ಮಾಧ್ಯಮ ಅಭಿಯಾನ

Share this

ಪರಿಚಯ:
ಮಾಧ್ಯಮವೆಂದರೆ “ಸತ್ಯದ ಸಂಚಾರಿ ದೀಪ.”
ಇಂದು ಬಹುತೆಕ ಮಾಧ್ಯಮಗಳು ಪ್ರಚಾರದ ಮಾಧ್ಯಮಗಳಾಗಿ ಬದಲಾಗಿವೆ. ವ್ಯಕ್ತಿ, ಪಕ್ಷ, ಹಣ, ಮತ್ತು ಹಿತಾಸಕ್ತಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿವೆ. ಇದು ಮಾಧ್ಯಮದ ಮೂಲ ಧರ್ಮವಲ್ಲ.
ಈ ಅಭಿಯಾನದ ಉದ್ದೇಶ, ಮಾಧ್ಯಮವನ್ನು ಪುನಃ ಅದರ ಶುದ್ಧ ಸ್ವರೂಪಕ್ಕೆ ಮರಳಿ ತರುವದು.

ಅಭಿಯಾನದ ಪ್ರಮುಖ ಅಂಶಗಳು:
1. ಮಾಧ್ಯಮ – ಪ್ರಸಾರ ಮಾಧ್ಯಮವಿರಲಿ, ಪ್ರಚಾರ ಮಾಧ್ಯಮವಲ್ಲ:
ಮಾಧ್ಯಮವು ಪ್ರಚಾರದ ವೇದಿಕೆಯಾಗಬಾರದು. ಇದು ಸತ್ಯ, ಧರ್ಮ, ಸಂಸ್ಕೃತಿ, ಜ್ಞಾನ, ನ್ಯಾಯ ಎಂಬ ಮೌಲ್ಯಗಳನ್ನು ಪ್ರಸಾರ ಮಾಡುವುದಕ್ಕೆ ವೇದಿಕೆಯಾಗಬೇಕು.

2. ಜಾಗತಿಕ ಮಟ್ಟದಲ್ಲಿ ಪಾವನ ಮಾಧ್ಯಮ:
ಮಾಧ್ಯಮವು ದೇಶ, ಧರ್ಮ, ಭಾಷೆ, ವರ್ಣ, ಲಿಂಗ, ವರ್ಗ, ಪಕ್ಷ ಎನ್ನದೆ ಮಾನವೀಯತೆಯ ಪರವಾಗಿ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು.

3. ಪೂರಕ ವಿಷಯಗಳ ಪ್ರಚಾರ:
ಸಮಾಜದ ಬೆಳವಣಿಗೆಗೆ, ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿ, ನೀತಿ ಮೌಲ್ಯಗಳಿಗೆ ಪೂರಕವಾದ ವಿಷಯಗಳನ್ನೇ ಪ್ರಸಾರ ಮಾಡಬೇಕು.

4. ಕೆಟ್ಟ ವಿಷಯಗಳ ವೈಭವೀಕರಣ ತಪ್ಪಿಸಬೇಕು:
ಅಪರಾಧ, ಭ್ರಷ್ಟಾಚಾರ, ಗಾಂಧುಳತನ, ನಕಾರಾತ್ಮಕ ರಾಜಕೀಯ ಇತ್ಯಾದಿಗಳಿಗೆ ಮಾಧ್ಯಮ ವೇದಿಕೆಯಾಗಬಾರದು. ದುಷ್ಟತನಕ್ಕೆ ಪಾದುಕೆಯಾದ ಮಾಧ್ಯಮ ಸಮಾಜವನ್ನು ಹಾಳು ಮಾಡುತ್ತದೆ.

5. ಒಳ್ಳೆಯ ವ್ಯಕ್ತಿಗಳ ಹುಟ್ಟಿಗೆ ಸಹಾಯಕ ವ್ಯವಸ್ಥೆ:
ಮಾಧ್ಯಮವು ಮಕ್ಕಳಲ್ಲಿ ಉತ್ತಮತೆ ಬೆಳೆಸುವ, ಯುವಕರಲ್ಲಿ ಧೈರ್ಯ, ಶಿಸ್ತಿಗೆ ಪ್ರೇರಣೆಯಾಗುವ ವಿಷಯಗಳನ್ನು ನಿರಂತರವಾಗಿ ನೀಡಬೇಕು.

6. ದುಷ್ಟರಿಗೆ ಮಾರಕ – ಶಿಷ್ಟರಿಗೆ ಪೂರಕ:
ಮಾಧ್ಯಮ ದುಷ್ಟತನವನ್ನು ಬಹಿರಂಗಪಡಿಸುವ ಶಕ್ತಿಯಾಗಬೇಕು. ಶ್ರೇಷ್ಠ ಚಿಂತಕರಿಗೆ, ಚಿಂತನೆಗೆ, ಧರ್ಮದ ಧ್ವನಿಗೆ ಪೋಷಕವಾಗಬೇಕು.

7. ಕಾನೂನು ಪಾಲಕರು ಮತ್ತು ಸುಸಂಸ್ಕೃತರಿಗೆ ಮಾತ್ರ ಅವಕಾಶ:
ಯಾವುದೇ ಮಾಧ್ಯಮ ವೇದಿಕೆ – ಧರ್ಮ, ಸಮಾಜ, ನೈತಿಕತೆಯ ಅರಿವಿರುವವರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಧರ್ಮದ ಗೌರವ ಉಳಿಸಬೇಕು.

8. ಪ್ರಜಾಪ್ರಭುತ್ವದ ಮೂಲ ತತ್ತ್ವವನ್ನು ನೆನಪಿಸಲಿ:
ಮಾಧ್ಯಮ ಸದಾ ಪ್ರಜೆಗಳ ಧ್ವನಿಯಾಗಬೇಕು. ಮಾಧ್ಯಮದ ಮೊದಲ ಕರ್ತವ್ಯ – ಪ್ರಜೆಗಳ ಹಿತ. ಅಧಿಕಾರಿಗಳ ತಪ್ಪುಗಳು ಬಹಿರಂಗವಾಗಬೇಕು.

9. ಪಕ್ಷ, ವ್ಯಕ್ತಿ, ಹಣ ಕಳೆದುಕೊಳ್ಳುವ ನೀತಿಯ ನಾಶ
ಮಾಧ್ಯಮ ಯಾವುದೇ ಪಕ್ಷದ, ಯಾವುದೇ ವ್ಯಕ್ತಿಯ, ಅಥವಾ ಹಣದ ಹೊಡೆತಕ್ಕೆ ಬಲಿಯಾಗಬಾರದು. ನಿಷ್ಠೆ, ತಾತ್ವಿಕತೆ, ನೈತಿಕತೆ ಮುಖ್ಯ.

10. ಅಮೃತ ಮಾತ್ರ ಪ್ರಜೆಗಳಿಗೆ ಸಿಗಲಿ:
ಮಾಧ್ಯಮದಿಂದ ಇಂದು ವಿಷದಂತಹ ವಿಷಯಗಳು – ಭಯ, ಗೊಂದಲ, ಅಪಪ್ರಚಾರ ಸಿಗುತ್ತಿವೆ. ಇವು ಅಮೃತದಂತೆ ಜ್ಞಾನದ ಬೆಳಕು ತರಬೇಕಾಗಿದೆ.

11. ಮಾಧ್ಯಮ ತನ್ನ ಮೂಲಧರ್ಮವನ್ನು ಅರಿಯಲಿ:
ಮಾಧ್ಯಮದ ಮೂಲ ಉದ್ದೇಶ – ಜನರಿಗೇನು ಬೇಕು, ಸಮಾಜ ಏನು ಸತ್ಯ, ಧರ್ಮ, ಮತ್ತು ಉನ್ನತತೆಯ ಹಾದಿಗೆ ದಾರಿ ಮಾಡಿಕೊಡುವುದು.

12. ಮಾಧ್ಯಮದ ಸ್ವಚ್ಛತೆ – ಮಾನವ ಸ್ವರ್ಗಕ್ಕೆ ನಾಂದಿ:
ಮಾಧ್ಯಮ ಶುದ್ಧವಾದಾಗ ಮಾತ್ರ – ಶಾಂತಿ, ಸಮತೋಲನ, ಪ್ರಗತಿ, ಸೌಹಾರ್ದತೆ, ಸಹಬಾಳ್ವೆ ಎನ್ನುವ ಮಾನವೀಯ ಮೌಲ್ಯಗಳು ಬೆಳೆಯುತ್ತವೆ.

See also  Service federation 

ಸಾರಾಂಶ:
ಇಂದು ಮಾಧ್ಯಮಗಳು ದಿಕ್ಕುತಪ್ಪಿರುವ ಸ್ಥಿತಿಯಲ್ಲಿ ಇರುವುದನ್ನು ನಾವು ಕಾಣುತ್ತೇವೆ. ಈ ಮಾಧ್ಯಮ ಅಭಿಯಾನದ ಉದ್ದೇಶ – ಮಾಧ್ಯಮವನ್ನು ಪುನಃ ನೈತಿಕ, ಜ್ಞಾನದ, ಸತ್ಯದ, ಧರ್ಮದ ದಾರಿಗೆ ತರುವದು.
ಇದು ಕೇವಲ ಒಂದು ಆಳವಾದ ಚಿಂತನೆಯಲ್ಲ, ಇದೊಂದು ಸಾಮಾಜಿಕ ಜವಾಬ್ದಾರಿಯ ಹಾದಿ.

Leave a Reply

Your email address will not be published. Required fields are marked *

error: Content is protected !!! Kindly share this post Thank you