ಬೇರೆ ಬೇರೆ ರೀತಿಯ ಬುಲ್ಲೆಟಿನ್ಗಳ ಮಹಾಪೂರವೇ ಹರಿದು ಬಂದಿರುವುದನ್ನು ನೋಡಿ ಅವ್ಯಕ್ತಬುಲ್ಲೆಟಿನ್ಗೆ ಕಣ್ಣು ಹಾಯಿಸಿದವರಿಗೆ ಬೇಸರ ಹುಟ್ಟಿರಬಹುದು. ಇದು ನಮ್ಮ ವ್ಯಾಪ್ತಿಯ ಗುರುತು ಮಾತ್ರ.ನೀವು ನಾವು ಒಂದಾಗಿ ಬಲು ದೂರ ಸಾಗಬೇಕಾಗಿದೆ. ನಮ್ಮ ನಿಮ್ಮ ಆಲಿಂಗನಕ್ಕೇ ಮೊಬೈಲನ್ನು ಬಳಸೋಣ. ವಿಶಾಲ ಪ್ರಪಂಚ ಅತಿ ಸಣ್ಣದಾಗಿ ಮೊಬೈಲಿನ ಒಳಗೆ ಸೇರಿಕೊಂಡು ನಮಗೆ ಬೇಕಾದಾಗ ಬೇಕಾದ ಮಾಹಿತಿ ಸಿಕ್ಕಿ ಸುಮದುರ ಬದುಕು ನಮ್ಮದಾಗಲಿ. ಅಂದಿನ ಅವ್ಯಕ್ತ ವಚನ ಸಾಹಿತ್ಯಕ್ಕೆ ತಿದ್ದುಪಡಿ ಮಾಡಿ ಅದು ಈಗ
ಟಿ ವಿ ಬಕಾಸುರನಯ್ಯ , ಮೊಬೈಲ್ ಕಂಪ್ಯೂಟರ್ ಕಲ್ಪವೃಕ್ಷವಯ್ಯ , ತಿಳಿಸಿ ಹೇಳುವವರು ಎಲ್ಲಿಹರಯ್ಯ – ಇಲ್ಲಿ ಮೊಬೈಲ್ ಟಿ ವಿ ಜೊತೆಯಿಂದ ಕಂಪ್ಯೂಟರ್ ಜೊತೆಗೆ ಹಾರಿದ್ದು ಮಾತ್ರವಲ್ಲ ಸ್ಥಾನ ಮನವನ್ನು ಉತ್ತುಂಗಕ್ಕೆ ಏರಿಸಿಕೊಂಡಿದೆ. ಇದಕ್ಕೆ ಕಾರಣ ಹೆಚ್ಚಿನ ಕಂಪ್ಯೂಟರ್ ಸೌಲಭ್ಯಗಳೆಲ್ಲ ಮೊಬೈಲಿನಲ್ಲಿ ಸಿಗುತಿರುವುದು. ಅದನ್ನು ನಾವು ಎಷ್ಟರ ಮಟ್ಟಿಗೆ ಸದುಪಯೋಗ ಮಾಡಿಕೊಂಡಿದ್ದೇವೆ ಎನ್ನುವುದರ ಮೇಲೆ ಬದುಕು ನಿಂತಿದೆ.
ಹಸಿದವನಿಗೆ ಮಾತ್ರದ ಅನ್ನದ ಬೆಲೆ ಗೊತ್ತು – ತಿಕ ನೋಡುವವನಿಗೆ ಮುಖದ ಬೆಲೆ ಗೊತ್ತಿಲ್ಲ ಎಂಬ ನುಡಿಮುತ್ತುಗಳನ್ನು ಮೆಲುಕು ಹಾಕುತ್ತ – ನಾವೆಲ್ಲರೂ ಬೆಳಕಿನತ್ತ ದಾಪುಗಾಲು ಹಾಕುತ್ತಿರುವವರು ಎಂಬ ಅವ್ಯಕ್ತ ಸಂದೇಶದ ಮೇರೆಗೆ ವ್ಯಕ್ತ ವಿಚಾರ – ಮುಂದುವರಿಯುವದು