ದೇವಾಲಯದಿ ದಿನ ಭಾವದಿ ಪೂಜಿಪರು ಅಗರ್ಭಶ್ರೀಮಂತರು
ದೇವಾಲಯದಿ ವಾರಕೊಮ್ಮೆ ಭಾವದಿ ಪೂಜಿಪರು ಶ್ರೀಮಂತರು
ದೇವಾಲಯದಿ ಇಷ್ಟವಾದಾಗ ಭಾವದಿ ಪೂಜಿಪರು ಬಡವರೆಂದ …………………………….ಅವ್ಯಕ್ತ
ದೇವಾಲಯಕ್ಕೆ ಓಡೋಡಿ ಬರುವವರು ಪರಮಭಕುತರು
ದೇವಾಲಯಕ್ಕೆ ನಡೆದಾಡಿ ಬರುವವರು ಭಕುತರು
ದೇವಾಲಯಕ್ಕೆ ಕರೆದಾಗ ಬರುವವರು ನಾಟಕಭಕುತರು……………………………………..ಅವ್ಯಕ್ತ
ಮಾನವರಲ್ಲಿ ರಾಕ್ಷಸರು ಮಾನವರೆಂಬ ಎರಡೇ ಜಾತಿ
ಎಲ್ಲ ಜಾತಿ ಧರ್ಮಗಳಲ್ಲಿ ಇವರುಗಳು ಇಹರು
ಜಾತಿ ಧರ್ಮಗಳು ಜಾಗ್ರತರಾಗದಿರೆ ಅಂತ್ಯ ಕಾಣಿಪಾರು ………………………………………ಅವ್ಯಕ್ತ
ಜಾತಿ ಧರ್ಮಗಳ ಅಂತ್ಯಕ್ಕೆ ಅನ್ಯರು ಬೇಡ
ನಿನ್ನ ಜಾತಿಯ ರಾಕಸಸರು ನಿತ್ಯ ದುಡಿಯುತಿಹರು
ರಾಕ್ಸಸರ ಸಮಾಧಿ ಜಾತಿಗೆ ಜಗತ್ತಿಗೆ ನೆಮ್ಮದಿಯೆಂದ …………………………………………. ಅವ್ಯಕ್ತ
ದೇವರ ತ್ಯಾಜ್ಜ ತಿಂಬವ ದೇವಮಾನವ
ತನ್ನ ತ್ಯಾಜ್ಜ ತಿಂಬವ ಮಾನವ
ಅನ್ಯರ ತ್ಯಾಜ್ಜ ತಿಂಬವ ದಾನವನೆಂದ ……………………………………………………………….ಅವ್ಯಕ್ತ