ನಿರಂತರ ಆವಿಸ್ಕಾರಗಳು ನಮಗೆ ವಿಪುಲವಾದ ಸವಲತ್ತುಗಳನ್ನು ಕಲ್ಪಿಸಿದೆ. ಅದರಲ್ಲಿ ಫೇಸ್ಬುಕ್ ಮತ್ತು ವಾಟ್ಸಪ್ಪ್ ಮುಂಚೂಣಿಯಲ್ಲಿದ್ದು ಪ್ರತಿಯೊಬ್ಬ ಮಾನವರಿಗೂ ಕೂಡ ಮಾಧ್ಯಮ ಸೌಲಭ್ಯವನ್ನು ಒದಗಿಸಿರುವುದು ಅತ್ಯಂತ ದೊಡ್ಡ ವರ. ಇದನ್ನು ಬಳಕೆದಾರರಾದ ನಾವೆಲ್ಲರೂ ಒಳ್ಳೆಯ ದೃಷ್ಟಿಕೋನದಲ್ಲಿ ಮಾತ್ರ ಉಪಯೋಗ ಮಾಡಿದಾಗ, ನಾವು ಉಚಿತ ಸೌಲಭ್ಯ ಒದಗಿಸಿಕೊಟ್ಟ ಫೇಸ್ಬುಕ್ ಮತ್ತು ವಾಟ್ಸಪ್ಪ್ ಮಾಲೀಕರಿಗೆ ಕೃತಜ್ಞತೆ ಸಲ್ಲಿಸಿದಂತೆ ಆಗುತದೆ.
ಅದನ್ನು ಬಿಟ್ಟು ನಮ್ಮ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿಗೆ ವೇದಿಕೆ ಮಾಡಿಕೊಂಡು ಕಲಹ ಮೂಲವೆಂಬ ಪಟ್ಟವನ್ನು ಅದಕ್ಕೆ ಕಟ್ಟಿ – ಸ್ವತಃ ಮಾಲೀಕರು ನಿರಂತರ ನಾವು ಮಾಡಿದೆ ತಪ್ಪಿಗೆ ದಂಡ ತೆತ್ತು ಸಂಸ್ಥೆಯನ್ನು ನಡೆಸುವ ಅತಿ ದೊಡ್ಡ ಭಾರವನ್ನು ಹೊತ್ತು ಮುನ್ನಡೆಸುತಿದ್ದಾರೆ. ಇದರ ಪರಿಣಾಮವಾಗಿ ಮುಂದಕ್ಕೆ ಉಚಿತ ಸೌಲಭ್ಯಗಳು ನಮ್ಮ ಪಾಲಿಗೆ ಮಾಯವಾಗಿ ಹಣ ತೆತ್ತು ಈ ಸೌಲಭ್ಯ ಗಿಟ್ಟಿಸುವ ಕೆಟ್ಟ ಕಾಲಕ್ಕೆ ನಾವೇ ಅಡಿಪಾಯ ಹಾಕಿಕೊಟ್ಟ ಕೆಟ್ಟ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲಬಹುದು.
ನಮಗೆ ಕೊಡುವ ಉಚಿತ ವ್ಯವಸ್ಥೆಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿ , ಒಳ್ಳೆಯ ಕೆಲಷ ಮಾಡುವ ಜನರನ್ನು ಹುರಿದುಂಬಿಸೋಣ . ದೈವ ದೇವರುಗಳಲ್ಲಿ ಅವರಿಗೆ ಇನ್ನು ಮುಂದೆಯೂ ಇದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಅರೋಗ್ಯ ಆಯುಷ ಕೊಡಲು ಪ್ರಾರ್ಥಿಸೋಣ. ಇದನ್ನು ಬಿಟ್ಟು ನಮಗೆ ತೋಚಿದ್ದನ್ನು ವೇದಿಕೆ ಬಳಸಿ ಮಾದ್ಯಮಕ್ಕೆ ಹರಿಬಿಟ್ಟಾಗ ಯಾವುದೆಲ್ಲ ತೊಂದರೆಗಳಿಗೆ ಸ್ವತಃ ನಾವು ಸಿಕ್ಕಿಹಾಕಿಕೊಳ್ಳಬಹುದು ಎಂಬುದರ ವಿವರ ಅರಿವಿಗಾಗಿ
ಕೆಟ್ಟ ವಿಷಯ ಪ್ರಕಟಿಸಿದಕ್ಕೆ ಆ ದೇಶದ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬಹುದು
ಮಾನನಷ್ಟ ಮೊಕ್ಕದ್ದಮೆ ಹೂಡಿ ಅತಿ ದೊಡ್ಡ ಪರಿಹಾರ ಕೊಡಬೇಕಾಗಿ ಬರಬಹುದು
ಸ್ವತಃ ಉಚಿತ ಸೌಲಭ್ಯ ಕೊಡುವ ಮಾಧ್ಯಮಗಳೇ – ಆ ದೇಶದ ಕಾನೂನು ಮೂಲಕ ಶಿಕ್ಷಿಸಲು ದೂರು ದಾಖಲಿಸಬಹುದು.
ಆಪಾದನೆಗೆ ಒಳಪಟ್ಟ ವ್ಯಕ್ತಿ ನಿಷ್ಖಾಲಂಕನಾಗಿದ್ದಲ್ಲಿ ನೇರವಾಗಿ ದೇವರ ಮೊರೆ ಹೋಗಿ ಸೂಕ್ತ ಶಿಕ್ಷೆಗೆ ಅಂಗಲಾಚಬಹುದು
ಅಪಾದನೆಗ ಒಳಪಟ್ಟ ವ್ಯಕ್ತಿ ಹೃದಯ ಶ್ರೀಮಂತನಾಗಿದ್ದಲ್ಲಿ- ತಪ್ಪು ಮಾಡಿದವನಿಗೆ ಅರಿವು ಹುಟ್ಟಿಸಿ ಒಳ್ಳೆಯ ಬಾಳು ಕೊಡಲು ದೈವ ದೇವರ ಮೊರೆ ಹೋಗಬಹುದು.
ದೇಶದ ಕಾನೂನಿನಿಂದ ಯಾರು ಕೂಡ ನುಣುಚಿಕೊಂಡು ಹೊರಬರುವ ಅವಕಾಶಗಳಿರುವುದು ಮಾನವಜನಾಂಗಕ್ಕೆ ತಿಳಿದಿರುವ ವಿಷಯ. ಆದರೆ ಪ್ರಕೃತಿ ನಿಯಮ , ಲೋಕ ನಿಯಮ , ದೈವ ದೇವರ ನಿಯಮ – ಜೀವರಾಶಿಗಳು ಪಾಲಿಸಲೇಬೇಕಾಗಿದೆ. ಇದರಿಂದ ನುಣುಚಿಕೊಂಡು ಹೊರಬರುವ ಸಾಧ್ಯತೆ ಇಲ್ಲವೇ ಇಲ್ಲ .
ಆದುದರಿಂದ ಒಳ್ಳೆಯ ನಡೆ ನುಡಿ ನಡವಳಿಕೆಯಿಂದ ನಾವು ನಮ್ಮ ಬದುಕು ಸಾಗಿಸೋಣ