ದೈವದ ನುಡಿಕಟ್ಟು

ಶೇರ್ ಮಾಡಿ

ದೈವದ ನುಡಿಕಟ್ಟು – ಇದಕ್ಕೆ ದೈವಾರಾಧನೆಯಲ್ಲಿ ಪ್ರಥಮ ಪ್ರಾಶಸ್ತ್ಯ. ಸಾಮಾನ್ಯವಾಗಿ ಮೂರು ತೆರನಾದ ನುಡಿಕಟ್ಟುಗಳನ್ನು – ಮನೆ, ಊರಿನ, ಅರಸು ವ್ಯಾಪ್ತಿಯ – ಎಂದು ವಿಂಗಡಿಸಿದರು ಕೆಲವೊಮ್ಮೆ ಪ್ರತ್ಯೇಕವಾಗಿ ಗುತ್ತು, ಸಿಮೆಗುತ್ತು, … ಗಳಿದ್ದು ದೈವಗಳ ನುಡಿಕಟ್ಟು ಅವರವರ ವ್ಯಾಪ್ತಿಯನ್ನು ಅವಲಂಬಿಸಿರುತದೆ.
ನುಡಿಕಟ್ಟು – ಪದದ ಅರ್ಥ – ನುಡಿ ಅಂದರೆ ಕೆಲವೇ ಪದಗಳಲ್ಲಿ , ಕಟ್ಟು ಅಂದರೆ ಕಟ್ಟಿ ಹಾಕುವುದು.
ಒಂದು ,ಮನೆಯಲ್ಲಿ ದೈವದ ಕೊಲದ್ಲಲಿ – ದೈವದ ನುಡಿಕಟ್ಟು – ಆ ಮನೆಯವರನ್ನು ಎಷ್ಟೇ ದೊಡ್ಡ ಸಂಸಾರವಾಗಿದ್ದರು ಒಂದೇ ಮನಸುಳ್ಳವರನ್ನಾಗಿ ಮಾಡುವಲ್ಲಿ ನೂರಕ್ಕೆ ನೂರು ಸಫಲತೆ ಕಾಣಲೇಬೇಕು.


ಒಂದು ಊರಿನಲ್ಲಿ ದೈವದ ಕೋಲದಲ್ಲಿ – ಇಡೀ ಊರಿನವರನ್ನು ಒಂದೇ ಮನೆಯವರ ಹಾಗೆ , ಒಂದೇ ಮನಸುಳ್ಳವರಾಗಿ
ಒಂದು ಅರಸು ವ್ಯಾಪ್ತಿ ದೈವ ಕೋಲದಲ್ಲಿ – ಆ ವ್ಯಾಪ್ತಿಯವರನ್ನು ಏಕತೆಯಿಂದ ಬಾಳುವಂತೆ – ದೈವ ಪಾತ್ರಿ ನುಡಿಯಲ್ಲಿ ಕಟ್ಟಿ ಹಾಕಬೇಕು.
ಈ ರೀತಿ ಮಾಡಿದಾಗ ಮಾತ್ರ ದೈವದ ಕೋಲ ಸಫಲತೆ ಕಾಣುತದೆ. ಇಲ್ಲವಾದಲ್ಲಿ ಆ ಕೋಲ ನೀರಿನ ಮೇಲಿನ ಹೋಮ
ಇದು ಸಾಧ್ಯನಾ – ಇದು ಖಂಡಿತಾ ಸಾಧ್ಯ. ಇದರ ಅರಿವು ದೈವ ಪಾತ್ರಿಯಲ್ಲಿ ಮತ್ತು ಕೋಲ ಮಾಡಿಸುವವನಲ್ಲಿ ಇರಬೇಕು. ತಾನು ಮಾಡುವ ಕೋಲ ತನ್ನ ಹಣ ಬಲ ಪ್ರದರ್ಶನಕ್ಕಾಗಿದ್ದರೆ ಇದರ ಅವಶ್ಯಕತೆ ಇಲ್ಲ.
ಈ ನುಡಿಕಟ್ಟು ದೈವ ಪಾತ್ರಿಯ ನುಡಿಕಟ್ಟು ಆಗಿದ್ದಲ್ಲಿ ಅದರ ಫಲಿತಾಂಶ ಶೂನ್ಯ, ಅದು ಅವನು ಕಟ್ಟಿದ ದೈವದ ನುಡಿಕಟ್ಟು ಆಗಿರಲೇಬೇಕು.
ದೈವಾರಾಧನೆ ಎಂಬುದು ಸಂಮೋಹನ ವಿದ್ಯೆ. ಇದಕ್ಕೆ ಒಳಗಾದಲ್ಲಿ ಖಂಡಿತಾ ಸಾಧ್ಯ ಇದೆ.
ಬಾಹ್ಯ ಆಡಂಬರಕ್ಕೆ ದಾಸರಾಗಿ ಆಂತರಿಕ ಆಡಂಬರದ ಸಂಪೂರ್ಣ ಕೊರತೆ ಇಲ್ಲಿ ಎದ್ದು ಕಾಣುತಿದೆ .
ದೈವ ಆರಾಧಕರಲ್ಲಿ – ದೈವಕ್ಕೆ ನರ್ತನ ಸೇವೆ ಮಾಡಿಸಿದರೆ ದೈವ ಸಂತುಷ್ಟವಾಗಿ ನಮಗೆಲ್ಲವನ್ನು ಕೊಡುತದೆ ಎಂಬ ಮೂಡ ನಂಬಿಕೆ – ಮೂಲ ನಂಬಿಕೆಗೆ ವಿರುದ್ಧವಾಗಿದೆ. ಇದನ್ನು ತ್ವರಿತ ಜೀರ್ಣಿಸಿಕೊಳ್ಳಬೇಕಾಗಿದೆ.
ಎಣ್ಣೆ ಬೂಲ್ಯೆಯಿಂದ ಹಿಡಿದು ಪಿರಿ ಬೂಲ್ಯೆವರೆಗೆ ಆತ ದೈವವೇ ಹೊರತು ವ್ಯಕ್ತಿ ಖಂಡಿತಾ ಅಲ್ಲ – ಇದರ ಅರಿವು ಬೇಕು
ದೈವಾರಾಧನೆ ಸ್ಥಳ ಅತ್ಯಂತ ಪವಿತ್ರವಾದುದು. ಸಾಸಿವೆ ಕಾಲು ಬಿದ್ದರು ಕೇಳುವ ಸ್ಥಿತಿ ಅಲ್ಲಿ ಇರಬೇಕು. ಈಗ ಅದು ಸಂತೆ ಆಗಿ ಮಾರ್ಪಟ್ಟಿದೆ. ದೈವದ ಆರ್ಭಟ ಜನರ ಆರ್ಭಟದ ಮುಂದೆ ಸೋಲುತ್ತಿರುವುದು ನಾವು ದೈವಕ್ಕೆ ದೈವಾರಾಧನೆಗೆ ಕೊಡುತ್ತಿರುವ ಸ್ಥಾನ ಮಾನ.
ದೇವರ ಆರಾಧನೆ , ದೈವ ಆರಾಧನೆ – ಇದರ ಬಗ್ಗೆ ಸರಿಯಾದ ಶಿಕ್ಷಣ ಅಥವಾ ಅರಿವು ಹುಟ್ಟಿಸುವ ವ್ಯವಸ್ಥೆ ನಮ್ಮ ಸಮಾಜದಲ್ಲಿ ಇರಬೇಕಿತ್ತು. ಅದು ನಮ್ಮ ಸರ್ಕಾರಕ್ಕೂ ಬೇಕಿಲ್ಲ , ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರಿಗೂ ಬೇಕಿಲ್ಲ. ಹರಕೆ ತೀರಿಸುವ ರೀತಿಯಲ್ಲಿ ಎಲ್ಲವನ್ನು ಮಾಡುತ್ತಿದ್ದೇವೆ. ಶ್ರಾದ್ಧ ಭಕ್ತಿ ನಮ್ಮ ಹತ್ತಿರ ಸುಲಿಯುತಿಲ್ಲ. ನಮಗೆ ತೊಂದರೆ ಕೊಡದಿದ್ದರೆ ಸಾಕು ಎನ್ನುವಲ್ಲಿಗೆ ಮುಟ್ಟಿದ್ದೇವೆ. ದೇವ ಬಲ , ದೈವ ಬಲದಿಂದ ಎತ್ತರದಿಂದ ಎತ್ತರಕ್ಕೆ ಹಾರುವ ಹಂಬಲ ಕನಸು ನಮಗೆ ಬೇಕಾಗಿಲ್ಲ.
ನಮ್ಮ ಚಿಂತನ -ಮಂಥನ – ಅನುಷ್ಠಾನ – ನಮ್ಮ ಪ್ರಗತಿಗೆ ದಿಟ್ಟ ಹೆಜ್ಜೆ

See also  ತೆಂಗು ಕೃಷಿ ಮಾಹಿತಿ - Coconut cultivation information

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?