
ಒಂದು ಕಾಲದಲ್ಲಿ ಬಾರಿಕೆ, ಗುತ್ತು, ಬೀಡು, ಅರಮನೆ ಮುಂತಾದ ಪ್ರತಿಯೊಂದು ಪಾವನ ಸ್ಥಳಗಳಲ್ಲಿ
ದೈವದ ಪಾವನ ಸಾನ್ನಿಧ್ಯ ಇತ್ತು ಎಂಬುದು ನಮ್ಮ ಮುಂದೆ ಇರುವ ಜ್ವಲಂತ ಉದಾಹರಣೆ.
ದೈವ ಎಂದರೆ—
ನಿತ್ಯ, ನಿರಂತರ, ಶಾಶ್ವತವಾಗಿ ಸತ್ಯ, ಧರ್ಮ, ನ್ಯಾಯಗಳಿಗೆ ಕಿಂಚಿತ್ತೂ ದಕ್ಕೆ ಬಾರದಂತೆ
ನೋಡಿಕೊಳ್ಳುವ ಜಗತ್ತಿನ ಅತ್ಯಂತ ಶ್ರೇಷ್ಠ ದೈವಿಕ ಶಕ್ತಿ.
ಮನದಾಳದ ನೋವನ್ನು, ಸಂಕಟವನ್ನು, ಬಿನ್ನವಿಯನ್ನು
ಒಬ್ಬ ಸಾಮಾನ್ಯ ಭಕ್ತನು ದೈವದ ಮುಂದೆ ಇರಿಸಿದಾಗ—
ಅತ್ಯಲ್ಪ ಸಮಯದಲ್ಲಿ, ಅತ್ಯಲ್ಪ ವೆಚ್ಚದಲ್ಲಿ, ಅತ್ಯುತ್ತಮ ಪರಿಹಾರ ನೀಡುವ
ಕಾಮಧೇನುಸಮ ದೈವಪ್ರಸಾದ.
ದುರಾಶೆಯುಳ್ಳ ಕಳ್ಳರು, ವಂಚಕರು, ಕೇಡಿಗಳು
ಮತ್ತು ಸಮಾಜಕ್ಕೆ ಕೆಡುಕು ಬಯಸುವ ಯಾರಿಗೂ
ಅವಕಾಶ ನೀಡದ ಧರ್ಮರಾಜ್ಯದ ಸ್ವರ್ಗ ಕಟ್ಟುವ ಶಕ್ತಿ ದೈವಕ್ಕಿದೆ.
ಆಧುನಿಕ ಪ್ರಜಾಪ್ರಭುತ್ವದ ಸಮಗ್ರ ವ್ಯವಸ್ಥೆಯನ್ನೇ,
ಆರೋಗ್ಯ–ಸುಸ್ಥಿತಿ ಸೇರಿಸಿ
ಸಮರ್ಪಕವಾಗಿ ನಡೆಸಬಲ್ಲ ದೈವದೂತರ ಶಕ್ತಿ.
ನಮ್ಮ ಪೂರ್ವಜರು ಪ್ರತಿಯೊಬ್ಬರೂ
ತಮ್ಮದೇ ಮನದಲ್ಲಿ ದೈವ–ದೇವರನ್ನು ಪ್ರತಿಷ್ಠಾಪಿಸಿ,
ಭಕ್ತಿ, ಶ್ರದ್ದೆ, ನಂಬಿಕೆಯಿಂದ
ನೆಮ್ಮದಿ–ಶಾಂತಿಯ ಬದುಕನ್ನು ನಡೆಸಿದರು.
ಆದರೆ ಇಂದು—
ಮನದ ಪ್ರತಿಷ್ಠೆ ಮಾಯವಾಗಿ,
ಮೂರ್ತಿಯನ್ನೂ ಅನ್ಯರಿಂದ ಪ್ರತಿಷ್ಠಾಪಿಸುವ ಪದ್ಧತಿ
ನಮ್ಮ ಬದುಕಿನಲ್ಲಿ ಅನಾಹುತಗಳಿಗೆ
ದುಃಖಕರ ನಾಂದಿ ಆಯಿತು.
ಮನದಿಂದ ದೂರವಾಗಿರುವ ಪ್ರತಿಷ್ಠಾಪನೆ
ನಮ್ಮ ಜೀವನದಲ್ಲಿ ಕಾಣದ–ಕೇಳರಿಯದ ನೋವು, ದುಃಖ, ಅಶಾಂತಿಗೆ
ಕಾರಣವಾಗಿದೆ.
ನಮ್ಮ ಬದುಕು ಮತ್ತೆ ಸುಖ, ಶಾಂತಿ, ನೆಮ್ಮದಿಯ ದಾರಿಗೆ ಬರಬೇಕಾದರೆ—
ದೈವದ ಜೊತೆಗೆ ದೇವರ ಎರಡೂ ಮೂಲಗಳನ್ನು
ಸರಿಯಾಗಿ ಅರಿತು, ಅನುಷ್ಠಾನ ಮಾಡುವ
ದೃಢ ಸಂಕಲ್ಪ ನಮ್ಮಲ್ಲಿರಬೇಕು.
ಯಾವುದೇ ಜೀರ್ಣೋದ್ಧಾರ—
ಬೃಹತ್ ಶಿಲಾಮಯ ದೇವಾಲಯವಾಗಲಿ,
ಯಾವುದೇ ಕಟ್ಟಡ–ಪುನರಾನ್ವೇಷಣೆಯಾಗಲಿ—
ಅದು ಪರಿಪೂರ್ಣವಾಗಲು ಮೊದಲು
ವ್ಯಕ್ತಿಯ ಬದುಕಿನ ಜೀರ್ಣೋದ್ಧಾರ ಅಗತ್ಯ.
ದೈವ–ದೇವರು ಕೇವಲ ಕಟ್ಟಡಗಳಲ್ಲಿ, ಗೋಪುರಗಳಲ್ಲಿ, ಚಿನ್ನದ ಅಲಂಕಾರಗಳಲ್ಲಿ ಅಲ್ಲ—
ಅವರು ದಟ್ಟ ಕಾಡಿನ ನಿಸರ್ಗಶಕ್ತಿಯಲ್ಲಿ,
ಮೂಲ ತತ್ತ್ವದಲ್ಲಿ,
ಭಕ್ತನ ಮನದ ಗಾಢ ನಂಬಿಕೆಯಲ್ಲಿ.
ವಾಸ್ತುತಜ್ಞರ ಮಾತಿನಂತೆ—
“ಸತ್ಯ ದೈವ–ದೇವರು ಯಾವುದೇ ಕಟ್ಟಡದಲ್ಲಿಲ್ಲ;
ಅವರು ಪ್ರಕೃತಿಯಲ್ಲಿ ಅಡಗಿದ್ದಾರೆ
ಇದು ನೂರಕ್ಕೆ ನೂರು ಸತ್ಯ.
ನಮ್ಮ ಕರೆಯು ಇದೇ
ಈ ವೇದಿಕೆಯ ಮೂಲಕ ಪ್ರತಿಯೊಬ್ಬರೂ
ನಮ್ಮ ಭಿನ್ನತೆಗಳನ್ನು ಮರೆತು—
ಮೂಲ ದೈವಾರಾಧನೆ–ದೇವಾರಾಧನೆಯ ಶುದ್ಧ ಮಾರ್ಗದಲ್ಲಿ
ನೆಮ್ಮದಿಯ, ಶಾಂತಿಯ, ಸಮೃದ್ಧಿಯ ಬದುಕು ನಡೆಸೋಣ.