ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ದೋಂತಿಲವೆಂಬಲ್ಲಿ ಸುಮಾರು 900 ವರ್ಷಗಳ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಸುಬ್ರಹ್ಮಣ್ಯ ದೇವರ ದೇವಾಲಯವಿದೆ. ಈ ಪುರಾತನ ಪುಣ್ಯ ಕ್ಷೇತ್ರವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಿಗುವ ನೆಲ್ಯಾಡಿ ಎಂಬ ಪೇಟೆಯಿಂದ ಬಲ್ಯ ಮಾರ್ಗದಲ್ಲಿ ಸುಮಾರು 2 ಕಿ.ಮೀ. ದೂರದಲ್ಲಿದೆ. ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಮಧ್ವ ಮತದ ಪ್ರಚಾರಕರಾದಂತಹ ಓರ್ವ ಶ್ರೇಷ್ಠ ಆಚಾರ್ಯರ ಸಂಕಲ್ಪದಿಂದ ಪ್ರತಿಷ್ಠಾಪನೆಗೊಂಡು ಆರಾಧಿಸಲ್ಪಟ್ಟಂತಹ ಶ್ರೀ ವಿಷ್ಣುಮೂರ್ತಿ ದೇವರು ಇಲ್ಲಿ ನೆಲೆಸಿದ್ದರು ಎಂಬುವುದು ಇತಿಹಾಸ ಕಾರಣಾಂತರಗಳಿಂದ ವಿಷ್ಣುಮೂರ್ತಿದೇವರ ಸ್ಥಾನಪಲ್ಲಟವಾದ ನಂತರ ನಾಗ ಸಾನ್ನಿಧ್ಯದ ಪ್ರಾಬಲ್ಯದಿಂದ ಸುಬ್ರಹ್ಮಣ್ಯ ಕ್ಷೇತ್ರವಾಗಿ ರೂಪುಗೊಂಡು ಭಕ್ತರ ಮನದಲ್ಲಿ ನೆಲೆನಿಂತು ಆರಾಧಿಸಲ್ಪಡುತ್ತಾ ಬಂದಿರುತ್ತದೆ.
ಪ್ರಸ್ತುತ ದೇವಳವು ಜೀರ್ಣಾವಸ್ಥೆಯಲ್ಲಿದ್ದು ದೇವಳದ ಅಡಳಿತ ಮಂಡಳಿಯು ಪ್ರಸಿದ್ಧ ಜ್ಯೋತಿಷ್ಯಶಾಸ್ತ್ರಜ್ಞರಾದ ಉಡುಪಿಯ ವಿದ್ವಾನ್ ಶ್ರೀ ಗೋಪಾಲಕೃಷ್ಣ ಜೋಯಿಸರನ್ನು ಕರೆಸಿ, ದೇವರ ಸನ್ನಿಧಿಯಲ್ಲಿ, ಊರಿನ ಪ್ರಮುಖರ ಸಮ್ಮುಖದಲ್ಲಿ ಪ್ರಶ್ನಾಚಿಂತನೆ ನಡೆಸಿದಾಗ ಶ್ರೀ ಸುಬ್ರಹ್ಮಣ್ಯ ದೇವರ ಸಾನ್ನಿಧ್ಯದೊಂದಿಗೆ ಶ್ರೀ ವಿಷ್ಣುಮೂರ್ತಿ ದೇವರ ಸಾನ್ನಿಧ್ಯವೂ ಸಹ ಇರುವುದು ಕಂಡು ಬಂದಿರುತ್ತದೆ.
ಅದರ ಪ್ರಕಾರ ಶ್ರೀ ಮಹಾವಿಷ್ಣುಮೂರ್ತಿ ದೇವರಿಗೆ ಮತ್ತು ಶ್ರೀ ಸುಬ್ರಹ್ಮಣ್ಯ ದೇವರಿಗೆ ಪ್ರತ್ಯೇಕ ಗರ್ಭಗುಡಿ ಹಾಗೂ ಕ್ಷೇತ್ರ ದೇವತೆಯಾದಂತಹ ಚಾಮುಂಡೇಶ್ವರಿ ದೇವಿಗೆ ಮತ್ತು ಹೊಸಳಿಗಮ್ಮನಿಗೆ ನೂತನ ಕಟ್ಟೆಯನ್ನು ನಿರ್ಮಾಣ ಮಾಡಬೇಕೆಂಬ ಸದಾಭಿಪ್ರಾಯಕ್ಕೆ ಬರಲಾಗಿದೆ.

ಶ್ರೀ ಕ್ಷೇತ್ರದಲ್ಲಿ ಸುಮಾರು 15 ಸಾಲುಗಳಿರುವ ಶಾಸನವೊಂದು ದೊರೆತಿರುತ್ತದೆ. ಈ ಶಿಲಾ ಶಾಸನವು ಕನ್ನಡ ಲಿಪಿಯಲ್ಲಿದ್ದು 30 ಇಂಚು ಎತ್ತರ ಹಾಗೂ 16 ಇಂಚು ಅಗಲವಿದೆ “ಶಾಸನ ಶೋಧನ-ಅಧ್ಯಯನ-ಸಂರಕ್ಷಣಾ” ಯೋಜನೆಯೆಂಬ ಕಾರ್ಯಕ್ರಮದ ಅಡಿಯಲ್ಲಿ ಅಧ್ಯಯನ ನಡೆಸಿದಾಗ ಈ ಶಾಸನವು ಸುಮಾರು 800 ವರ್ಷ ಹಳೆಯದಾಗಿದ್ದು ಈ ಕ್ಷೇತ್ರದಲ್ಲಿ ಜೈನರಾಜರ ಆಳ್ವಿಕೆಯ ಕಾಲದಲ್ಲಿ ಮಹಾಯಾಗವನ್ನು ನಡೆಸಿದ ಉಲ್ಲೇಖವಿದೆ ಹಾಗೂ ಕುಕ್ಕೆ ಕ್ಷೇತ್ರಕ್ಕೂ ಇಲ್ಲಿಗೂ ಸಂಬಂಧವಿರಬಹುದು ಎಂದು ಇತಿಹಾಸಗಾರರು ತಮ್ಮ ಅಭಿಪ್ರಾಯವನ್ನು ಸೂಚಿಸಿರುತ್ತಾರೆ. ಇನ್ನಷ್ಟು ಅಧ್ಯಯನಗಳು ಶಾಸನದ ಮೇಲೆ ನಡೆಯುತ್ತಿದೆ .

ಕ್ಷೇತ್ರ ದೇವತೆಯಾದ ಚಾಮುಂಡೇಶ್ವರಿ ದೇವಿಯ ಮೂಲವು ದೇವಳದಿಂದ ಸುಮಾರು 5 ಕಿ.ಮೀ. ದೂರದಲ್ಲಿ ಇರುವ ಎಣ್ಮಡ್ಕ ಎಂಬ ದಟ್ಟ ಅಡವಿಯ ನಡುವೆ ಇದ್ದು ಸನ್ಯಾಸಿಯೊರ್ವರು ಈ ದೇವಿಯನ್ನು ಆರಾಧಿಸಿರುವುದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದ್ದು, ಇಲ್ಲಿರುವ ಜಲ ಸಂಕೇತವು ತೀರ್ಥ ಸ್ವರೂಪವಾಗಿದೆ. ಎಣ್ಮಡ್ಕ ಕ್ಕೂ ಶ್ರೀ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದ್ದು ವಾರ್ಷಿಕ ಕಿರು ಷಷ್ಠಿಯ ದಿನದಂದು ದೇವಳದಿಂದ ಪಂಚ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತೆರಳಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಅಲ್ಲಿಂದ ತೀರ್ಥವನ್ನು ತರುವುದು ಹಿಂದಿನಿಂದಲೂ ರೂಢಿಯಲ್ಲಿರುವ ಸಂಪ್ರದಾಯ.

ಕ್ಷೇತ್ರದ ಇತಿಹಾಸದ ಪ್ರಕಾರ ಸುಮಾರು 100 ವರ್ಷಗಳ ಹಿಂದೆ ಜಾನುವಾರುಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾಗ ಗ್ರಾಮಸ್ಥರು ದೇವರ ಬಳಿ ಬಂದು ರೋಗ ಪರಿಹಾರವಾದರೆ ರಂಗ ಪೂಜೆ ಮಾಡಿಸುವುದಾಗಿ ಹರಕೆ ಹೇಳಿಕೊಂಡ ನಂತರ ಸಮಸ್ಯೆಗೆ ಪರಿಹಾರ ದೊರಕಿತ್ತು. ಇಂದಿಗೂ ಕೂಡ ವಾರ್ಷಿಕವಾಗಿ ರಂಗ ಪೂಜೆ ಕಾರ್ಯಕ್ರಮ ಪ್ರತಿ ವರ್ಷವೂ ನಡೆಯುತ್ತಾ ಬಂದಿದೆ.
ಚಂಪಾ ಷಷ್ಠಿಯ ದಿನದಂದು ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರತವನ್ನು ಆಚರಣೆ ಮಾಡಿ ಮಧ್ಯಾಹ್ನದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವರ ಪ್ರಸಾದವನ್ನು ಸ್ವೀಕಾರ ಮಾಡುವ ಪದ್ಧತಿ ಜಾರಿಯಲ್ಲಿದೆ.

ಜೀರ್ಣೋದ್ದಾರದ ದ ಈ ಪುಣ್ಯಕಾರ್ಯದಲ್ಲಿ , ಸಮಾಜ ಕಲ್ಯಾಣದ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಧರ್ಮ ಕಾರ್ಯದಲ್ಲಿ ಧಾರ್ಮಿಕ ಬಂಧುಗಳು ತನು-ಮನ-ಧನಗಳೊಂದಿಗೆ ಕೈಗೂಡಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ .




Archana S: The Rising Dance & Yoga Star from Sampyadi
Archana S: The Young Star of Sampyadi Who Conquered Dance, Yoga, and Music A Rising Star from Sampyadi Village From …
Shree Mahavishnu Subrahmanyeshwara temple ,Donthila
In the village of Kowkradi, located in Kadaba Taluk of Dakshina Kannada district, there exists a temple of Lord Subrahmanya …
Shree Mahavishnu Subrahmanyeshwara temple ,Dhonthila ,Kowkrady village
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ದೋಂತಿಲವೆಂಬಲ್ಲಿ ಸುಮಾರು 900 ವರ್ಷಗಳ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಸುಬ್ರಹ್ಮಣ್ಯ ದೇವರ ದೇವಾಲಯವಿದೆ. ಈ ಪುರಾತನ ಪುಣ್ಯ …
Komban Holidays Nelyadi: Your Trusted Travel Partner in Karnataka
Komban Holidays Nelyadi: Your Trusted Travel Partner in Karnataka Komban Holidays Nelyadi isn’t just another travel agency—it’s a trusted companion …
Ashirwad Towing Service Nelyadi – 24×7 Roadside Assistance, Travel & Car Care
Ashirwad Towing Service When your vehicle breaks down in the middle of a journey, the only thing you want …
Website Designing & Digital Marketing in Nelyadi – GA Software
Crafting Digital Success for Businesses in Nelyadi and Kadaba In today’s fast-moving business environment, simply running a store or providing …
KRS Royal Masala Herbal Leaf Tea – Natural Wellness in a Cup
KRS Royal Masala Herbal Leaf Tea – A Flavorful Fusion of Wellness and Tradition Introduction to KRS Royal Masala Herbal …
Facebook Pixel Integration for Businesses in Nellyadi & Kadaba
Facebook Pixel Integration with Website and Its Advantages Table of Contents 1. Introduction 2. Importance 3. Prerequisites 4. Step-by-Step …
Digital Marketing, Keywords, and SEO Difficulties (Explained in Detail with Tools)
Digital Marketing, Keywords, and SEO Difficulties (Explained in Detail with Tools) Introduction to Digital Marketing What is Digital Marketing? Importance …
Hotel Birwa:Tata EV Charging Point Nellyadi
Tata EV Charging Point Nelyadi: Hotel Birwa’s Ultimate Pit Stop Table of Contents Introduction: Hotel Birwa, Your Tata EV Hub …
Admissions Open 2025 | Jnanodaya Bethany PU College Nelyadi
✨📘Your Journey to Success Begins at Jnanodaya Bethany PU College🎓🌟🚀 Welcome to a Legacy of Excellence A Glorious Past: History …
Admissions Open | Jnanodaya Bethany PU College, Nellyadi
💡 Enroll Now at Jnanodaya Bethany PU College, Nellyadi – Where Future Leaders Are Forged 🌟 Empowering Education in the …
Enroll Now at Jnanodaya Bethany PU College, Nellyadi
1. Introduction: Igniting Minds, Inspiring Futures Located in the serene landscape of Dakshina Kannada, Jnanodaya Bethany PU College, Nelyadi (📍 …
Jnanodaya PU College Nelyadi: Empowering Bright Futures
🌟 Jnanodaya Bethany PU College, Nelyadi A Place Where Excellence Meets Education 🎓 📌 About the College Nestled in the …
Jnanodaya Bethany PU College Nelyadi:Excellence in Education
A Legacy of Excellence in Education Introduction Overview of Jnanodaya Bethany PU College,Nelyadi Commitment to quality education History and Establishment …
IICT Computer Education – Nelyadi & Kadaba
IICT Institution – Your Gateway to Quality Education and Career Growth Are you looking for quality education and career-oriented training …
Addlu Spices: Trusted Natural Spices & Ayurvedic Goods
The Best Natural Spices & Ayurvedic Goods Introduction Since November 2021, addlu spices has been delivering premium-quality natural spices, homemade …
Shri Rama School Pattoor – A Hub of Knowledge & Tradition
Pattooru: A Place of Culture and Knowledge 1. Introduction Pattooru, a small yet culturally rich Place in Belthangady Taluk, Karnataka, …
Discover Comfort & Serenity at Olympia Comforts Kokkada
OLYMPIA COMFORTS KOKKADA – BEST STANDARD AND DELUXE ROOMS NEAR DHARMASTHALA Olympia Comforts Kokkada, your ideal retreat nestled in the …
Krishna Gold and Diamonds Set to Open in Mangaluru: A New Era of Luxury Jewelry
Introduction Exciting news for jewelry enthusiasts in Mangaluru! Krishna Gold and Diamonds, a name synonymous with luxury, quality, and exquisite …















