ಭಾಷಣಕಾರರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆಯುತಿರುವ ಇವರುಗಳನ್ನು ವೇದಿಕೆಗೆ ಮಾತ್ರ ಸೀಮಿತ, ಪ್ರಚಾರಕ್ಕೆ ಮಾತ್ರ ಸೀಮಿತ ಮತ್ತು ಬದುಕಿಗೆ ಮಾತ್ರ ಸೀಮಿತ ವಿಂಗಡಣೆ ಮಾಡಿ ನೋಡಿದಾಗ – ಮೊದಲಿನ ಎರಡು ವರ್ಗದವರು ಚಲಾವಣೆಯಲ್ಲಿರುವ ನಾಣ್ಯ ಕೊನೆಯದ್ದು ಬೇಡವಾಗಿ – ಚಪ್ಪಾಳೆ ಗಿಟ್ಟಿಸುವ ಮಾಧ್ಯಮಗಳಿಗೆ ಭೂರಿಭೋಜನ ನೀಡುವಾತ ಜೀವಂತವಾಗಿರುತಾನೆ. ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಭಾಷಣಕ್ಕೂ ಬದುಕಿಗೂ ಅವಿನಾಭಾವ ಸಂಬಂಧ ಬೆಳೆಸಿ ಬಾಳಿಗೆ ಪೂರಕ ವಿಷಯಗಳು ಪ್ರತಿಯೊಬ್ಬರಿಗೂ ವಿವಿಧ ಮೂಲಗಳಿಂದ ತಲುಪುವ ಅನಿವಾರ್ಯತೆ ಇದೆ.
ವೇದಿಕೆಯ ಕಲೆಯನ್ನು ಅರಿತು – ಸಮಯವನ್ನು ಪೋಲು ಮಾಡುವ – ವೇದಿಕೆಯಲ್ಲಿರುವವರನ್ನು ವೇದಿಕೆಯಲ್ಲಿರುವ ಪ್ರತಿಯೊಬ್ಬರೂ ಪರಿಚಯಿಸುವ – ಪತ್ರಿಕಾ ಮಾಧ್ಯಮದವರನ್ನು ಗುಣಗಾನ ಮಾಡುತ್ತ – ಹೊಗಳುಭಟ್ಟರ ಕೆಲಸ ಮಾಡುತ್ತ – ಒಂದನೇ ತರಗತಿಗೆ ಪಾಠಮಾಡುತ್ತ – ಸಮಯದ ಬೆಳೆಯನ್ನು ಕಡೆಗಣಿಸುವ – ಪ್ರಸ್ತುತ ಅಜ್ಜ ನಟ್ಟ ಆಲದಮರದ ಕೆಳಗೆ ಬದುಕುವ ನಾವು – ಆನ್ಲೈನ್ ವೇಗದಲ್ಲಿ ಬದುಕುವ ಜಗದಲ್ಲಿ ನಮ್ಮ ಕೊನೆಯ ಸ್ಥಾನವನ್ನು ಬಿಟ್ಟು ಮೊದಲಿನ ಸಾಲಿನಲ್ಲಿ ಬರಲು ದೃಢ ಸಂಕಲ್ಪ ಮಾಡಿ ಮುನ್ನುಗ್ಗಬೇಕು. ಸ್ವಾಮಿ ವಿವೇಕಾನಂದ ಆಗದಿದ್ದರೂ ಪರವಾಗಿಲ್ಲ – ನಮ್ಮ ದೇಶದವರು ಅವರು ಎಂದು ಹೇಳುವ ಯೋಗ್ಯತೆ ನಮ್ಮಲ್ಲಿರುವ ಅವಶ್ಯಕತೆ ಇದೆ.
ಭಾಷಣಗಾರರ ಸೇವಾ ಒಕ್ಕೂಟ ಮೂಲಕ ಹಂತ ಹಂತವಾಗಿ – ಜನರಿಗೆ ಶಾಪವಾಗುವ ಬದಲು ಮುಂದೆ ಒಂದು ದಿನ ಜನಸ್ನೇಹಿ ಆಗಲು ಅನಿಸಿಕೆಗಳು
ಕಟ್ಟು ನಿಟ್ಟಾಗಿ ವೇದಿಕೆಯ ಸಮಯ ಪರಿಪಾಲನೆ
ಬದುಕಿನ ಅನುಷ್ಠಾನದ ಮಾತುಗಳು ಮಾತ್ರ ವೇದಿಕೆಯಲ್ಲಿ ಬರಲಿ
ನಮ್ಮ ಮಾತುಗಳು ಮಾಧ್ಯಮದ ಮೂಲಕ ಜನಸಾಮಾನ್ಯರಿಗೆ ತಲುಪುವ ಅರಿವಿರಲಿ
ಚಿಕ್ಕ ಚೊಕ್ಕ ಮನಮುಟ್ಟುವ ಮಿತ ಉಪಮೆಗಳೊಂದಿಗಿದ್ದರೆ ಮಾತ್ರ ಭೂಷಣ
ನಾನು ಊದುವುದು ನಿಮಗಾಗಿ ನನಗಾಗಿ ಅಲ್ಲ ಎಂಬ ಮನೋಭಾವನೆ ಸಲ್ಲ
ಮನದ ಮಾತು ಹೇಳುವವರು ಹೋಗಲು ಬಟ್ಟರಾಗುವುದಿಲ್ಲ – ಅಂತಹವರು ಬೇಕೋ ಬೇಡವೋ ನಿರ್ಧರಿಸಿ
ತನ್ನ ತಪ್ಪನ್ನು ತಾನು ಒಪ್ಪಿಕೊಂಡು ಮಾನವರಾಗುವ ಬದುಕುವ ಕಲೆ ವ್ಯಕ್ತವಾಗಲಿ
ಕೆಟ್ಟ ವಿಷಯ ವಿಚಾರಗಳನ್ನು ಎಲೆ ಎಳೆಯಾಗಿ ವರ್ಣನೆ ಬದಲು ಮೂಲಕ್ಕೆ ಮದ್ದು ಕೊಟ್ಟು ರೋಗ ಮುಕ್ತ ಮಾಡುವ
ವಿಷ ಪೂರಿತ ಮಾಧ್ಯಮ ಅಮೃತ ಪೂರಿತ ಮಾಧ್ಯಮ – ನಮ್ಮ ಕೊಡುಗೆಯನ್ನು ಅವಲಂಬಿಸಿದೆ – ಜಾಗ್ರತರಾಗುವ ಪ್ರತಿಜ್ಞೆ ಮಾಡೋಣ