ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರ ,ಹನುಮಗಿರಿ

ಶೇರ್ ಮಾಡಿ

ಮಾರುತಿಯು ಪಂಚಮುಖಿ ರೂಪವನ್ನು ಧರಿಸಿದ ಕಥಾಸಾರಾಂಶ ಇಂಗ್ಲಿಷ್ ಆವೃತಿ 

ತ್ರೇತಾಯುಗದಲ್ಲಿ ಶ್ರೀರಾಮ ಮತ್ತು ರಾವಣ ಇವರ ನಡುವೆ ಯುದ್ಧವಾಯಿತು. ಆಗ ನಿರ್ಮಾಣವಾಗಿದ್ದ ರಾಕ್ಷಸರು ಪಾತಾಳದಿಂದ ಸೂಕ್ಷ್ಮದಿಂದ ಬಂದಿದ್ದಾರೆ. ಅದರಿಂದಾಗಿ ಈ ಗಲಭೆಗಳು ಆದವು. ತ್ರೇತಾಯುಗದಲ್ಲಿ ಶ್ರೀರಾಮ-ರಾವಣನ ಯುದ್ಧದ ಸಮಯದಲ್ಲಿ ಅಹಿರಾವಣ ಮತ್ತು ಮಹಿರಾವಣ ಇವರಿಬ್ಬರು ರಾಕ್ಷಸರು ಪಾತಾಳದಿಂದ ನಿರ್ಮಾಣವಾದರು. ಆಗ ಮಾರುತಿರಾಯನು ಅವರನ್ನು ಕೊಂದನು. ಅದರಿಂದ ಮಾರುತಿರಾಯನು ರಾಕ್ಷಸರ ಉದ್ಧಾರವನ್ನೇ ಮಾಡಿದನು. ನಂತರ ಪಾತಾಳದಲ್ಲಿ ಆ ರಾಕ್ಷಸರಿಗಿಂತ ಭಯಂಕರ ದೊಡ್ಡ ರಾಕ್ಷಸರು ನಿರ್ಮಾಣವಾದರು. ಈ ರಾಕ್ಷಸರು ಮಾರುತಿರಾಯನಿಂದ ಸಾಯುತ್ತಿರಲಿಲ್ಲ. ಅವರನ್ನು ನಾಶಮಾಡಲು ಮಾರುತಿರಾಯನು ಪಂಚಮುಖಿ ಹನುಮಾನನ ಅವತಾರವನ್ನು ತೆಗೆದುಕೊಂಡನು. ಪ.ಪೂ.ಶ್ರೀಧರಸ್ವಾಮಿಯವರು ಇದರ ಹಿನ್ನೆಲೆಯಲ್ಲಿನ ಕಥೆಯನ್ನು ಪ.ಪೂ. ಭಗವಾನದಾಸ ಮಹಾರಾಜರಿಗೆ ಹೇಳಿದರು.  ಮಹಿರಾವಣನನ್ನು ವಧಿಸಲು ಮಾರುತಿ ಪಾತಾಳಕ್ಕೆ ಹೋದನು. ಅಲ್ಲಿನ ಐದು ದೀಪಗಳನ್ನು (ಐದು ರಾಕ್ಷಸರ) ಒಂದೇ ಸಮಯದಲ್ಲಿ ವಿನಾಶ ಮಾಡಿ (ಅಂದರೆ ಆ ಐದು ದೀಪಗಳನ್ನು ಆರಿಸದೆ) ಮಹಿರಾವಣನ ಮರಣವಿಲ್ಲವೆಂದು ಹನುಮಂತನಿಗೆ ಅರಿವಾಯಿತು. ಅದರಿಂದಾಗಿ ಆ ಐದು ದೀಪಗಳನ್ನು ಒಂದೇ ಸಮಯದಲ್ಲಿ ನಾಶ ಮಾಡದೇ ಪರ್ಯಾಯವಿರಲಿಲ್ಲ. ಆ ಐದು ರಾಕ್ಷಸರನ್ನು ಒಂದೇ ಸಮಯದಲ್ಲಿ ಕೊಲ್ಲಲು ಮಾರುತಿಯು ಪಂಚಮುಖಿ ರೂಪವನ್ನು ಧರಿಸಿದನು.

ಮಾರುತಿಯ ಪಂಚಮುಖಗಳು ಮತ್ತು ಅವುಗಳ ಕಾರ್ಯ

ಮಾರುತಿಯ ಐದು ಮುಖಗಳು ಬೇರೆ ಬೇರೆ ಶಕ್ತಿ ಮತ್ತು ಸಾಮರ್ಥ್ಯಗಳ ಪ್ರತೀಕಗಳಾಗಿವೆ. ಈ ಐದು ಮುಖಗಳು ಮತ್ತು ಅವುಗಳ ಕಾರ್ಯಗಳು ಮುಂದಿನಂತಿವೆ.

  1. ಹನುಮಂತಇವನ ಮುಖವು ಪೂರ್ವದೆಡೆಗೆ ಇರುತ್ತದೆ. ಮನಸ್ಸಿನಲ್ಲಿ ಸಾತ್ತ್ವಿಕತೆ ಮತ್ತು ಪವಿತ್ರತೆಯನ್ನು ನಿರ್ಮಿಸುವುದರೊಂದಿಗೆ ಯಶಸ್ಸನ್ನು ನೀಡುವುದೇ ಈ ಮುಖದ ಕಾರ್ಯವಾಗಿದೆ.
  2. ನರಸಿಂಹ: ಈ ಮುಖವು ದಕ್ಷಿಣದತ್ತ ಇದ್ದು ನಿರ್ಭಯತೆ ಮತ್ತು ಸಂಕಟಗಳನ್ನು ಎದುರಿಸುವ ಪ್ರಬಲ ಶಕ್ತಿಯನ್ನು ಸೂಚಿಸುತ್ತದೆ. ಭೂತಪ್ರೇತ ಸಂಬಂಧಬಾಧೆ ಮತ್ತು ಶತ್ರು ಇವುಗಳ ನಿವಾರಣೆ ಮಾಡುವುದು, ಈ ಮುಖದ ಕಾರ್ಯವಾಗಿದೆ.
  3. ಗರುಡ: ಇದು ಪಶ್ಚಿಮದಿಕ್ಕಿಗಿದ್ದು ಜಾದುಮಾಟ, ಮಂತ್ರ-ತಂತ್ರ, ಪಿಶಾಚಬಾಧೆ, ಭೂತಬಾಧೆ, ವಿಷಬಾಧೆ ಇವುಗಳಿಂದ ಸಂರಕ್ಷಣೆ ಮಾಡುತ್ತದೆ. ಕೋಟಿ ಸೂರ್ಯಗಳ ತೇಜದಂತೆ ಈ ಮುಖದ ತೇಜವಿದೆ.
  4. ವರಾಹ: ಇದು ಉತ್ತರದಿಕ್ಕಿನಲ್ಲಿದ್ದು ಇದರ ಕಾರ್ಯವು ಮುಖ್ಯವಾಗಿ ಪ್ರಗತಿ, ಧನಸಂಪತ್ತು ಮತ್ತು ಸುಖೋಪಭೋಗವನ್ನು ನೀಡುವುದು, ಪುತ್ರಪೌತ್ರಾದಿಗಳ ವೃದ್ಧಿ ಮಾಡುವುದಿರುತ್ತದೆ. ಲಕ್ಷ್ಮಣನಿಗೆ ಶಕ್ತಿ ಬೇಕಾಗಿದ್ದಾಗ ಈ ಮುಖವು ಅವನಿಗೆ ಜೀವನದಾನ ನೀಡಿತು ಮತ್ತು ಲಂಕೆಯನ್ನು ದಹಿಸಿತ್ತು.
  5. ಹಯಗ್ರೀವ: ಈ ಮುಖವು ಆಕಾಶದೆಡೆಗೆ ಇರುತ್ತದೆ. ಸ್ವಲ್ಪಮಟ್ಟಿಗೆ ಡೊಂಕಾದ ಅವಸ್ಥೆಯಲ್ಲಿರುವ ಈ ಮುಖವು ಹನುಮಾನನ ಮುಖದ ಮೇಲಿನ ಬದಿಗೆ ತೋರಿಸಲಾಗಿದೆ. ಈ ಮುಖದ ಸಂಬಂಧವು ಜ್ಞಾನ ಮತ್ತು ಸಂತತಿ ಈ ಎರಡು ಸಂಗತಿಗಳೊಂದಿಗೆ ಬರುತ್ತದೆ.

ಐದು ದೀಪಗಳಲ್ಲಿ ಐದನೇ ಅಸುರಾಸುರ ರಾಕ್ಷಸ, ಪಂಚಮುಖಿ ಮಾರುತಿಯ ಪಾದದ ಕೆಳಗಡೆಯಲ್ಲಿರುವ ರಾಕ್ಷಸನಾಗಿದ್ದಾನೆ. ಪಂಚಮುಖಿ ಮಾರುತಿಯು ಒಂದರ್ಥದಲ್ಲಿ ಮಾನವೀ ಜೀವನದ ಎಲ್ಲ ಅಂಗಗಳ ವಿಕಾಸ ಮಾಡಿಸಿ ತರುವುದಕ್ಕಾಗಿ ಮಹತ್ವ ಪೂರ್ಣ ಸಾಧನವಾಗಿದೆ.

See also  ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

ಹನುಮಗಿರಿಯ ಬಗ್ಗೆ

ಕಾವು ಮಾರ್ಗವಾಗಿ 5 ಕಿ.ಮೀ.ಈಶ್ವರಮಂಗಲ ರಸ್ತೆಯಲ್ಲಿ ಪ್ರವೇಶದ್ವಾರ ಇದೆ. ಹತ್ತಾರು ಹೆಜ್ಜೆ ಮುಂದೆ ಹೋದಾಗ ಆಂಜನೇಯ ಕ್ಷೇತ್ರವನ್ನು ಕಾಣಬಹುದು. ಮುಂಬಾಗದಲ್ಲಿ ಚಿಕ್ಕದಾದ ಸುಂದರವಾದ ಪ್ರವೇಶ ಮಂಟಪವಿದೆ. ಒಳಗೆ ಕಾಲಿರಿಸಿದಾಗ ರಾಮಯಣ ಮಾನಸೋಧ್ಯಾನವು ಮನವನ್ನು ಪುಳಕಗೊಲಿಸುತ್ತದೆ. ಎಡಭಾಗದಲ್ಲಿ ಗೋಡೆಗೆ ತಾಗಿಸಿದಂತೆ ರಾಮಯಣದ ಕಥಾನಕಗಳನ್ನು ಶಿಲೆಯಲ್ಲಿ ಕೆತ್ತಿ, ಫಲಕಗಳಲ್ಲಿ ವಿವರಗಳನ್ನು ಇಡಲಾಗಿದೆ. ಪುತ್ರಕಾಮೇಷ್ಟಿ, ರಾಮಭರತ ಲಕ್ಷ್ಮಣ ಶತ್ರುಘ್ನರ ಜನನ, ಯಜ್ನಸಂರಕ್ಷಣೆ, ಅಹಲ್ಯೋದ್ದಾರ, ಸೀತಾ ಸ್ವಯಂವರ, ಭಾರ್ಗವ ಗರ್ವಭಂಗ, ಶ್ರೀರಾಮ ಪಟ್ಟಭಿಷೇಕದ ಸಂಕಲ್ಪ ಶ್ರೀರಾಮ ವನಾಭಿಗಮನ, ಗಂಗೋತ್ತರಣ, ಪಾದುಕಾಪ್ರಸಂಗ, ವಿರಾಧನ ಶಾಪ ವಿಮೋಚನೆ, ಶಿರಭಂಗ ವೃತ್ತಾಂಗ, ಶೂರ್ಪನಖಾ ಮಾನಭಂಗ, ಮಾಯಮೃಗ ಭೇಧನ, ಸೀತಾ ಅಪಹಾರ, ಜಟಾಯು ಮೋಕ್ಷ, ಶಬರಿ ಮೋಕ್ಷ ಹನುಮದ್ದರ್ಶನ, ಸುಗ್ರೀವ ಸಖ್ಯ, ವಾಲಿ ಸಂಹಾರ, ಸಮುದ್ರೋಲ್ಲಂಘನ, ಚೂಡಾಮಣಿ ಪ್ರದಾನ, ಲಂಕಾದಹನ, ವಿಭೀಷಣ ಶರಣಾಗಾತಿ, ಸೇತುಬಂಧನ, ಕುಂಭಕರ್ಣ ವಧೆ, ಸಂಜೀವಿನಿ ಪ್ರಯೋಗ, ಇಂದ್ರಜಿತುವಧೆ, ರಾವಣ ಮೋಕ್ಷ, ವಿಭೀಷಣ ಪಟ್ಟಭಿಷೇಕ, ಸೀತೆಯ ಅಗ್ನಿಪರೀಕ್ಷೆ, ಶ್ರೀರಾಮ ಪಟ್ಟಾಭಿಷೇಕ – ಹೀಗೆ ರಾಮಯಣದ ಪ್ರಮುಖ ಘಟನೆಗಳನ್ನು ಶಿಲಾಕೃತಿ ಮತ್ತು ವಿವರಣಾ ಫಲಕಗಳಿಂದ ತಿಳಿಯಬಹುದು. ಒಟ್ಟಿನಲ್ಲಿ ಅಲ್ಲಿ ಸಂಪೂರ್ಣ ರಾಮಯಣವೇ ಮೂಡಿಬಂದಿದೆ. ಹಚ್ಚನೆಯ ಹಸಿರಾದ ಹುಲ್ಲು, ಪುಷ್ಪ ಸಮೃದ್ದವಾದಾ ಗಿಡ ಬಳ್ಳಿಗಳು, ಅವುಗಳ ನಡುವೆ ಮುಂದೆ ಸಾಗುವ ಕಾಲುದಾರಿ, ಮೈಮನಗಳನ್ನು ಪುಳಕಿತಗೊಳಿಸುತ್ತವೆ. ಮೆಟ್ಟಿಗಳನ್ನೇರಿಸಿಕೊಂಡು ಕ್ಷೇತ್ರದ ಪ್ರಧಾನ ಭಾಗವಾದ ಆಂಜನೇಯ ಮಂದಿರಕ್ಕೆ ತಲುಪಿದಾಗ ಭಕ್ತಿ ಭಾವ ಪರವಶನಾಗಿಸಾಷ್ಟಾಂಗ ಪ್ರಣಾಮ ಸಲ್ಲಿಸುತ್ತೇವೆ.  ಪಂಚಮುಖಿ ಆಂಜನೇಯನ ವಿಗ್ರಹವು ತೆರೆದೆದೆಯ ಭಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಭಕ್ತರಿಗೆ ವಿಶ್ರಾಂತಿ ಪಡೆಯಲು ಮತ್ತು ಧಾರ್ಮಿಕ ವಿಧಿಗಳನ್ನು ನೆರವೇರಿಸುವ ನರಸಿಂಹ ಮಂಟಪವು ಎಡಭಾಗದಲ್ಲಿದೆ. ಪಶ್ಚಿಮಭಾಗದಲ್ಲಿ ಪಡುಭಾಗದ ಕೋಣೆಯಲ್ಲಿ ಪವಮಾನ ರಥವಿದೆ.

ಗರುಡ ಮಂಟಪವನ್ನು ದಾಟಿ ಮುಂದೆ ಹೋದಾಗ ’ಹನುಮಾನ್ ಮಾನಸೋದ್ಯಾನ’ ಮತ್ತು ’ಸಂಜೀವಿನಿ’ ದಿವ್ಯೌಷಧ ಸಸ್ಯಗಳ ವನವಿದೆ. ಅಲ್ಲಲ್ಲಿ ಅಂಜನೇಯನ ಜನನ ಮೊದಲ್ಗೊಂಡು ರಾಮಾವತಾರ ಸಮಾಪ್ತಿಯ ತನಕದ, ಹಾಗೂ ದ್ವಾಪರಾಯುಗದಲ್ಲಿ ಆಂಜನೇಯ ಸೇವಾ ಕೈಂಕರ್ಯದ ಕಥಾನಕಗಳನ್ನು ಶಿಲೆಗಳಲ್ಲಿ ಕೆತ್ತಲಾಗಿದೆ. ರಾಮಾಯಣ ಮತ್ತು ಹನುಮಾಯಣಗಳನ್ನು ಶಿಲ್ಪಾ ಕಲಾ ಸೊಗಡಿನ ಮೂಲಕ ಆಸ್ವಾದಿಸುವ ಅವಕಾಶ ಪ್ರಾಯಶಃ ಹನುಮಗಿರಿಯಲ್ಲಿ ಮಾತ್ರ ಕಾನಬಹುದಾಗಿದೆ. ತನ್ಮಧ್ಯೆ ಜ್ಞಾನ ಮಂದಿರವಿದೆ. ಸಾಧುಸಂತರು, ಪಿಸಾಸುಗಳು ಜ್ಞಾನ, ಜಪತಪ, ಅನುಷ್ಟಾನಗಳನ್ನು ಪೂರೈಸುವ ಅವಕಾಶ ಜ್ಞಾನಮಂದಿರದಲ್ಲಿದೆ; ಅನತಿ ದೂರದಲ್ಲಿ ಕೋದಂಡಪಾಣಿಯಾದ ಶ್ರೀರಾಮ ಮತ್ತು ರಾಮಭಜನೆಯಲ್ಲಿ ತಲ್ಲೀನನಾದ ಆಂಜನೇಯನ ವಿಗ್ರಹಗಳಿವೆ.

ಹನ್ನೊಂದು ಅಡಿ ಎತ್ತರದ  ಶ್ರೇಷ್ಠವಾದ ಕೃಷ್ಣಶಿಲೆಯಲ್ಲಿ ಕೆತ್ತಿದ ಪಂಚವಟಿಯ ಆಂಜನೇಯನ ಏಕಶಿಲಾ ವಿಗ್ರಹ ವಿವರಣಾ ಫಲಕಗಳ ಸಮೇತ ರಾಮಯಣ ಕಥಾಣಕಗಳಸುಮಾರು ನೂರರಷ್ಟು ಶಿಲ್ಪಕಲಾಕೆತ್ತನೆಯ ಸೊಗಡು ನಿಸರ್ಗದತ್ತ ಕಲ್ಲು ಬಂಡೆಗಳಲ್ಲಿ ಕೆತ್ತಲಾಗಿರುವ ಆಂಜನೇಯನ ಜೀವನದ ಪುಣ್ಯಕಥಾ ಪ್ರಸಂಗಗಳು ದೇವ, ಜೀವಾ ‍ಸತ್ಸಂಧ ಸೂಚಕ ರಾಮ ಹನುನ ವಿಗ್ರಹಗಳು ಇವು ಈಕ್ಷೇತ್ರದ ವಿಶೇಷತೆಗಳು.

See also  ಶ್ರೀ ಉಮಾಮಹೇಶ್ವರ ದೇವಸ್ಥಾನ ಒರುಂಬಾಲಿನಲ್ಲಿ ಮಹಾಶಿವರಾತ್ರಿ ಮಹೋತ್ಸವ

ಶಿಲ್ಪಕಲೆ ಪ್ರೌಢಮಿಯ ಶಿಲಾವೈಭವಕ್ಕೆ ಇದೊಂದು ಅಪೋರ್ವ ಮಾದರಿ, ರಾಮ-ಲಕ್ಷ್ಮಣ ಶುಶ್ರೂಷೆಗಾಗಿ ಹನುಮಂತನು ಪಂಚಮುಖಿ ಸ್ವರೂಪ ತಾಳಿ, ಹಿಮಾದ್ರಿಯ ಸೇರಿ ದ್ರೋಣಾಚಲವನ್ನೇ ಎತ್ತಿ ತಂದ ಘಟನೆಯು ರಾಮಾಯಣದ ಸಾಹಸಗಾಧೆ ಸಂಜೀವಿನಿಯಂತಹ ಜೀವಸಂರಕ್ಷೆಯ ಗಿಡಮೂಲಿಕೆಗಳು ಔಷಧಿಯ ಸಸ್ಯಗಳು ಇಂದಿಗೂ ಸರ್ವಜನ ಮಾನ್ಯವಾಗಿದೆ. ಅಂತಹ ಸಸ್ಯ-ಪ್ರಭೇದಗಳನ್ನು ಪೋಷಿಸುವ ಪರಿಚಯಿಸುವ ಮತ್ತು ಸಂರಕ್ಷಿಸುವ ಉದ್ದೇಶದಿಂದ ಶ್ರೀಕ್ಷೇತ್ರದಲ್ಲಿ ಸಂಜೀವಿನಿ ಉದ್ಯಾನವನ ನಿರ್ಮಾಣವಾಗಿದೆ.ಪಂಚಮುಖಿ

ಆಂಜನೇಯ ಕ್ಷೇತ್ರದಲ್ಲಿ ದರ್ಶನದ ಸಮಯ :

7.00 am to  8.00 pm

ನಿತ್ಯಪೂಜೆಯು ದಿನಾ ಬೆಳಗ್ಗೆ ಗಂಟೆ 7.30 ಕ್ಕೆ ನಡೆಯುತ್ತದೆ.

ಸಂಜೆ ಗಂಟೆ 7.15ಕ್ಕೆ ಮಹಾಮಂಗಳಾರತಿ ನಡೆಯುತ್ತದೆ.

ಶನಿವಾರದ ದಿನ ಪಂಚಮುಖಿ ಆಂಜನೆಯ ಸ್ವಾಮಿಗೆ ವಿಶೇಷ ದಿನವಾಗಿದ್ದು ಅಂದು ಸಂಜೆ 7.15 ಕ್ಕೆ ವಿಶೇಷವಾಗಿ ರಂಗಪೂಜೆ ಇರುತ್ತದೆ.

ಮಾರ್ಗ-ದರ್ಶನ

  • ಶ್ರೀಕ್ಷೇತ್ರ ಹನುಮಗಿರಿಯು ಪುತ್ತೂರು ತಾಲೂಕಿನ ಈಶ್ವರಮಂಗಲ ಪೇಟೆಯ ಪಕ್ಕದಲ್ಲಿದ್ದುಈಶ್ವರಮಂಗಲಕ್ಕೆ ರಸ್ತೆ ಮುಖಾಂತರ ಬರುವುದಾದಲ್ಲಿ ಇತ್ತಕಡೆ ಮಂಗಳೂರು –ಪುತ್ತೂರು – ಕಾವು  ಮಾರ್ಗವಾಗಿಯೂ, ಅಲ್ಲದೇ ಬೆಂಗಳೂರಿಂದಾದಲ್ಲಿ, ಉಪ್ಪಿನಂಗಡಿ – ಪುತ್ತೂರು –  ಕಾವು ಮಾರ್ಗವಾಗಿಯೂ, ಅತ್ತ ಮೈಸೂರು, ಮಡಿಕೇರಿ ಕಡೆಯಿಂದ ಆಗಮಿಸುವವರು ಸುಳ್ಯ – ಪುತ್ತೂರು ಮಾರ್ಗವಾಗಿ ಕಾವು ಎಂಬಲ್ಲಿ ಈಶ್ವರಮಂಗಲದ ಸಂಪರ್ಕ ರಸ್ತೆಯಲ್ಲಿ ಬಂದು ಈಶ್ವರಮಂಗಲವನ್ನು ತಲುಪಬಹುದು.
  • ಅತೀ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಮಂಗಳೂರು – ಬಜ್ಪೆ ವಿಮಾನ ನಿಲ್ದಾಣ,ಸುಮಾರು 71ಕಿ.ಮೀ. ದೂರದಲ್ಲಿದೆ.
  • ರೈಲುಮಾರ್ಗದ ಪಯಣದಲ್ಲಿ ಅತಿ ಹತ್ತಿರದ ನಿಲ್ದಾಣ ಪುತ್ತೂರು (ಕಬಕ ಪುತ್ತೂರು) ರೈಲ್ವೇ ನಿಲ್ದಾಣಹನುಮಗಿರಿಗೆ ಸುಮಾರು 23ಕಿ.ಮೀ ದೂರವಿದೆ.  ಮಂಗಳೂರು- ಬೆಂಗಳೂರುನಡುವೆ ಚಲಿಸುವ ಎಲ್ಲಾ ರೈಲುಗಳಿಗೆ ಈ ನಿಲ್ದಾಣದಲ್ಲಿ ನಿಲುಗಡೆ ಇದ್ದುಇಲ್ಲಿಂದ ಹನುಮಗಿರಿಗೆ ತಲುಪಲು, ಬಸ್, ಕಾರು ಹಾಗೂ ಇನ್ನಿತರ ಖಾಸಗೀ ವಾಹನಗಳ ಸೇವೆ ಲಭ್ಯವಿದೆ.

ಹನುಮಗಿರಿಗೆ ಹತ್ತಿರದ ಬಸ್ಸು ನಿಲ್ದಾಣಗಳು

 ಕೆ.ಎಸ್.ಅರ್.ಟಿ.ಸಿ. ಬಸ್ಸು ನಿಲ್ದಾಣ ಪುತ್ತೂರು, ಇಲ್ಲಿಂದ ಹನುಮಗಿರಿಗೆ ಸುಮಾರು 23 ಕಿ.ಮೀ  ಇದೆ.
ಫೋನ್: +91 08251-232103
ಕೆ.ಎಸ್.ಅರ್.ಟಿ.ಸಿ. ಬಸ್ಸು ನಿಲ್ದಾಣ ಕುಂಬ್ಳೆ, ಇಲ್ಲಿಂದ ಹನುಮಗಿರಿಗೆ ಸುಮಾರು 49 ಕಿ.ಮೀ  ಇದೆ
ಕೆ.ಎಸ್.ಅರ್.ಟಿ.ಸಿ. ಬಸ್ಸು ನಿಲ್ದಾಣ ಸುಳ್ಯ, ಇಲ್ಲಿಂದ ಹನುಮಗಿರಿಗೆ ಸುಮಾರು 24 ಕಿ.ಮೀ  ಇದೆ
ಫೋನ್: +91 08257-230684

ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಪುತ್ತೂರು, ಮಡಿಕೇರಿ, ಸುಳ್ಯ, ಈ ಪ್ರದೇಶಗಳಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಮತ್ತು ಖಾಸಗಿ ವಾಹನಗಳ ವ್ಯವಸ್ಥೆ ಇದೆ.

ಬೆಂಗಳೂರಿನಿಂದ ಹಾಸನ ಮಾರ್ಗವಾಗಿ, ಪುತ್ತೂರು, ಪುತ್ತೂರಿನಿಂದ ಸುಳ್ಯ ರಸ್ತೆಯಲ್ಲಿ ಕಾವು – ಕಾವಿನಿಂದ  ಈಶ್ವರಮಂಗಲ (ಹನುಮಗಿರಿ)

ಮಂಗಳೂರಿನಿಂದ ಬಿ.ಸಿ.ರೋಡ್ ಮಾರ್ಗವಾಗಿ, ಪುತ್ತೂರು,  ಪುತ್ತೂರಿನಿಂದ ಕಾವು –  ಈಶ್ವರಮಂಗಲ (ಹನುಮಗಿರಿ)

See also  ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ರಾಜನ್ ದೈವಸ್ಥಾನ :ವಾರ್ಷಿಕ ದೊಂಪದ ಬಲಿ ನೇಮೋತ್ಸವ

ಮೈಸೂರಿನಿಂದ ಕುಶಾಲನಗರ ಮಾರ್ಗವಾಗಿ, ಮಡಿಕೇರಿ, ಸುಳ್ಯ,  ಸುಳ್ಯದಿಂದ ಪುತ್ತೂರು ಮಾರ್ಗದಲ್ಲಿ ಕಾವಿನಲ್ಲಿ ತಿರುಗಿ –  ಈಶ್ವರಮಂಗಲ (ಹನುಮಗಿರಿ)

 ಹನುಮಗಿರಿಗೆ ಹತ್ತಿರದ ರೈಲ್ವೇ ಸ್ಟೇಶನ್‍ಗಳು

ಪುತ್ತೂರು ರೈಲ್ವೇ ಸ್ಟೇಶನ್, ಇಲ್ಲಿಂದ ಹನುಮಗಿರಿಗೆ ಸುಮಾರು 23 ಕಿ.ಮೀ  ಇದೆ.

ಕುಂಬ್ಳೆ ರೈಲ್ವೇ ಸ್ಟೇಶನ್, ಇಲ್ಲಿಂದ ಹನುಮಗಿರಿಗೆ ಸುಮಾರು 49 ಕಿ.ಮೀ  ಇದೆ

ಮಂಗಳೂರು ರೈಲ್ವೇ ಸ್ಟೇಶನ್, ಇಲ್ಲಿಂದ ಹನುಮಗಿರಿಗೆ ಸುಮಾರು 71 ಕಿ.ಮೀ  ಇದೆ

ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರ

ಹನುಮಗಿರಿ

ಈಶ್ವರಮಂಗಲ ಪೋಸ್ಟ್

ಪುತ್ತೂರು ತಾಲುಕು, ದ.ಕ

ಪಿನ್: 574313

ಸಂಪರ್ಕಿಸಿ

ಆಫೀಸ್ ನಂ. 02851-289444

ಮೊ: 8105554544

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?