ಈ ಕ್ಷೇತ್ರದಲ್ಲಿರುವ ದೈವಗಳು
ಪಟ್ಟದ ಚಾವಡಿಯಲ್ಲಿ – ಉಳ್ಳಾಕುಲು , ಹಳ್ಳತಾಯ , ಪಣ್ಯಾಡಿತಾಯ , ರುದ್ರಂಡಿ , ಪಂಜುರ್ಲಿ , ಕಲ್ಲುರ್ಟಿ
ಬೀಡಿನಲ್ಲಿ – ಬೀಡಿನ ಕಲ್ಲುರ್ಟಿ
ಕಟ್ಟೆಗಳಲ್ಲಿ – ಪಂಜುರ್ಲಿ, ಕಲ್ಲುರ್ಟಿ , ಕಾಡೆತ್ತಿ . ಬಿರ್ಮೆರ್ , ಗುಳಿಗ
ದೈಯೊಂಕುಲು ಗುಡ್ಡೆಯಲ್ಲಿ – ದೈಯೊಂಕುಲು , ಮಹಿಸಂದಾಯ , ರುದ್ರಚಾಮುಂಡಿ , ಪಂಜುರ್ಲಿ, ಗುಳಿಗ
ಮಾಡದಲ್ಲಿ- ಪಂಜುರ್ಲಿ
ಸೇವೆಗಳು – ತಂಬಿಲ ಸೇವೆ ಎರಡು ಸಲ – ಪತ್ತನಾಜೆ ಮತ್ತು ದೀಪಾವಳಿ
ನರ್ತನ ಸೇವೆ – ಎರಡು ಸಲ – ಮಯಿ ನಡಾವರಿ ಮತ್ತು ಸುಗ್ಗಿ ಜಾತ್ರೆ
ತಂಬಿಲ ಮಾಡುವವರು – ಪ್ರಸ್ತುತ ತಂತ್ರಿ ವರ್ಗ , ಇದಕ್ಕೆ ಮೊದಲು ದೈವದ ಪೂಜಾರಿ, ಆದಿಯಲ್ಲಿ ಪೂರೋಹಿತ ವರ್ಗ
ದೈವ ಪ್ರತಿಷ್ಠಾ ವಿಧಿ – ತಂತ್ರಿ ವರ್ಗ
ದೈವಗಳ ಆದಿ – ಉದ್ಯಪ್ಪ ಅರಸರ ಅಪ್ಪಣೆ ಮೇರೆಗೆ ನೆಲೆ ಆದ ಮಾಹಿತಿ ಪಾರ್ದನದಲ್ಲಿದೆ
ನಿಜವಾದ ದೈವ ಆರಾಧಕ ಯಾರು ?
- ಆಂತರಿಕವಾಗಿ ದೈವವನ್ನು ತನ್ನ ಮನದಲ್ಲಿ ಪ್ರತಿಷ್ಠೆ ಮಾಡಿದವನು ಮಾತ್ರ
- ಆತ ಹಂತ ಹಂತವಾಗಿ ದೇವಮಾನನಾಗಿ ಪರಿವರ್ತನೆ ಆಗುತಿರುತ್ತಾನೆ
- ಅವನಲ್ಲಿ ಒಳ್ಳೆಯ ಚಿಂತನೆ ಮಂಥನಗಳು ಮಾತ್ರ ನಡೆಯುತ್ತದೆ. ಕೆಟ್ಟದನ್ನು ಬರಲು ದೈವ ಬಿಡುವುದಿಲ್ಲ
- ಬೂತ ಉಪದ್ರಕಾರಿ ಆದರೆ ದೈವ ಉಪಕಾರಿ
- ದೈವವನ್ನು ನಂಬುವರಾಗಿ ಯಾವುದೇ ಕಾರಣಕ್ಕೆ ಬೂತವನ್ನು ನಂಬ ಬೇಡಿ
- ದೈವ ವಿಶ್ವ ವ್ಯಾಪಿ , ದೇಶ, ಕಾನೂನು – ಮಿತಿ ಇದೆ.
- ಮಾನನಿಗೆ ನಿಲುಕದ ಪವಾಡಗಳು ಸಾಧ್ಯ
- ಅಲ್ಪ ಜ್ಞಾನಿ ಮಾನವ , ಮಾಯಾ ಜ್ಞಾನಿ ದೈವ
- ದೈವ ಶಕ್ತಿ ಅಪಾರ , ಮಾನವ ಶಕ್ತಿ ನಗಣ್ಯ
ದೇವ ಇಚ್ಛೆ . ದೈವ ಇಚ್ಛೆ, ಮಾನವ ಇಚ್ಛೆ ಒಂದಾಗಲಿ ಹಾರೈಕೆ – ನನ್ನದಾಗಿದೆ, ನಮ್ಮದಾಗಲಿ