸ್ಥೆಗಳಾದ ಶಾಸಕಾಂಗ ಕಾರ್ಯಂಗನ್ಯಾಯಾಂಗಗಳಿಗೆ  ಸಡ್ಡು ಹೊಡೆದು ನಿಂತು( ಪರದೇಶಿಗಳು  ಹುಟ್ಟು ಹಾಕಿದ ವ್ಯವಸ್ಥೆ)  – ಸ್ವದೇಶೀ  ಆಡಳಿತ ವ್ಯವಸ್ಥೆ  – ದೈವ ಮತ್ತು ದೈವಾಲಯ ಮಾನವರ ಪಾಲಿನ ಅಮೃತ .

ಪ್ರತಿ ಮನೆಗೆ ಒಂದರಿಂದ ಹಿಡಿದು ೨೦ ರಿಂದ ೩೦ ದೈವಗಳು ಇರುವ ಮನೆಗಳು ದೈವ ಆರಾಧಕರ ವ್ಯಾಪ್ತಿಯಲ್ಲಿವೆ . ಆಡಳಿತ ವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆ – ಮಾನವ  ಬದುಕಿನ ಎಲ್ಲಾ ಮಜಲುಗಳನ್ನು ಗಣನೆಗೆ ತೆಗೆದುಕೊಂಡು ಸರಿಯಾದ ಮಾಹಿತಿ ನೀಡಿ –  ಚಿಂತನ ಮಂಥನ ಅನುಷ್ಠಾನಕ್ಕೆ ಒತ್ತು ನೀಡಿ –  ಬಾಳಿಗೆ  ಯೋಗ್ಯವಾದುದನ್ನು ಮಾತ್ರ ಬದುಕಿನಲ್ಲಿ ಅಳವಡಿಸುವಂತೆ ಮಾಡುತಿದ್ದರೆ ಪ್ರಾಣಿ ಪ್ರಪಂಚದಲ್ಲಿ  ಮಾನವರನ್ನು ನೋಡುವ ಅವಕಾಶ ತಪ್ಪುತ್ತಿತ್ತು . ಆದರೆ ಅದು ಇಂದು ಬದುಕಿಗಾಗಿ ಸ್ಥಾನ ಮಾನ ಘನತೆ ಇತ್ಯಾದಿ ದೊರಕಿಸಿಕೊಡಬಲ್ಲ ವ್ಯಾಪಾರಕೇಂದ್ರಗಳನ್ನಾಗಿ ಮಾಡಿ ನಿಜವಾದ ದರೋಡೆಕೋರರನ್ನು ಸಾಕಿ  ಸಲಹುತ್ತಿದೆ.

  ಆಂತರಿಕ ದೈವಾರಾಧನೆ ಮತ್ತು ಬಾಹ್ಯ ದೈವಾರಾಧನೆ ಎಂಬುದು ಒಂದೇ ನಾಣ್ಯದ ಎರಡು ಮುಖಗಳು. ಆದರೆ ಮಾನವರಾದ ನಮ್ಮ ಅರಿವೆಗೆ ಬಾರದೆ ಬಾಹ್ಯ ದೈವಾರಾಧನೆ ಮಾತ್ರ ಅಸ್ತಿತ್ವವನ್ನು ಉಳಿಸಿಕೊಂಡಿರುವದು ನಮ್ಮಿಂದ ದೈವಾರಾಧನೆಗೆ ಆಗುತ್ತಿರುವ ಅತ್ಯಂತ ಘನ ಘೋರ ಅಪರಾಧ. ಆಂತರಿಕ ದೈವಾರಾಧಕರ ಸಂಖ್ಯಾ ಬಲ ಕ್ಷೀಣಿಸುತಾ ಬಂದು ಸೂನ್ಯಕ್ಕೆ ತಲುಪವ ಮಟ್ಟದಲ್ಲಿದ್ದರು ದೈವ ಮಾತ್ರ ಆಂತರಿಕ ದೈವ ಆರಾಧಕರ ಬೆಂಬಲ ಸಹಕಾರ  ಅಭಯ ಹಸ್ತ ನೀಡಿ ಸಂರಕ್ಶಣೆ ಮಾಡಬಲ್ಲದು.ದುಬಾರಿ ವೆಚ್ಚದ – ಜ್ಯೋತಿಷ್ಯ ವಾಸ್ತು ತಂತ್ರಿವರ್ಗ ಶಿಲಾಮಯ ಕಟ್ಟಡ ,ತಾಮ್ರದ ಹೊದಿಕೆಇತ್ಯಾದಿಗಳಿಂದ ಜೀರ್ಣೋದ್ದಾರ ಬ್ರಹ್ಮಕಲಶದೊಂದಿಗೆ ಮುಂದಿನ ಹೆಜ್ಜೆ ಅದ್ದೂರಿ ನರ್ತನ ಸೇವೆ  – ಮಾಡಿದಲ್ಲಿ ದೈವ ಸಂತುಷ್ಟವಾಗಿಸದಾ  ನಮ್ಮ ಬೆಂಗಾವಲಾಗಿ ನಿಲ್ಲುತ್ತದೆ ಎಂಬ ಕನಸು ನೆನಸಾಗಬೇಕಾದರೆ  ಆಂತರಿಕ ದೈವಾರಾಧನೆ ಅರಿವಿನೊಂದಿಗೆ ಮಾತ್ರ ಸಾಧ್ಯ  – ಇದು ಖಟು ಸತ್ಯ.

  ದೇವರ ದೂತ ದೈವ  – ದೇವರ ಅಸ್ತಿತ್ವಕ್ಕೆ ಮಾತ್ರ ಅವಕಾಶ ಕಲ್ಪಿಸಿ ಕಿಂಚಿತ್ತು ವೆತ್ಯಾಸ ಆದಾರು ಸಹಿಸದೆ ಸ್ಪಷ್ಟವಾದ ಸತ್ಯಧರ್ಮ ನ್ಯಾಯ ಸರಿ ದಾರಿಯಲ್ಲೇ ನಡೆಸ ಬಲ್ಲ ಸಮರ್ಥ ಶಕ್ತಿ ದೈವತ್ವಕ್ಕೆ ಇದೆ . ದೇವ ಮಾನವ ಬದುಕು  ಯಾರು  ಸಾಗಿಸುತ್ತಾನೊ ಅವನ ಮನೆಯಲ್ಲಿ ಮಾತ್ರ ದೂತನಾಗಿ ಬಂದು ಕೆಲಸ ನಿರ್ವಹಿಸುತ್ತೆನೆಂದು ವಚನವಿತ್ತು ದೈವ ನೆಲೆಯಾದ ವಿಷಯ ದೈವಗಳ ಪಾರ್ದನದಿಂದ ತಿಳಿದು ಬರುತ್ತದೆ

  ದೇವರ ಇಚ್ಛೆ ದೈವ ಇಚ್ಛೆ ಮಾನವ ಇಚ್ಛೆ ಒಂದಾದಾಗ  ಮಾತ್ರ ನಾವು ಸ್ವರ್ಗ ಸುಖ ಈ ಪ್ರಪಂಚದಲ್ಲಿ ಪಡೆಯಲು ಸಾಧ್ಯ .  ದೇವರ ಇಚ್ಛೆ ದೈವ ಇಚ್ಛೆ  ಎಂದು ಬಿನ್ನವಾಗುದಿಲ್ಲ  – ಮಾನವರ ಇಚ್ಛೆ ಭಿನ್ನವಾಗುತ್ತದೆ . ಅದಕ್ಕಾಗಿಯೆ ಆತನಿಗೆ  ನರಕ ಬದುಕು ಪ್ರಾಪ್ತಿಯಾಗುತ್ತದೆ .

ನಿಜವಾದ ದೈವ ಆರಾಧಕ ಯಾರು ?

1. ಆಂತರಿಕವಾಗಿ ದೈವವನ್ನು ತನ್ನ ಮನದಲ್ಲಿ ಪ್ರತಿಷ್ಠೆ ಮಾಡಿದವನು ಮಾತ್ರ

2. ಆತ ಹಂತ ಹಂತವಾಗಿ ದೇವಮಾನನಾಗಿ ಪರಿವರ್ತನೆ ಆಗುತಿರುತ್ತಾನೆ

3. ಅವನಲ್ಲಿ ಒಳ್ಳೆಯ ಚಿಂತನೆ ಮಂಥನಗಳು ಮಾತ್ರ ನಡೆಯುತ್ತದೆ. ಕೆಟ್ಟದನ್ನು ಬರಲು ದೈವ ಬಿಡುವುದಿಲ್ಲ

4. ಬೂತ ಉಪದ್ರಕಾರಿ  ಆದರೆ ದೈವ ಪರೋಪಕಾರಿ

5. ದೈವವನ್ನು ನಂಬುವರಾಗಿ ಯಾವುದೇ ಕಾರಣಕ್ಕೆ ಬೂತವನ್ನು ನಂಬ ಬೇಡಿ

6. ದೈವ ವಿಶ್ವ ವ್ಯಾಪಿ ದೇಶಕಾನೂನು ……. ಮಿತಿ ಇದೆ. 

7. ಮಾನನಿಗೆ ನಿಲುಕದ ಪವಾಡಗಳು ಸಾಧ್ಯ

8. ಅಲ್ಪ ಜ್ಞಾನಿ ಮಾನವ ಮಾಯಾ ಜ್ಞಾನಿ ದೈವ

9. ದೈವ ಶಕ್ತಿ ಅಪಾರ ಮಾನವ ಶಕ್ತಿ ನಗಣ್ಯ

ದೇವ ಇಚ್ಛೆ . ದೈವ ಇಚ್ಛೆಮಾನವ ಇಚ್ಛೆ  ಒಂದಾಗಲಿ ಹಾರೈಕೆ ನನ್ನದಾಗಿದೆನಮ್ಮದಾಗಲಿ…………..

error: Content is protected !!! Kindly share this post Thank you
× How can I help you?