೧. ದೇವರು ಮತ್ತು ದೇವಾಲಯದ ಬಗ್ಗೆ ಸ್ಪಷ್ಟ ಮಾಹಿತಿ (ಶಿಕ್ಸಣ ) ಭಕ್ತರಿಗೆ ಕೊಡುವ ವ್ಯವಸ್ಥೆ ಮಾಡಲು
೨. ಭಿಕ್ಷುಕರು ಕಟ್ಟುವ ದೇವಾಲಯಗಳು ಭಕ್ತರು ಕಟ್ಟುವ ದೇವಾಲಯಗಳನ್ನಾಗಿಸಲು
೩. ವರುಷಕ್ಕೆ ಒಮ್ಮೆಯೂ ಬರುವ /ಬಾರದ ಭಕ್ತರನ್ನು ಕನಿಷ್ಠ ವಾರಕ್ಕೊಮ್ಮೆ ಬರುವಂತೆ ಪರಿವರ್ತಿಸಲು
೪. ಭಕ್ತರು ಕನಿಷ್ಠ ತಮ್ಮ ಆದಾಯದ ೧% ದೇವಾಲಯಕ್ಕೆ ನೆಮ್ಮದಿ ಬದುಕಿಗಾಗಿ ವಿಮೆ ಎಂದು ಮಾನವರಿಕೆಗೆ
೫. ಜಾತಿ ದೇವರು ದೇವಾಲಯ – ಮಾನವ ನಿರ್ಮಿತ ಅಡ್ಡಗೋಡೆ ಎಂದು ಅರಿವು ಮುಟ್ಟಿಸಲು
೬. ವೈಯಕ್ತಿಕ ಪೂಜೆಯ ಫಲ ಕನಿಷ್ಠ ಮತ್ತು ಸಾಮೂಹಿಕ ಪೂಜೆಯ ಫಲ ಗರಿಷ್ಠ – ತಿಳಿಯಪಡಿಸಲು
೭. ವಿದ್ಯಾವಂತರಿಗೆ – ದೇವರು ಮತ್ತು ದೇವಾಲಯ ಪರಿಚಯಿಸಲು
೮. ಕನಿಷ್ಠ ಒಂದು ದೇವಾಲಯದಲ್ಲಿ ಐದಕ್ಕೆ ಮಿಗಿಲಾಗಿ ಉದ್ಯೋಗ ಸೃಷ್ಟಿ ಮಾಡಲು
೯. ದೇವಾಲಯಗಳಲ್ಲಿರುವ ಅಸ್ಪ್ರಶ್ಯತೆ ನಿವಾರಿಸಲು
೧೦. ಭಕ್ತರಿಗೆ ಪಠಿಸಲು ಕ್ಷೇತ್ರಕ್ಕೊಂದು ಮಂತ್ರದ ಆವಿಸ್ಕಾರ
೧೧. ದೇವರು ದೇವಾಲಯ ಬದುಕಿನ ಒಂದು ಭಾಗ – ಶಿಕ್ಸಣದ ಒಂದು ಭಾಗವಾದರೆ ಬದುಕು ಪರಿಪೂರ್ಣ
೧೨. ಮೂಲ ದೇವರನ್ನು ನಮ್ಮ ದೇವಾಲಯದಲ್ಲಿ ಕಾಣುವ ನಮ್ಮೆಲ್ಲರ ಮನದಾಸೆ ಈಡೇರಲಿ
ಜನ ಮನದ ಮಿಡಿತ ಬರಹ ರೂಪದಲ್ಲಿ ವ್ಯಕ್ತ ಪಡಿಸಿದ್ದು ಯಾರಿಗೂ ನೋವಾಗಿದ್ದರೆ ಕ್ಷಮಿಸಿ