
ಕೃಷಿಕ ಫೂಟ್ಬಾಲ್ ಆಟಗಾರರ ಚೆಂಡು – ಸಕಲರೂ ಒದೆಯುವವರೆ , ನಾವು ಇನ್ನು ಅನ್ಯರನ್ನು ಚೆಂಡು ಎಂದು ಪರಿಗಣಿಸಿ ಆಟಗಾರರಾಗಿ – ಕನಿಷ್ಠ ಬದುಕನ್ನು ಕಟ್ಟುವ ನಿಟ್ಟಿನಲ್ಲಿ ಉದಯವಾಗಿದೆ ಕೃಷಿ ಅಭಿಯಾನದ ಒಂದು ಭಾಗ – ಕರಿಮೆಣಸು ಕೃಷಿ ಅಭಿಯಾನ.
ಅತಿ ಕಡಿಮೆ ಜಾಗದಲ್ಲಿ – ೨೦ ಸೆನ್ಸ್ ನಲ್ಲಿ , ೫ ಸೆನ್ಸೆನಲ್ಲಿ ಮನೆ , ಉಳಿದ ೧೫ ಸೆನ್ಸ್ ಸ್ಥಳದಲ್ಲಿ , ೮x ೮ ಅಂತರದಲ್ಲಿ ಹಲಸಿನ ಯಾ ಇತರ ಗಿಡ ಬೆಳೆಸಿ , ಅದರಲ್ಲಿ ಕರಿಮೆಣಸು ಕೃಷಿ ಸಮರ್ಪಕ ರೀತಿಯಲ್ಲಿ ಮಾಡಿದರೆ – ಗಿಡ ಒಂದಕ್ಕೆ ೧೦ ಕಿಲೋ ಒಣ ಕರಿಮೆಣಸು ಪ್ರಕಾರ ೧೦೦೦ ಕಿಲೋ ಸಿಗುವ ಸಾಧ್ಯತೆಯನ್ನು ಪ್ರಗತಿಪರ ಕೃಷಿಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ನಾವು ಇಂದು ಕೃಷಿ ಅನುಭವಕ್ಕಾಗಿ ಊರೂರು ಸುತ್ತುವುದು, ಪ್ರಗತಿಪರ ಕೃಷಿಕರ ಮಾಹಿತಿ ಯೌಟ್ಯೂಬಿನಲ್ಲಿ ಆಳಿಸುವುದು , ಕೃಷಿ ಮಾಹಿತಿ ಶಿಬಿರಗಳಿಗೆ ಹೋಗುವುದು , ಕೃಷಿ ವಿಜ್ಞಾನಿಗಳ ಮಾಹಿತಿ ಸಂಗ್ರಹಣೆ – ಇತ್ಯಾದಿಗಳನ್ನು ನಮ್ಮ ಮೊಬೈಲ್ ಮೂಲಕ ಪ್ರತಿ ಕೃಷಿಕರ ಅನುಭವ ಹಂಚಿಕೊಳ್ಳುವ ನೂತನ ಆವಿಸ್ಕಾರ ಇಲ್ಲಿ ಅನುಷ್ಠಾನ ಮಾಡಲಾಗುವುದು.
ಕೃಷಿ ವಿಜ್ಞಾನಿಗಳು – ಕೃಷಿ ಕ್ಷೇತ್ರವನ್ನು ಪ್ರಯೋಗಶಾಲೆ ಮಾಡಿದ ಕೃಷಿಕನೆ ಎಂಬ ಕಟು ಸತ್ಯ ಅರಿತರೆ ಮಾತ್ರ ನಮಗೆ ಬದುಕು ಇಲ್ಲದಿದ್ದರೆ ಸಾವು .
ಪ್ರತಿ ಊರಿನಲ್ಲಿ ಆಸಕ್ತಿ ಇರುವವರು – ಈ ಅಭಿಯಾನದಲ್ಲಿ ಒಬ್ಬರು ಅಧ್ಯಕ್ಷರು ಉಳಿದವರು ಉಪಾಧ್ಯಕ್ಷರಾಗಿ – ಒಬ್ಬನನ್ನು ವರದಿಗಾರರನ್ನಾಗಿ ಮಾಡಿ – ಪ್ರತಿ ಕೃಷಿಕರ ಅನುಭವ , ಆವಿಸ್ಕಾರ , ಸಂಗ್ರಹ ಮಾಹಿತಿ ಇತ್ಯಾದಿಗಳನ್ನು ಈ ವೇದಿಕೆಯಲ್ಲಿ ಹಾಕಿದಾಗ – ನಾವೆಲ್ಲರೂ ಕೃಷಿ ಪಂಡಿತರಾಗಿ ನಮ್ಮ ನೆಮ್ಮದಿ ಬದುಕು ನಮಗೆ ಸಿಗಲಿದೆ.
ನಮ್ಮ ಕೃಷಿ ಸಂಪಾದನೆಯಲ್ಲಿ ಕನಿಷ್ಠ ನಿರ್ವಹಣೆ ವೆಚ್ಚ – ಗರಿಷ್ಠ ಉತ್ಪಾದನೆಗೆ ದಾರಿಗಳ ಮಾಹಿತಿ ಲಭ್ಯ ಸಾಧ್ಯತೆ
ನೀರಿಗಾಗಿ ವೆಚ್ಚ ಕಾರ್ಮಿಕರಿಗಾಗಿ ತೊಳಲಾಟ ಕಡಿಮೆ ಆಗಲಿದೆ
ಉದ್ಯೋಗಕ್ಕಾಗಿ ಅಲೆಮಾರಿಗಳ ಸಂಖ್ಯೆ ಶೂನ್ಯದತ್ತ ಸಾಗಲಿದೆ
೫೦ ಪದಗಳ ಭಾವಚಿತ್ರ ಸಹಿತ ಮಾಹಿತಿಗೆ ಕನಿಷ್ಠ ಶುಲ್ಕ ೨೦೦ ಇದರಲ್ಲಿ ೩೦% ಪಾಲುದಾರಿಕೆ ಇರುತದೆ.
ಜಾಗತಿಕ ಅತಿ ಶ್ರೀಮಂತರು – ಕೃಷಿ ಕ್ಷೇತ್ರಕ್ಕೆ ದುಮುಕುತಿದ್ದಾರೆ – ನಾವು ಬದುಕಿಗಾಗಿ ಹೊರಡೋಣ