ದೇವರು ಮತ್ತು ದೇವಾಲಯದ ಅಂದಿನ ಉದ್ದೇಶವನ್ನು ಮರೆತ ನಾವು ಇಂದು ವ್ಯಕ್ತ ಪೂಜೆಗೆ ಮಾತ್ರ ಮಹತ್ವ ಕೊಟ್ಟು – ದೇವರ ಅಭಿವೃದ್ಧಿ ಮತ್ತು ದೇವಾಲಯ ಅಭಿವೃದ್ಧಿ ಬಗ್ಗೆ ಜ್ಞಾನದ ಕಣ್ಣನ್ನು ತೆರೆದು ನೋಡದೆ – ಚಿನ್ನದ ರಥ, ಚಿನ್ನದ ಪಲ್ಲಕಿ, ಶಿಲಾಮಯ ದೇವಾಲಯ , ತಾಮ್ರ ಮುಚ್ಚಿದ ದೇವಾಲಯ , ದೇವಾಲಯಗಳಲ್ಲಿ ವಿಭಿನ್ನ ಪೂಜೆಗಳ ಹನುಮಂತನ ಬಾಲದಂತಿರುವ ದೊಡ್ಡ ಪಟ್ಟ್ಟಿ, ಬೇರೆ ಬೇರೆ ವಸ್ತುಗಳಲ್ಲಿ ತುಲಾಭಾರಗಳು, ಸಕಲವೂ ಸಮಾಜದಲ್ಲಿ ಶ್ರೀಮಂತರಿಗೆ ಮಾತ್ರ ರತ್ನಗಂಬಳಿ ಸ್ವಾಗತಿಸುತಿರುವುದು ನಾಣ್ಯದ ಒಂದು ಮುಖ ಖಾಲಿಯಾಗಿದ್ದು ಪಯೋಜನ ಏನು ಎಂಬ ಪ್ರಶ್ನೆಗೆ ಉತ್ತರದತ್ತ ನಮ್ಮ ಗಮನ ಕೇಂದ್ರೀಕೃತವಾಗಬೇಕಾಗಿದೆ.
ವ್ಯಕ್ತ ಪೂಜೆ ಮಾಡುವವರು – ತಾವೆ ದೇವರೆಂದು ಭಾವಿಸಿಕೊಂಡು ಅನ್ಯರನ್ನು ಕಸಕ್ಕಿಂತ ಕೀಳಾಗಿ ಕಾಣುವ ಮನೋಭಾವನೆಯರು ಹೆಚ್ಚುತ್ತಿರುವುದು ಮಾತ್ರವಲ್ಲದೆ ತಾವು ಮಾಡಿರುವ ಮತ್ತು ಆಗುವ ತಪ್ಪುಗಳತ್ತ ಗಮನ ಹರಿಸಿ ಪರಿಹಾರದತ್ತ ಚಿಂತಿಸದೆ – ಸಮಾಜಕ್ಕೆ ದೇವರಿಗೆ ಕಂಟಕರಾಗಿ ಬದುಕುವ ಪ್ರಸ್ತುತ ಪ್ರವೃತ್ತಿಗೆ ನಮ್ಮೆಲ್ಲರ ಚಿಂತನ ಮಂಥನ ಅನುಷ್ಠಾನದ ಅನಿವಾರ್ಯತೆಯಿದೆ.
ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ಪೂಜಾ ಪದ್ದತಿಯ ಪ್ರತೀಕವಾಗಿ – ಭಜನಾ ಕಾರ್ಯಕ್ರಮ – ಮಾನವರಾದ ನಾವೆಲ್ಲರೂ ಮಾಡುವ ಅವ್ಯಕ್ತ ಪೂಜೆ – ತನ್ನ ವ್ಯಾಪ್ತಿಯನ್ನು ಮನ ಮನೆ …….ಇತ್ಯಾದಿಗಳತ್ತ ದಾಪುಗಾಲಿಡುವ ದ್ರಡ ಸಂಕಲ್ಪ ನಮ್ಮದಾಗಲಿ
ದೇವಾಲಯಗಳನ್ನು ಮುನ್ನಡೆಸುತಿರುವ ಪ್ರತಿಯೊಬ್ಬರೂ ಕೂಡ – ವ್ಯಕ್ತ ಪೂಜೆಗೆ ಕೊಟ್ಟ ಮಹತ್ವ ಅವ್ಯಕ್ತ ಪೂಜೆಗೆ ಕೊಟ್ಟು ಅನುಷ್ಠಾನ ಮಾಡಿದಾಗ – ಜನ ಸಾಮಾನ್ಯರಲ್ಲಿ ಒಳ್ಳೆಯ ಮನಸ್ಸು ಜ್ಞಾನ ಚಾರಿತ್ರ ಬೆಳೆದು ಹೆಮ್ಮರವಾಗಿ ನೆಮ್ಮದಿ ಬದುಕಿಗೆ ನಾಂದಿಯಾಗುತದೆ.
ಅವ್ಯಕ್ತ ಪೂಜೆ ಮಾಡುವ ಬಗ್ಗೆ ಸಲಹೆ – ಅನುಷ್ಠಾನ ವಿದಿ ಅವರವರ ಅನುಭವಕ್ಕೆ ಬಿಟ್ಟದ್ದು
ಆಂತರಿಕ ಮತ್ತು ಶಾರೀರಿಕ ಸ್ವಚ್ಛತೆಯಿಂದ ಕನಿಷ್ಠ ದಿನಕ್ಕೆ ೧೦೮ ಬಾರಿ ತನ್ನ ಕ್ಷೇತ್ರದ ದೇವರ ನಮ ಸ್ಮರಣೆ
ತನ್ನ ಆಂತರಿಕ ಶಾರೀರಿಕ ಬಿಡುವಿನಲ್ಲಿ ಮಂತ್ರ ಪಠಣಕ್ಕೆ ಆದ್ಯತೆ
ಕನಿಷ್ಠ ವಾರಕ್ಕೆ ಒಮ್ಮೆ ಕ್ಷೇತ್ರ ದರ್ಶನ ಸಾಧ್ಯವಾಗದಿದ್ದಲ್ಲಿ ಮಂತ್ರ ಪಠಣದೊಂದಿಗೆ ಕ್ಷೇತ್ರಕ್ಕೆ ೧೦೮ ರೂಪಾಯಿ ಆನ್ಲೈನ್ ಪಾವತಿ
ಹುಟ್ಟು ಹಬ್ಬ , ಮದುವೆ ದಿನ ಇನ್ನಿತರ ಸಂದರ್ಭಗಳಲ್ಲಿ ಕನಿಷ್ಠ ರೂಪಾಯಿ ೧೦೮ ಕ್ಷೇತ್ರಕ್ಕೆ ಆನ್ಲೈನ್ ಪಾವತಿ
ಊರಿನಲ್ಲಿರುವವರು ಪರಊರಿನಲ್ಲಿರುವವರು , ಹಿರಿಯರು ಕಿರಿಯರು ಎಲ್ಲರು ಅವ್ಯಕ್ತ ಪೂಜೆಯಲ್ಲಿ ಭಾಗಿಯಾಗಲು ಪ್ರಚಾರ ಮಾಧ್ಯಮ ಬಳಕೆ
ವ್ಯಕ್ತ ಪೂಜೆ ಒಬ್ಬರಿಂದ ಮಾಡಿಸಿ ಅವ್ಯಕ್ತ ಪೂಜೆ ಭಕ್ತಾದಿಗಳು ಮಾಡಿದಾಗ – ದೇವರೊಂದಿಗೆ ಪ್ರಕೃತಿ ಅದೃಷ್ಟ ನಮಗೆ ಪೂರಕ
ನಾವು ತಂದೆ ತಾಯಿ ಸತಿ ಪತಿ ಮಕ್ಕಳೊಂದಿನ ಬದುಕು ಅಲ್ಪ ದೇವರೊಂದಿನ ಬದುಕು ಶಾಶ್ವತ ಅರಿತು ಬಾಳುವುದು ನಿಜವಾದ ಪೂಜೆ
ಮನ ಮಂದಿರದಿ ದೇವಾಲಯ ಕಟ್ಟಿ
ಬುದ್ದಿಯ ಸುತ್ತುಗೋಪುರ ಕಟ್ಟಿದಾತ
ನಡೆದಾಡುವ ದೇವಾಲಯದ್ಲಲಿ ಇಹನು …………..ಅವ್ಯಕ್ತ