ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ

ಶೇರ್ ಮಾಡಿ

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳುನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಇಲ್ಲಿಯ ಆರಾಧ್ಯ ದೈವ ಮಂಜುನಾಥ ಸ್ವಾಮಿಯನ್ನು ಮಂಗಳೂರಿನ ಕದ್ರಿ ಎಂಬಲ್ಲಿಂದ ತಂದು ಉಡುಪಿಯ ಯತಿಗಳಾದ ಶ್ರೀ ವಾದಿರಾಜರು ಪ್ರತಿಷ್ಠಾಪಿಸಿದರು ಎಂದು ಪ್ರತೀತಿ ಇದೆ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ – ಸಾಂಸ್ಕೃತಿಕ ಕೇಂದ್ರವಾಗಿ ಯಕ್ಷಗಾನದ ನಾಡಿನ ಚರಿತ್ರೆಯನ್ನೂ ಅಲಂಕರಿಸುತ್ತಿದೆ.

ಇತಿಹಾಸ

ಈ ಕ್ಷೇತ್ರಕ್ಕೆ ಸುಮಾರು ಏಳರಿಂದ ಎಂಟುನೂರು ವರುಷಗಳ ಇತಿಹಾಸವಿದೆ. ಧರ್ಮಸ್ಥಳದ ಹಿಂದಿನ ಹೆಸರು “ಕುಡುಮ” ಎಂಬುದಾಗಿತ್ತು. ಈ ಪ್ರಾಂತ್ಯದ ನೆಲ್ಯಾಡಿ ಬೀಡು ಎಂಬ ಗೃಹದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ಧರ್ಮಿಷ್ಠರಾದ ಸತಿ – ಪತಿ ವಾಸವಾಗಿದ್ದರು.

ಒಮ್ಮೆ ಇವರ ಮನೆಗೆ ನಾಲ್ಕು ಮಂದಿ ಅತಿಥಿಗಳು ಬಂದರು. ಇವರನ್ನು ನೇಮ ನಿಷ್ಠೆಯಿಂದ ಈ ದಂಪತಿಗಳು ಅತಿಥಿ ಸತ್ಕಾರ ಮಾಡಿದರು. ಅದೇ ದಿನ ರಾತ್ರಿ ಆ ನಾಲ್ವರು ಅತಿಥಿಗಳು ಧರ್ಮದೇವತೆಗಳ ರೂಪದಲ್ಲಿ ಬಿರ್ಮಣ್ಣ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು, ತಾವೆಲ್ಲರೂ ಆ ಮನೆಯಲ್ಲಿ ನೆಲೆಸಲು ಇಚ್ಚಿಸಿರುವುದಾಗಿ ಹೇಳಿದರು. ಧರ್ಮದೇವತೆಗಳ ಅಣತಿಯಂತೆ ಪೆರ್ಗಡೆಯವರು ತಮ್ಮ ಮನೆ ತೆರವು ಮಾಡಿ ದೇವರುಗಳಿಗೆ ಬಿಟ್ಟು ಕೊಟ್ಟರು.. ಕಾಳರಾಹು-ಪುರುಷ ದೈವ, ಕಳರ್ಕಾಯಿ-ಸ್ತ್ರೀ ದೈವ, ಕುಮಾರಸ್ವಾಮಿ-ಪುರುಷ ದೈವ, ಹಾಗೂ ಕನ್ಯಾಕುಮಾರಿ-ಸ್ತ್ರೀ ದೈವ ಆ ಮನೆಯಲ್ಲಿ ನೆಲೆನಿಂತರು.

ಕಾಳರಾಹು – ಪುರುಷ ದೈವ, ಕಳರ್ಕಾಯಿ – ಸ್ತ್ರೀ ದೈವ, ಕುಮಾರಸ್ವಾಮಿ – ಪುರುಷ ದೈವ, ಹಾಗೂ ಕನ್ಯಾಕುಮಾರಿ – ಸ್ತ್ರೀ ದೈವ ಆ ಮನೆಯಲ್ಲಿ ನೆಲೆನಿಂತರು. ಆ ದೈವಗಳ ಆಜ್ಞೆಯಂತೆ ಪರ್ಗಡೆಯವರು ಗುಡಿ ಕಟ್ಟಿಸಿ ಬ್ರಾಹ್ಮಣ ಅರ್ಚಕರನ್ನು ನಿತ್ಯ ಪೂಜೆಗೆ ನೇಮಿಸಿದರು.

ಅರ್ಚಕರು ಇಲ್ಲಿ ಈಶ್ವರಲಿಂಗವನ್ನು ಸ್ಥಾಪಿಸುವಂತೆ ಸಲಹೆ ನೀಡಿದರು. ಧರ್ಮದೇವತೆಗಳು ಕೂಡ ಇದನ್ನೇ ಹೇಳಿ ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಕಳುಹಿಸಿದರು.ಕುಡುಮಕ್ಕೆ (ಧರ್ಮಸ್ಥಳ)ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ.

ಕುಡುಮಕ್ಕೆ (ಧರ್ಮಸ್ಥಳ) ಮಂಜುನಾಥನ ಲಿಂಗ ಬರುವುದರೊಳಗೆ ಅಲ್ಲಿ ಧರ್ಮದೇವತೆಗಳು ದೇವಾಲಯ ನಿರ್ಮಿಸಿದ್ದರು ಎಂಬ ಕಥೆ ಇಲ್ಲಿ ಜನಜನಿತವಾಗಿದೆ.

ಸಮಾಜ ಸೇವೆ

ಧರ್ಮಸ್ಥಳದ ಆಡಳಿತವು ಹಲವಾರು ಸಮಾಜ ಸೇವೆಗಳನ್ನು ನಡೆಸುತ್ತಿದೆ.

ಸಾಮೂಹಿಕ ವಿವಾಹ

೧೯೭೨ ರಿಂದ ಇಂದಿನವರೆಗೆ ಸತತವಾಗಿ ಸಮಾಜದಲ್ಲಿ ವರದಕ್ಷಿಣೆ ಪಿಡುಗು ಮತ್ತು ಆಡಂಬರದ ಮದುವೆಯ ಸುಧಾರಣೆಗೋಸ್ಕರ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ.

ಅನ್ನದಾನ

ಧರ್ಮಸ್ಥಳಕ್ಕೆ ಆಗಮಿಸುವ ಸರಾಸರಿ ೧೦,೦೦೦ ಭಕ್ತಾದಿಗಳಿಗೆ ಉಚಿತ ಭೋಜನದ ವ್ಯವಸ್ಥ ಮಾಡಲಾಗಿದೆ.ಇದಕ್ಕಾಗಿ ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡ ಅನ್ನಪೂರ್ಣ ಎಂಬ ಹೆಸರಿನ ವಿಶಾಲ ಕಟ್ಟಡವಿದೆ.

See also  Things to Look For in a Financial Trading Platform

ವಿದ್ಯಾದಾನ

ಧರ್ಮಸ್ಥಳ ದೇವಳದ ವತಿಯಿಂದ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಪ್ರಾಥಮಿಕ ಶಾಲೆಯಿಂದ ಪ್ರಾರಂಬಿಸಿ ಉನ್ನತ ಶಿಕ್ಷಣವನ್ನು ನೀಡುವ ಸುಮಾರು ೨೫ಕ್ಕಿಂತಲೂ ಹೆಚ್ಚು ಸಂಸ್ಥೆಗಳನ್ನು ನಡೆಸಲಾಗುತ್ತಿದೆ.ಈ ಸಂಸ್ಥೆಗಳು ಸಮೀಪದ ಉಜಿರೆಯಲ್ಲಿ ಅಲ್ಲದೆ ಧಾರವಾಡ,ಮೈಸೂರು,ಮಂಗಳೂರು,ಹಾಸನ,ಉಡುಪಿಮುಂತಾದೆಡೆ ಹರಡಿಕೊಂಡಿವೆ.

ಔಷಧದಾನ

ಬಡ ಹಳ್ಳಿಯ ಜನರ ಅನುಕೂಲಕ್ಕೆ ಸಂಚಾರಿ ಆಸ್ಪತ್ರೆ,ಪ್ರಕೃತಿ ಚಿಕಿತ್ಸೆಯನ್ನು ನೀಡುವ ಶಾಂತಿವನ ನ್ಯಾಚುರೋಪತಿ ಆಸ್ಪತ್ರೆ, ಆಯುರ್ವೇದ ಚಿಕಿತ್ಸೆಗಾಗಿ ಉಡುಪಿ ಮತ್ತು ಹಾಸನದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಮತ್ತು ಅಲೋಪತಿ ಔಷಧ ಪದ್ಧತಿಯಲ್ಲಿ ಚಿಕಿತ್ಸೆಗಾಗಿ ಧಾರವಾಡ ಮತ್ತು ಉಜಿರೆಗಳಲ್ಲಿ ಆಸ್ಪತ್ರೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ವಸ್ತು ಸಂಗ್ರಹಾಲಯಗಳು

ಧರ್ಮಸ್ಥಳಕ್ಕೆ ದೇವಸ್ಥಾನ ವತಿಯಿಂದ ಹಳೆ ಕಾರುಗಳ ಸಂಗ್ರಹಾಲಯ ಮತ್ತು ಮಂಜೂಷಾ ವಸ್ತು ಸಂಗ್ರಹಾಲಯವಿದೆ. ಹಳೆಯ ಹಸ್ತ ಪ್ರತಿಗಳು, ಗ್ರಂಥಗಳ ರಕ್ಷಣೆಯನ್ನು ಮಾಡುವ ಗ್ರಂಥಾಲಯವೂ ಇಲ್ಲಿದೆ.

ಸಾರಿಗೆ ವ್ಯವಸ್ಥೆ

ಧರ್ಮಸ್ಥಳವು ದಕ್ಷಿಣ ಕನ್ನಡದ ಮಲೆನಾಡು ಪ್ರದೇಶದಲ್ಲಿದೆ.ಜಿಲ್ಲಾ ಕೇಂದ್ರವಾದ ಮಂಗಳೂರಿನಿಂದ ೭೫ ಕಿ.ಮೀ.ದೂರದಲ್ಲಿದೆ.ಮಂಗಳೂರಿಗೆ ದೇಶದ ಎಲ್ಲಾ ಭಾಗಗಳಿಂದ ರಸ್ತೆ,ರೈಲು ಮತ್ತು ವಿಮಾನ ಯಾನ ಸೌಕರ್ಯಗಳಿದ್ದು ಧರ್ಮಸ್ಥಳಕ್ಕೆ ಕೂಡಾ ಉತ್ತಮ ಸಾರಿಗೆ ಸೌಕರ್ಯಗಳಿವೆ. ಧರ್ಮಸ್ಥಳವು ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಉಜಿರೆಯಿಂದ ಕೇವಲ ೯ ಕಿ.ಮೀ ದೂರದಲ್ಲಿದೆ.ಬೆಂಗಳೂರಿನಿಂದ ಶಿರಾಡಿ ಘಾಟಿಯಾಗಿ ರಸ್ತೆಯಲ್ಲಿ ಹಾಗೂ ರೈಲಿನಲ್ಲಿ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಇಲ್ಲಿಗೆ ಆಗಮಿಸಬಹುದಾಗಿದೆ. ಇಲ್ಲಿಂದ ಸಮೀಪದ ಇತರ ಯಾತ್ರಾಕ್ಷೇತ್ರಗಳಾದ ಸುಬ್ರಹ್ಮಣ್ಯ,ಉಡುಪಿ,ಕೊಲ್ಲೂರು,ಕಟೀಲು ಮುಂತಾದೆಡೆಗೆ ಹೇರಳ ಸಾರಿಗೆ ಸೌಕರ್ಯವಿದೆ.

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?