ದೇವರು ಇರುವ ಸ್ಥಳ ದೇವಾಲಯ. ಬೆರಳೆಣಿಕ ದೇವಾಲಯಗಳನ್ನು ಬಿಟ್ಟರೆ ಅನ್ಯ ದೇವಾಲಯಗಳು ಜನರಿಗೆ ,ಭೂಮಿಗೆ ಭಾರವಾಗಿರುವ ಕಟ್ಟಡ ಮಾತ್ರ . ದೇವರೆಂಬ ಅತ್ಯಂತ ಸುಂದರ ಮೂರ್ತಿಯ ರುಂಡ, ಮುಂಡ ಕೈ, ಕಾಲು,ದೇಹ – ಎಲ್ಲವನ್ನು ತುಂಡು ತುಂಡು ಮಾಡಿ – ಒಂದೊಂದು ತುಂಡುಗಳನ್ನು ದೇವರೆಂದು ದೇವಲಯದಲ್ಲಿಟ್ಟು ಪೂಜಿಸುವ ವಿಭಿನ್ನ ಜಾತಿ ಮತಗಳ ಪ್ರವೃತ್ತಿ – ಪ್ರಜಾ ಪದ್ದತಿಯನ್ನು ಸಮಾಧಿ ಮಾಡಿದ ರಾಜಕೀಯ ಪಕ್ಷಗಳಂತೆ ಬಾವಿಸುತ್ತದೆ.
ದೇವಾಲಯ ಮತ್ತು ದೇವರು ಮಾನವ ಕುಲ ಕೋಟಿಯ ಪ್ರಥಮ ಆದ್ಯತೆ ಅಂದು – ಆದರೆ ಇಂದು ಕೊನೆಯ ಆದ್ಯತೆ ಎಂಬುದು ಕಣ್ಣಿಗೆ ಕಾಣುವ ಕಟು ಸತ್ಯ.
ನಾವು ಇಂದು ಆಚಾರ , ಅನಾಚಾರ, ಕಾಟಾಚಾರದ ಸಮ್ಮಿಲನದ ದಾರಿಯಲ್ಲಿ ದಾಪುಗಾಲು ಹಾಕುತ್ತಿರುವದು ಆಮೆ ನಡಿಗೆಗೆ ಕಾರಣವಾಗಿದೆ. ಒಂದೇ ತಾಯಿಯ ಮಕ್ಕಳಾದ ನಾವು ಮಾನವರು ಸುಂದರ ನಾಳೆಗಾಗಿ – ಚಿಂತನ ಮಂಥನ ಅನುಷ್ಠಾನ ವೇದಿಕೆ – ದೇವಾಲಯ ಅಭಿಯಾನ ಪ್ರತಿ ದೇವಾಲಯದಿಂದ ………………….
ದೇವಾಲಯ ಅಭಿಯಾನ – ಸ್ವಾವಲಂಬಿ ಮತ್ತು ಸಂತುಷ್ಟ ದೇವಾಲಯ — ಬದುಕಿನ ದಿಟ್ಟ ಹೆಜ್ಜೆ
೧. ನಮ್ಮ ಒಳಗೆ ದೇವರಿದ್ದಾನೆ ಗೌರವಿಸಿ , ನಿತ್ಯ , ನಿರಂತರ , ಭಾವ ಪೂಜೆ ಸಲ್ಲಿಸಿದಾಗ ದೇವರು ದೇವಾಲಯದಲ್ಲಿ ಆಶೀರ್ವದಿಸುತ್ತಾನೆ
೨. ಮಠ – ದೇವಾಲಯಕ್ಕೆ, ದೇವಾಲಯ – ಮನೆಗೆ , ದೇವರು – ಮನಸ್ಸಿಗೆ , ಭೇಟಿಯ ಫಲಶ್ರುತಿ
೩. ಸದಾ ನಮ್ಮೊಳಗಿರುವ ದೇವರಿಗೆ ಮನೆ ಮಂದಿಯ ಶ್ರೇಷ್ಠ ಸ್ಥಾನ ಮಾನ
೪. ಪ್ರತಿಯೊಬ್ಬನಿಂದ ಕ್ಷೇತ್ರದಲ್ಲಿ ವಾರ್ಷಿಕ ನಿತ್ಯ ಪೂಜೆ
೫. ಆಂತರಿಕ ಸ್ವಚ್ಛತೆಗಾಗಿ (ಮನಸ್ಸಿನ) ದೇವರಲ್ಲಿ ವಿಮೆ (೧%) ಕ್ಷೇತ್ರ ನಾಮ ಸ್ಮರಣೆ ಪಠಣ
೬. ಬದುಕಿನ ವಿಶೇಷ ದಿನಗಳಲ್ಲಿ ಕ್ಷೇತ್ರ ಕಾಣಿಕೆ ಸಮರ್ಪಿಸಿ ಆಶೀರ್ವಾದ
೭. ವ್ಯಾಪಾರ ನೀತಿ ಅಳವಡಿಕೆ
೮. ದೇವಾಲಯದಿಂದ ತಿಂಗಳಿಗೊಮ್ಮೆ ಮನೆ ಮನೆ ಭೇಟಿ
೯. ದೇವಾಲಯದಲ್ಲಿ ವಿಶೇಷ ದಿನಗಳಲ್ಲಿ ಕಾಯಕ ಸೇವೆ – ರೋಗ ಮುಕ್ತ ಬಾಳಿಗಾಗಿ
೧೦. ಉದ್ದಿಮೆಗಳಲ್ಲಿ ದೇವರಿಗೆ ಪಾಲು
೧೧. ದೇವಾಲಯದಿಂದ ದೇವರಲ್ಲಿಗೆ
೧೨. ಜಗತ್ತಿನ ಅತಿ ದೊಡ್ಡ ಕಂಪನಿ ದೇವರು
೧೩. ವಯುಕ್ತಿಕ ಪೂಜೆಯಿಂದ – ಸಾಮೂಹಿಕ ಪೂಜೆಯತ್ತ
೧೪. ಬಾಳಿನ ಓಟಕ್ಕೆ – ಧಾರ್ಮಿಕ ಟ್ರೆಕ್
೧೫. ಒಂದೇ ತಟ್ಟೆಯಲ್ಲಿ ಊಟ ಮಾಡುವ ನಾವು ಬಂದುಗಳು (ಗಾಳಿ )
೧೬. ಅವಿಷ್ಕಾರಕೆ ಚಾಲನೆ – ಪರೋಕ್ಷ ಪೂಜೆ ಇತ್ಯಾದಿ
೧೭. ಉದ್ಯೋಗ ಉದ್ಯಮಕ್ಕೆ ಒತ್ತು
೧೮. ದೇವಾಲಯಕ್ಕೆ ಕೊಡುಗೆ ಸಲ್ಲ – ಸಾಲದ ಕಿಂಚಿತ್ತು ಪಾವತಿ
ದೇವಾಲಯ ಅಭಿಯಾನವೇ – ದೇವರ ಅಭಿಯಾನ – ಇದುವೇ ಅತ್ತ್ಯುತ್ತಮ ಅತಿ ವೇಗದ ಶಿಕ್ಷಣ – ಬದುಕಿನ ಶಿಕ್ಷಣ