ಅಪ್ಪು ಶೆಟ್ಟಿ – ಪುತ್ತಿಗೆ ಪಟೇಲರು– ಜೀವನ ಚರಿತ್ರೆ
ಒಡಹುಟ್ಟಿದವರು: ನೇಮಿರಾಜ ಶೆಟ್ಟಿ, ಆದಿರಾಜ ಶೆಟ್ಟಿ
ವಿದ್ಯೆ: ಪ್ರಾಥಮಿಕ ಶಿಕ್ಷಣ
ವೃತ್ತಿ: ಕೃಷಿ
ಸತಿ: ಪದ್ಮಾವತಿ ದೇವಿ (ಇಜಿಲಂಪಾಡಿ ಬೀಡು)
ಮಕ್ಕಳು: ನೀಲಮ್ಮ, ದೇವರಾಜ, ರವಿರಾಜ ಶೆಟ್ಟಿ, ಚಂದ್ರರಾಜ ಹೆಗ್ಗಡೆ ಮತ್ತು ಇತರ ಮೂವರು
ಧಾರ್ಮಿಕ ಭಕ್ತಿ:
ಅಪ್ಪು ಶೆಟ್ಟಿಯವರು ಅಪಾರ ದೈವ ದೇವರ ಭಕ್ತರಾಗಿದ್ದರು. . ಮನೆ ದೈವ ಪಂಜುರ್ಲಿಗೆ ತಂಬಿಲ ಸೇವೆ ಸ್ವತಃ ಸಲ್ಲಿಸುತ್ತಿದ್ದರು. ಜೈನ ಶ್ರಾವಕನಾಗಿ ಜೈನ ಧರ್ಮದ ಸಕಲ ವ್ರತಗಳನ್ನು ಶಕ್ತಿ ಮೀರಿ ನಿಷ್ಟೆಯಿಂದ ಪಾಲಿಸುತ್ತಿದ್ದರು.
ಸಹೋದರರನ್ನು ಮರಳಿಸಿದ ಘಟನೆ:
ಅಪ್ಪು ಶೆಟ್ಟಿಯವರ ಕುಟುಂಬದಲ್ಲಿ ಒಂದು ಮಹತ್ವದ ಘಟನೆ ನಡೆದಿದೆ. ಅವರ ಇಬ್ಬರು ಸಹೋದರರು – ನೇಮಿರಾಜ ಶೆಟ್ಟಿ ಮತ್ತು ಆದಿರಾಜ ಶೆಟ್ಟಿಯವರು, ಬದುಕಿನ ದಾರಿ ತಪ್ಪಿ ಮನೆ ಬಿಟ್ಟು ಹೊರಟಿದ್ದರು. ಅಪ್ಪು ಶೆಟ್ಟಿಯವರು ತಮ್ಮ ಕುಟುಂಬದ ಮನೆ ದೈವ ಪಂಜುರ್ಲಿಗೆ ಮೊರೆ ಹೋಗಿ, ಸಹೋದರರನ್ನು ಮತ್ತೆ ಮನೆಗೆ ಮರಳುವಂತೆ ಮಾಡಿದರು. ತನ್ನ ಪಾಲಿಗೆಂದು ಮೀಸಲಾಗಿದ್ದ ಭೂಮಿಯಲ್ಲಿ ಪೂರ್ವ ದಿಕ್ಕಿಗೆ ಒಬ್ಬನಿಗೆ ಮತ್ತು ಪಶ್ಚಿಮ ದಿಕ್ಕಿಗೆ ಒಬ್ಬನಿಗೆ ಪಾಲು ಮಾಡಿಕೊಟ್ಟಿದ್ದರು . ಇದು ಅವರ ಧಾರ್ಮಿಕ ಭಕ್ತಿಯು ಮತ್ತು ಮನೆಯ ದೈವದ ಮಹತ್ವವನ್ನು ತೋರಿಸುತ್ತಿದೆ.
ದೈವದ ಶಕ್ತಿಯು ಕಳ್ಳನಿಗೆ ನೀಡಿದ ದಂಡನೆ:
ಇನ್ನೊಂದು ಘಟನೆ ಬಗ್ಗೆ ಕುಟುಂಬದ ಹಿರಿಯರಿಂದ ತಿಳಿದುಬಂದ ಮಾಹಿತಿ ಪ್ರಕಾರ, ಒಂದೊಮ್ಮೆ ತೋಟದಿಂದ ಬಾಳೆಗೊನೆ ಕದ್ದ ವ್ಯಕ್ತಿಗೆ ಪಂಜುರ್ಲಿ ದೈವಕ್ಕೆ ನಿವೇದನೆ ಮಾಡಿ ದಂಡನೆ ನೀಡಲು ಪ್ರಾರ್ಥಿಸಿದರು. ಪರಿಣಾಮ ಏಳು ಸಹೋದರರಲ್ಲಿ ಆರು ಜನ ಮರಣ ಹೊಂದಿದರು, ನಂತರ ತಪ್ಪನ್ನು ಅರಿತು, ಉಳಿದ ಒಬ್ಬನು ದೈವ ಕ್ಷಮೆ ಯಾಚಿಸಿ ಬದುಕಿದ. ಈ ಘಟನೆ ಅಪಾರ ಭಕ್ತಿಯು ಮತ್ತು ದೈವದ ಶಕ್ತಿಯು ಹೇಗೆ ಕೆಲಸ ಮಾಡುತ್ತಿತ್ತೆಂಬುದನ್ನು ತೋರಿಸುತ್ತದೆ.
ಪಂಜುರ್ಲಿ ದೈವದ ಮಹಿಮೆ:
ಪಂಜುರ್ಲಿ ದೈವದ ಮಹಿಮೆ ಈ ಕುಟುಂಬದಲ್ಲಿ ಪ್ರತ್ಯಕ್ಷವಾಗಿದ್ದು, ಎಷ್ಟೋ ಬಾರಿ ಅಸಾಧಾರಣ ಘಟನೆಗಳು ಈ ದೈವದ ಪ್ರಭಾವದಿಂದ ಸಾಧ್ಯವಾಗಿವೆ. ಇಂದಿಗೂ ಈ ದೈವದ ಕೃಪೆ ಕುಟುಂಬದ ಮೇಲಿರುತ್ತದೆ, ಮತ್ತು ತಲೆಮಾರಿನವರಿಗೆ ಹೃದಯವನ್ನು ತಟ್ಟುವಂತೆ ಹಲವಾರು ಸಂದರ್ಭಗಳಲ್ಲಿ ದೈವದ ಮಹತ್ವವನ್ನು ತೋರಿಸಿಕೊಟ್ಟಿದೆ.
ಅಪ್ಪು ಶೆಟ್ಟಿಯವರ ಜೀವನ, ಕೃಷಿ, ಧಾರ್ಮಿಕ ನಿಷ್ಠೆ ಮತ್ತು ಕುಟುಂಬ ಪ್ರೀತಿ, ಇವೆರಡೂ ಅವರ ವ್ಯಕ್ತಿತ್ವವನ್ನು ರೂಪಿಸಿದ್ದವು.