ಮೂವತ್ತು ದಿನಗಳಲ್ಲಿ ಯೆಶಸ್ಸು ಎಂಬ ನಾಮಾಂಕಿತದ ಪುಸ್ತಕ ಸುಮಾರು ೩೮ ವರುಷಗಳ ಹಿಂದೆ ಮೈಸೂರು ಗ್ರಂಥಾಲಯದಲ್ಲಿ ಓದಿದ ನೆನಪು – ಬಳಿಕ ಆ ಪುಸ್ತಕಕ್ಕಾಗಿ ಎಷ್ಟೇ ಹುಡುಕಾಡಿದರು ಕೇವಲ ೩೦ ಪುಟಗಳ ಆ ಪುಸ್ತಕ ಸಿಗದಿದ್ದು – ನನ್ನ ನೆನಪಿನ ಜೋಳಿಗೆಯಲ್ಲಿ ವಿಬ್ಬಿಣ್ಣ ಕ್ಷೇತ್ರಗಳಿಂದ ಸಂಗ್ರಹವಾದುದನ್ನು – ಮೂವತ್ತು ದಿನವನ್ನು ಮೂರೂ ದಿನಕ್ಕೆ ಇಳಿಸಿ, ಸಮಯ – ಶ್ರಮ ಉಳಿಸಿ ಮನೋ ವೇಗದ ಬದುಕಿಗೆ ಪೂರಕ ವಾತಾವರಣದ ಕನಸು ಬರಹ ಮೂಲಕ ನನಸಾಗುತಿದೆ
ಪ್ರಥಮ – ಬದುಕಿಗೊಂದು ಗುರಿ – ಬೋರ್ಡು ಇಲ್ಲದ ಬಸ್ಸು ,
ಗೊತ್ತು ಗುರಿಯಿಲ್ಲದ ಬದುಕು ,
ಏರಿಪರು ನಂಬಿಪರು ಜಗದೊಳಿಲ್ಲವಯ್ಯಾ ……..ಅವ್ಯಕ್ತ
ನಮಗೆ ಪ್ರಪಂಚಕ್ಕೆ ಬರಲು ಅವಕಾಶ ಮಾಡಿಕೊಟ್ಟ ಮಾತೃಪಿತೃಗಳು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಪ್ರಸ್ತುತ ಸಮಾಜ – ಪ್ರತಿಯೊಬ್ಬ ಮಾನವರಿಗೂ ಒಂದು ನಿರ್ದಿಷ್ಟವಾದ ಗುರಿಯನ್ನು ತೋರಿಸಿ , ಮನದಟ್ಟು ಮಾಡಿ , ಆ ಗುರಿಯತ್ತ ಮಾತ್ರ ಅವನ ಚಲನ ವಲನ ಇರುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪಂಚ ಭೂತಗಳಿಗೆ ಒಂದು ಗುರಿ ಇದೆ – ಅದನ್ನು ಬಿಟ್ಟು ಯಾವತ್ತು ಯಾವ ಕಾರಣಕ್ಕೂ ಅವುಗಳು ತಮ್ಮ ದಾರಿಯನ್ನು ಬದಲಿಸುವುದಿಲ್ಲ – ಬದಲಿಸದ್ದೆ ಆದರೆ ಕ್ಷಣ ಮಾತ್ರದಲ್ಲಿ ಯಾವುದೇ ಜೀವರಾಶಿ ಬದುಕಿ ಉಳಿಯಲು ಸಾಧ್ಯವಿಲ್ಲ. ಅಂತಹ ಒಂದೇ ಗುರಿ ನಮಗೆಲ್ಲರಿಗೂ ಇರಬೇಕಾದುದು ದೇವರು ಹಾಕಿಕೊಟ್ಟ ದಾರಿ ಮತ್ತು ದೇಶದ ಕಾನೂನನ್ನು ನೂರಕ್ಕೆ ನೂರು ಪಾಲನೆ ಮಾಡಿ ಸುಖ ಜೀವನ ನಡೆಸುವುದು ನಮ್ಮೆಲ್ಲರ ಕರ್ತವ್ಯ . ಮುನ್ನುಗ್ಗೋಣ.
ದ್ವಿತೀಯ – ಯೋಜನೆ ಹಾಕಿ – ದಿನಕ್ಕೆ ಮಾನವನಿಗೂ , ಜೀವರಾಶಿಗೂ, ದೇವರಿಗೂ , ಯಮನಿಗೂ ——- ಎಲ್ಲರಿಗು ೨೪ ಗಂಟೆಗಳ ಕಾಲಾವಕಾಶ ಮಾತ್ರ ಸಿಗುವುದು. ಅದನ್ನು ಸರಿಯಾಗಿ ವಿಂಗಡಿಸಿ ಯೋಚನೆ ಮಾಡಿ ಯೋಜನೆ ರೂಪಿಸಿದರೆ ನಿಗದಿತ ಸಮಯದಲ್ಲಿ ಗುರಿಯತ್ತ ಸಾಗಲು ಸಾಧ್ಯವಿದೆ. ಗಂಟೆಯ ಮುಳ್ಳು – ದಿನಗಳು, ವಾರಗಳು , ತಿಂಗಳುಗಳು , ವರುಷಗಳು ನಿತ್ಯ ನಿರಂತರ ಉರುಳುತಿದ್ದು – ಅದು ಯಾರನ್ನು ಯಾವತ್ತೂ ಕಾಯುದಿಲ್ಲ ಎಂದು ಅರಿತು – ಗುರಿ ಮುಟ್ಟುವ ಯೋಜನೆ ಸದಾ ನಮ್ಮನ್ನು ಜಾಗ್ರತಗೊಳಿಸುತಿದ್ದರೆ ಸಾಧಕರ ಭಾಗ್ಯದ ಬಾಗಿಲು ನಮಗೂ ತೆರೆದುಕೊಳ್ಳುತದೆ.
ತೃತೀಯ – ಅನುಷ್ಠಾನ ಮಾಡಿ – ಮುಂದಿನ ಎರಡು ಸೂತ್ರಗಳ ಪಾಲನೆ ಬಹುಪಾಲು ಜನಸಾಮಾನ್ಯರು ಮಾಡುತಾರೆ. ಸುಮಾರು ೯೦ ಪ್ರತಿ ಸತ ಜನರು ಗುರಿ ಮತ್ತು ಯೋಜನೆಯಲ್ಲಿಯೇ ತಮ್ಮ ಬದುಕಿನ ಅಮೂಲ್ಯ ಸಮಯ ವ್ಯಯ ಮಾಡಿ – ತನ್ನ ಅದ್ರಷ್ಟಕ್ಕೆ ಶಪಿಸುತ್ತ, ಮಾತಾಪಿತೃಗಳಿಗೆ ಜರೆಯುತ್ತಾ, ಅನ್ಯರಲ್ಲಿ ಹುಳುಕನ್ನು ಕಾಣುತ್ತ, ತನಗೆ ದೊರೆತ ಪಾತ್ರಕ್ಕೆ ವಿಧಿಯ ಕೈವಾಡವೆಂಬ ಸೋಮಾರಿ ಆಯುಧ ಬಳಸುತ್ತ, ಕತ್ತಲು ಬೆಳಕಿನ ಬಾಳಿನಲ್ಲಿ ಕತ್ತಲು ಬದುಕು ಕೊನೆಗೊಳ್ಳುತದೆ. ತನ್ನ ಸೋಲಿಗೆ ಅನ್ಯರು ಕಾರಣ ತನ್ನ ಗೆಲುವಿಗೆ ನಾನೆ ಕಾರಣ ಎಂಬ ನಮ್ಮ ನಿತ್ಯ ಜಪಿಸುತಿರುವ ಮಂತ್ರ ಬದಲಾಗಿ – ತನ್ನ ಸೋಲಿಗೆ ಮತ್ತು ತನ್ನ ಏಳಿಗೆಗೆ ನಾನೆ ಕಾರಣ ಎಂಬ ಮಂತ್ರ ಪಠಿಸಲು ಆರಂಭಿಸಿದರೆ ಸವಾಲುಗಳ ಮೆಟ್ಟಲೇರುತ್ತ ಗುರಿ ಸೇರಬಹುದು
ಜಾಗತಿಕ ಮಟ್ಟದ ಸಾಧಕರಿಗೆ ಹತ್ತು ತಲೆ ಇಪ್ಪತ್ತು ಕೈಗಳಿಲ್ಲ ಎಂಬ ಅರಿವು ನಮಗಿರಲಿ. ಪ್ರಪಂಚದ ಹತ್ತು ಅತಿ ಶ್ರೀಮಂತರ ಪಟ್ಟಿಯಲ್ಲಿ ೩೫ ವರುಷಗಳಿಂದ ೮೯ ವರುಷದ ವಯೋಮಾನದವರು ಇರುವುದನ್ನು ಮನಗಂಡು ನನ್ನ ದೇಹವೆಂಬ ವಾಹನಕ್ಕೆ ವಯಸ್ಸಾಗಿದೆ ಎನ್ನುವ ನೆಪ ಬದಿಗೊತ್ತಿ – ಶುಭ – ಚಿಂತನ ಮಂಥನ ಅನುಷ್ಠಾನ -ನಮ್ಮದಾಗಲಿ