ಚಂದ್ರರಾಜ ಹೆಗ್ಗಡೆ ಅವರ ಜೀವನ ಚರಿತ್ರೆ:
ಮರಣ: 21/09/2004
ತಂದೆ ತಾಯಿ: ಅಪ್ಪು ಶೆಟ್ಟಿ ಮತ್ತು ಪದ್ಮಾವತಿ
ಒಡಹುಟ್ಟಿದವರು:
- ನೀಲಮ್ಮ
- ದೇವರಾಜ ಶೆಟ್ಟಿ
- ರವಿರಾಜ ಶೆಟ್ಟಿ
- ಅನಂತರಾಜ ಶೆಟ್ಟಿ
- ನಾಭಿರಾಜ ಶೆಟ್ಟಿ
ವಿದ್ಯಾಭ್ಯಾಸ: ಪ್ರಾಥಮಿಕ ಶಿಕ್ಷಣ
ವೃತ್ತಿ: ಕೃಷಿ – ತಮ್ಮ ಜೀವನವನ್ನೇ ಕೃಷಿಗೆ ಸಮರ್ಪಿಸಿ, ಯಶಸ್ವಿ ಮತ್ತು ಪ್ರಗತಿಪರ ಕೃಷಿಕರಾಗಿ ಬದುಕಿದ್ದರು.
ಸತಿ: ಸುನಂದಾ ದೇವಿ
ಮಕ್ಕಳು:
- ಶುಭಾಕರ ಹೆಗ್ಗಡೆ
- ವಿಜಯ ಪ್ರಕಾಶ್ (ವೈ.ಪಿ.)
- ಪ್ರಭಾಕರ ಜೈನ್
- ಮಹಾವೀರ ಜೈನ್
ಸಾಮಾಜಿಕ ಬದುಕು:
ಚಂದ್ರರಾಜ ಹೆಗ್ಗಡೆ ಅವರು ಗ್ರಾಮ ಪಂಚಾಯತಿನಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಪುತ್ತಿಗೆ ಶಾಲಾಭಿವೃದಿ ಸಂಸ್ಥೆಯಲ್ಲಿ ಅಧ್ಯಕ್ಷರಾಗಿದ್ದು, ಶಾಲೆಯ ಪುನರ್ ಜೇರ್ಣೋದ್ಧಾರದ ನೇತೃತ್ವ ವಹಿಸಿದ್ದರು. ಗ್ರಾಮೀಣ ಮಟ್ಟದಲ್ಲಿ ದಾರಿ ಮತ್ತು ಕಾಲುಸಂಕದ ನಿರ್ಮಾಣ ಕಾರ್ಯದಲ್ಲಿ ಮುಂದಾಳತ್ವ ತೋರಿದವರು. ಊರಿನ ಜಾತ್ರೆಗಳಲ್ಲಿ ಭಾಗವಹಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು.
ಧಾರ್ಮಿಕ ಬದುಕು:
ಅವರು ಧಾರ್ಮಿಕ ಕ್ಷೇತ್ರದಲ್ಲೂ ತಮ್ಮ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಇಚಿಲಂಪಾಡಿ ಬೀಡು ಉದ್ಯಪ್ಪ ಅರಸರಾದ (ಸಮಾರಂಭದ ಪ್ರಮುಖ ದಾರ್ಶನಿಕರಾದ) ಕುಜ್ನಾಣ್ಣ ಹೆಗ್ಗಡೆಯವರ ಕಾಲದಲ್ಲಿ ನಿಂತಿದ್ದ ಉಳ್ಳಾಕುಲು ಜಾತ್ರೆಗೆ ಪುನಃ ಚಾಲನೆ ನೀಡಿದ್ದರು. ಬಸದಿ ದೇವಾಲಯಗಳ ಅಭಿವೃದ್ಧಿ ಕಾರ್ಯದಲ್ಲಿ ಅವರು ಒಂದು ಹೆಜ್ಜೆ ಮುಂದೆ, , ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಶೇಷ ಒತ್ತು ಕೊಟ್ಟಿದ್ದರು. ಬಾಹ್ಯ ಆಡಂಬರದಿಂದ ದೂರ ಇದ್ದು, ಆಂತರಿಕ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿದರು.
ದಿಟ್ಟ ಜೀವನ:
ಚಂದ್ರರಾಜ ಹೆಗ್ಗಡೆ ಅವರ ದಿಟ್ಟ ವ್ಯಕ್ತಿತ್ವ ಸಮಾಜದಲ್ಲಿ ಪ್ರಸಿದ್ಧವಾಗಿತ್ತು. ಅವರು ಸಮಕಾಲೀನ ಪುಂಡರನ್ನು ನಿಸ್ಸಂಕೋಚವಾಗಿ ಎದುರಿಸುವ ಧೈರ್ಯವಂತರು. ತಮ್ಮ ಸ್ವ ರಕ್ಷಣೆಗೆ ಸದಾ ಸಿದ್ಧರಾಗಿದ್ದು, ಎದುರಿಸುವುದಕ್ಕೆ ಎರಡು ಚಾಕುಗಳನ್ನು ಹಮ್ಮಿಕೊಂಡು ಹೋರಾಡುತ್ತಿದ್ದ ವ್ಯಕ್ತಿಯಾಗಿದ್ದರು. ಪ್ರಾಣವನ್ನು ತೆತ್ತು ಮಾನ ಕಾಪಾಡುವ ಸಿದ್ಧಾಂತವನ್ನು ಪಾಲಿಸಿದವರು. ತಮ್ಮ ಅಜ್ಜ ಇಚಿಲಂಪಾಡಿ ಬೀಡು ಪದ್ಮರಾಜ ಹೆಗ್ಗಡೆಯವರನ್ನೇ ಎದುರಿಸಿದ ದಿಟ್ಟ ವ್ಯಕ್ತಿಯಾಗಿದ್ದರು. ಸ್ವಭಾವತಃ ಸಾದುಸ್ವಭಾವದವರಾಗಿದ್ದರೂ, ಕೆರಳಿದಾಗ ಸಿಂಹದಂತೆ ಪ್ರಬಲ ವ್ಯಕ್ತಿಯಾಗುತ್ತಿದ್ದವರು.
ಕೃಷಿ ಜೀವನ:
ಚಂದ್ರರಾಜ ಹೆಗ್ಗಡೆ ಕೃಷಿಯಲ್ಲಿಯೂ ಅಪಾರ ಸಾಧನೆ ಮಾಡಿದವರು. “ಗದ್ದೆಯೊಳಗೆ ಗದ್ದೆ ಉಂಟು“ ಎಂಬ ನುಡಿಯನ್ನು ತಾತ್ತ್ವಿಕವಾಗಿ ಪಾಲಿಸಿದರು. ಅಂದಿನ ತೋಟಗಾರಿಕೆ ಇಲಾಖೆ ಅವರ ಕೃಷಿ ಸಾಧನೆಗಾಗಿ ಅತ್ಯುತ್ತಮ ಕೃಷಿಕ ಪುರಸ್ಕಾರವನ್ನು ನೀಡಿ ಗೌರವಿಸಿತ್ತು. ಅಡಿಕೆ, ತೆಂಗು ತೋಟಗಳನ್ನು ವಿಶೇಷವಾಗಿ ಬೆಳೆಸಿ, ತೋಟಗಾರಿಕೆಯಲ್ಲಿ ಯಶಸ್ಸು ಕಂಡವರು. ಸ್ವಯಂ ಕೃಷಿ ಪ್ರಯೋಗಗಳನ್ನು ಮಾಡಿದವರಾಗಿ, ಕೃಷಿ ಕ್ಷೇತ್ರದಲ್ಲಿ ದೊಡ್ಡ ಪ್ರಗತಿಪರ ಕೃಷಿಕರ ಅನುಕರಣೀಯ ಸಾಧಕರು.
ಮನದ ಮಾತು
ದೈವ-ದೇವರ ಸಂಗಾತಿ ಬದುಕು , ಹದಿನಾರು ವರುಷಗಳ ಬಳಿಕ ಮಕ್ಕಳನ್ನು ಸ್ನೇಹಿತರಂತೆ ನೋಡುತ್ತಿದ್ದವರಾಗಿದ್ದರು