ನಮ್ಮನ್ನು ನಾವು ಸಮಾಜಕ್ಕೆ ಪರಿಚಯಿಸುವುದರಲ್ಲಿ ಬಹಳ ಹಿಂದೆ ಬಿದ್ದಿದ್ದೇವೆ. ಅನ್ಯರಿಂದ ಯಾ ನಮ್ಮನ್ನು ನಾವೇ ಪರಿಚಯ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಮೊಬೈಲ್ ಕಂಪ್ಯೂಟರ್ ಜ್ಞಾನವನ್ನು ಕರಗತ ಮಾಡಿಕೊಂಡಿರುವ ನಾವು ಸಮರ್ಪಕ ರೀತಿಯಲ್ಲಿ ಬಳಸದಿರುವುದೇ ಕಾರಣವಾಗಿದ್ದು ಪರಿಹಾರದ ಬಗ್ಗೆ ಚಿಂತಿಸಿ ಕನಿಷ್ಠ ವೆಚ್ಚದಲ್ಲಿ ಈ ಕಾರ್ಯವನ್ನು ಮಾಡುವತ್ತ ಗಮನ ಹರಿಸಬೇಕು. ಇದರ ಪ್ರಯೋಜನ ಅಪಾರ -ಸಂಪಾದನೆಗೆ ದಾರಿ , ಮೊಬೈಲ್ ಸದ್ಬಳಕೆ ಮತ್ತು ಅಭಿವೃದ್ಧಿ ಸಾಧನವಾಗಿ ಬಳಕೆ , ವ್ಯಕ್ತಿಗತ ಸ್ಥಾನ ಮಾನದಲ್ಲಿ ಗಣನೀಯ ಏರಿಕೆ, ಇತ್ಯಾದಿ …. ನಮ್ಮ ಬದುಕಿನ ಬೆಳವಣಿಗೆಗೆ ರಾಜ ಮಾರ್ಗ ದೊರಕಲಿದೆ .