ಮಾಧ್ಯಮ ಅಭಿಯಾನ
ಬದುಕಿನಲ್ಲಿ ಮಾಧ್ಯಮದ ಪಾತ್ರ ಅತ್ಯಂತ ಶ್ರೇಷ್ಠ. ಮಾತು ಒಂದು ಮಾಧ್ಯಮದಿಂದ ಹಿಡಿದು – ಸ್ಟೇಜ್ ಮಾಧ್ಯಮ, ಆಕಾಶವಾಣಿ , ಪೇಪರ್,ಟಿ .ವಿ , ಆನ್ಲೈನ್, ……….. ಇತ್ಯಾದಿಗಳ ಜೊತೆಗೆ ಬುಲೆಟಿನ್ ಮಾಧ್ಯಮ ಜನನವಾಗುತ್ತಿರುವುದು ಮಾಧ್ಯಮ ಕ್ರಾಂತಿಗೆ ನಾಂದಿ.
ಆಚಾರ ಕಾಟಾಚಾರ ಅನಾಚಾರಗಳಲ್ಲಿ ಆಚಾರಕ್ಕೆ ಮಾತ್ರ ಒತ್ತು ಕೊಟ್ಟು, ಪ್ರಚಾರ ಮತ್ತು ಪ್ರಸಾರಗಳಲ್ಲಿ ಪ್ರಸಾರಕ್ಕೆ ಮಾತ್ರ ಮೀಸಲು ಆಗಬೇಕಾಗಿದ್ದ ಮಾಧ್ಯಮ ಎಡವಿದೆ, ದಾರಿ ತಪ್ಪಿದೆ, ಕೊಳೆತ ಕೆಟ್ಟ ವಾಸನೆಯನ್ನು ಹೊರಹಾಕುತಿವೆ.
ವ್ಯಾಪಾರ ಕ್ಷೇತ್ರ ತನ್ನ ಪ್ರಾಭಲ್ಯವನ್ನು ಬದುಕಿನ ಮೂಲೆ ಮೂಲೆಗೆ ವ್ಯಾಪಿಸಿದ್ದು – ಶಿಕ್ಷಣ, ವೈದ್ಯಕೀಯ, ರಾಜಕೀಯ,ಪ್ರಜಾಪ್ರತಿನಿದಿ,ನ್ಯಾಯಾಂಗ, ……… ಮುಂತಾದ ಎಲ್ಲ ವಲಯಗಳಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿ ಮಾಧ್ಯಮವನ್ನು ಕೂಡ ಕೈಗೊಂಬೆ ಮಾಡಿರುವುದು ಮಾನವರ ಅಧಪತನದ ಅಂತಿಮ ಹೆಜ್ಜೆ
ಮಾಧ್ಯಮ ಹೇಗಿರಬೇಕು ಬಗ್ಗೆ ಕಲೆ ಹಾಕಿದ ಸಲಹೆಗಳು ಕೆಳಗಿನಂತಿವೆ
೧. ಒಳ್ಳೆಯ ವಿಷಯ ವಿಚಾರಗಳನ್ನು ಮಾತ್ರ ಪ್ರಸಾರಮಾಡಬೇಕು
೨. ಕೆಟ್ಟದನ್ನು ಮಾತ್ರ ವೈಭವೀಕರಿಸುವುದು ಈ ಕೂಡಲೆ ನಿಲ್ಲಿಸಬೇಕು
೩. ಜಾಗತಿಕ ಮಟ್ಟಕ್ಕೆ ಬೆಳೆಯಬಲ್ಲ ವಿಷಯಕ್ಕೆ ಮಹತ್ವ ನೀಡಿ ಬಾವಿಯಲ್ಲಿರುವ ಕಪ್ಪೆಯ ವಿಷಯಕ್ಕೆ ಇತಿಶ್ರೀ
೪. ತಪ್ಪು ಯಾರು ಮಾಡಿದರು ತಪ್ಪೇ ಶಿಕ್ಷೆ ಅನಿವಾರ್ಯ , ಆಗಲೇಬೇಕು
೫. ತಪ್ಪಿಗೆ ಶಿಕ್ಷೆ ಅನ್ಯರಿಗೆ ಪಾಠ – ತಪ್ಪು ಮರುಕಳಿಸುವುದಿಲ್ಲ
೬. ಪಕ್ಷ , ಜಾತಿಭೇದ ವರ್ಗಭೇದ ಖಂಡಿತ ಸಲ್ಲ
೭. ಪ್ರಜಾಪದ್ಧತಿ ಅಥವಾ ಅರಸು ಪದ್ಧತಿ – ಯಾವುದಾದರು ಸರಿ – ನಾಟಕೀಯ ಪದ್ಧತಿ ನಿಲ್ಲಿಸಲೆ ಬೇಕು
೮. ದೇಶದ ಕಾನೂನು ದೇಶದ ಪ್ರಜೆಗಳಿಗೆ ಪಾಲಿಸಲು ಅನ್ಯರಿಗಲ್ಲ ಎಂದು ಮನದಟ್ಟಿ ಮಾಡಿಸಬೇಕು
೯. ನೂರಕ್ಕೆ ನೂರು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದು ಆಡಳಿತದ ಪ್ರಥಮ ಆದ್ಯತೆ
೧೦ . ಮಾನವ ಬದುಕಿಗೆ ಕಾನೂನು ಟ್ರಾಫಿಕ್ ರೂಲ್ಸ್ ಸುಖಕರ ಬದುಕಿಗಾಗಿ – ನಿತ್ಯ ನಿರಂತರ ಸಾರೋಣ
೧೧. ಒಳ್ಳೆಯ – ಗಾಳಿ, ನೀರು, ಆಹಾರ ………… ಇದರೊಂದಿಗೆ ಒಳ್ಳೆಯ ವಿಷಗಳನ್ನು ಮಾತ್ರ ಉಣಬಡಿಸಬೇಕು
೧೨. ದುಷ್ಟ ಪ್ರಾಣಿ, ಶಿಷ್ಟ ಪ್ರಾಣಿ ಒಂದೆ ಗೂಡಿನಲ್ಲಿ ಸಾಕಿ ಸಲಹುವ ಪ್ರಳಯಾಂತಕ ಪ್ರಸ್ತುತ ವ್ಯವಸ್ಥೆಗೆ ಮಂಗಳ ಹಾಡೋಣ