ಕ್ಷೇತ್ರವನ್ನು ಕ್ಷೇತ್ರವನ್ನಾಗಿ ಮಾಡುವವರು ಅರ್ಚಕರು ,
ಕ್ಷೇತ್ರವನ್ನು ಕುರುಕ್ಷೇತ್ರವನ್ನಾಗಿ ಮಾಡುವವರು ಅರ್ಚಕರು ,
ಕ್ಷೇತ್ರವನ್ನು ಕುರುಕ್ಷೇತ್ರವನ್ನಾಗಿ ಮಾಡುವವರ ಪರಿವರ್ತಿಸೆಂದ ———————————– ಅವ್ಯಕ್ತ
ದೇಹದಿ ಗಾಯವಾದೊಡೆ ವೈದ್ಯರು ಇಹರು
ಮನದಿ ಗಾಯವಾದೊಡೆ ಧರ್ಮಾಚರಣೆ ಇಹುದು
ಅರಿತು ಬಾಳದೆ ಜಗ ಹೊತ್ತುತಿಹುದು ————————————- ಅವ್ಯಕ್ತ
ಶಿಲಾಮಯ ಬಸದಿ ನಿರ್ಮಿಸಿದವರು
ವಜ್ರಮಯ ದೇವರ ಮಾಡುತಿಹರು
ದೇವರ ಅರಿತವರು ತಿಳಿಯುವರೆಂದ —————————————- ಅವ್ಯಕ್ತ
ನನ್ನ ಮೂಲ ನಾನು ಅರಿತೊಡೆ ಜಗದಿ ಬಂದುಗಳೆಲ್ಲ,
ನನ್ನ ಮೂಲ ನಾನು ಅರಿಯದಿದ್ದೊಡೆ ಜಗದಿ ವೈರಿಗಳೆಲ್ಲ
ನನ್ನ ಮೂಲ ಅರಿತು ಹೇಳುವ ಜಿನ ಬಾರೆಂದ ———————————————– ಅವ್ಯಕ್ತ
ಸರಿ ತಪ್ಪು ವಾದ ಬೇಡ
ನಿನ್ನೊಳಗಿಹ ಅರಿತಿಹನು ಸರಿ ತಪ್ಪು
ನಾಟಕದ ಬದುಕಿಗೆ ಇತಿಶ್ರೀ ಹಾಡೆಂದ ———————————————————- ಅವ್ಯಕ್ತ
ದೈವ ಕಟ್ಟುವವನ ಮಾಯೆಯ ನುಡಿಕಟ್ಟು ಅಂದು
ದೈವ ಕಟ್ಟುವವನ ಮಾತಿನ ನುಡಿಕಟ್ಟು ಇಂದು
ದೈವ ಕಟ್ಟುವವನ ಪುಷ್ಪದ ನುಡಿಕಟ್ಟು ಬೇಕೆಂದ ——————————————— ಅವ್ಯಕ್ತ
ನಿನ್ನಲ್ಲಿ ನೀನು ದೈವ ದೇವರ ಪ್ರತಿಷ್ಠೆ ಪೂಜೆ ಮಾಡದಿದ್ದೊಡೆ
ಅರ್ಚಕ ತಂತ್ರಿ ದೈವ ದೇವರ ಪ್ರತಿಷ್ಠೆ ಪೂಜೆ ಮಾಡಿದೊಡೆ
ನಿನ್ನ ಹಣ ಸಮಯ ಪೊಳು ಭಕ್ತನೆಂಬ ನಾಟಕದ ಪಾತ್ರದಾರಿಯೆಂದ ———————- ಅವ್ಯಕ್ತ
ಜೀವಂತ ಬಾಹುಬಲಿಯ ಕೆತ್ತುವಾತ
ಜಗದಿ ಕೆಲಸ ಮಾಡುತಿಹ
ಜಿನ ಮೆಚ್ಚಿ ಹರಸುತಿಹನು ———————————————- ಅವ್ಯಕ್ತ
ನಿನೊಳಗಿಹ ಬಾಹುಬಲಿಯ ಕೆತ್ತದಾತ
ಕಲ್ಲಿನ ಮೂರ್ತಿಗೆ ಪೂಜಿಪೊಡೆ
ಜಿನ ಮೆಚ್ಚಿ ಪೋಷಿಪನೆ ————————————————— ಅವ್ಯಕ್ತ
ದಿನಕ್ಕೆ ಒಬ್ಬರಿಗೆ ಸೇವೆ ಮಾಡಿದರೆ
ಸಂಪಾದನೆ ದಾರಿ ನಿನಗೆ ಕಾಣುವುದಯ್ಯ
ಪೂಣ್ಯ ಪ್ರಾಪ್ತಿ ನಿನಗೆ ದೊರಕುವುದಯ್ಯ —————————— ಅವ್ಯಕ್ತ
ಸೇವೆಗೆ ಅವಕಾಶ ಇರುವುದಯ್ಯ
ಹುಡುಕುವ ಹಂಬಲ ಬೇಕಯ್ಯಾ
ಸತ್ತ ಬದುಕು ಯಾಕಯ್ಯ ————————————————– ಅವ್ಯಕ್ತ
ನಂದಾದೀಪ ದೇವ ಪ್ರಿಯ
ಅಲಂಕಾರ ಮಾನವ ಪ್ರಿಯ
ಭೋಜನ ಪ್ರಿಯ ರಕ್ಕಸನೆಂದ ——————————————— ಅವ್ಯಕ್ತ
ದೈವಕ್ಕೆ ನುಡಿಕಟ್ಟು ಬಾರದಿದ್ದೊಡೆ
ಪುಷ್ಪದ ನುಡಿಕಟ್ಟು ಲೇಸೆಂದ
ದೈವಕ್ಕೆ ಪಂಚಾತಿಗೆ ಬೇಡವೆಂದ —————————————– ಅವ್ಯಕ್ತ
ಸಂಪಾದನೆ ಮಲ್ಪಾಗ ತನ್ನದು ಎನ್ನುವಾತ
ವೆಚ್ಚ ಮಲ್ಪಾಗ ಪರರದು ಎನ್ನುವಾತ
ಸಂಪತ್ತಿನ ಶಿಖರ ಏರುತಿಹಾ ———————————————— ಅವ್ಯಕ್ತ
ಕೋಪ ಮಕ್ಕಳ ಆಯುಧ
ಜ್ಞಾನ ದೊಡ್ಡವರ ಆಯುಧ
ಮಕ್ಕಳು ದೊಡ್ಡವರು ಯಾರೆಂದ ——————————————- ಅವ್ಯಕ್ತ
ಸಾಲ ಮಾಡಿ ಸಾಲ ತೀರಿಸಿದವ ಸತ್ತ
ಸಾಲ ಮೂಲ ಮಾಡಿ ತೀರಿಸಿದವ ಬದುಕಿದ
ಸಾವು ಬದುಕು ಒಂದು ಆಯ್ಕೆ ಲೇಸೆಂದ ————————————- ಅವ್ಯಕ್ತ
ಕೋಟಿ ಸಾಲ ನೂರು ದಿನದಲ್ಲಿ ತೀರಿಸಬಹುದಯ್ಯ
ಶೂನ್ಯ ಬಂಡವಾಳದ ನೂರಾರು ಉದ್ದಿಮೆಗಳು ಇರುವುದಯ್ಯ
ಹಣ ಬಂಡವಾಳ ಬುದ್ದಿ ಬಂಡವಾಳ ಆರಿಸಯ್ಯ ————————–ಅವ್ಯಕ್ತ
ಸ್ವಾರ್ಥಕ್ಕಾಗಿ ಭಿನ್ನಮತ ಪಕ್ಷಾಂತರ ಮತಾಂತರ ದೇಶದಿ
ತ್ಯಾಗದಿಂದ ಭಿನ್ನಮತ ಪಕ್ಷಾಂತರ ಮತಾಂತರ ಇತಿಶ್ರೀ
ದೇಶ ಧರ್ಮ ಪಕ್ಷ ಒಳಿತಿಗಾಗಿ ಬದುಕೆಂದ ————————————— ಅವ್ಯಕ್ತ