ನಮ್ಮ ದೇಶದಲ್ಲಿ ಪ್ರಸ್ತುತ ಇರುವ ಶಿಕ್ಷಣ ಪದ್ಧತಿ ಸರಿ ಇದೆಯಾ ?
ಇಲ್ಲ ಖಂಡಿತಾ ಸರಿ ಇಲ್ಲ . ಇದು ಅಕ್ಷರ ಜ್ಞಾನ ಕೊಡುವ ಕಾರ್ಖಾನೆ
ಹಾಗಾದರೆ ಶಿಕ್ಷಣ ಬಗ್ಗೆ ನೀವೇ ತಿಳಿಸಿ
ಹುಟ್ಟು ಸಾವು ನಡುವಿನ ಬದುಕಿನ ಬಗ್ಗೆ ಸರಿಯಾದ ತಿಳುವಳಿಕೆಯನ್ನು ನೀಡುವುದೇ ಶಿಕ್ಷಣ
ಈ ಶಿಕ್ಷಣ ಪದ್ಧತಿ ಎಲ್ಲಿಂದ ಬಂತು?
ಇದು ನಮ್ಮನ್ನು ಆಳಿದ ಬ್ರಿಟಿಷರು ಬಿಟ್ಟು ಹೋದ ಅತಿ ಕೆಟ್ಟ ಕಾರ್ಖಾನೆಯಲ್ಲಿ ಒಂದು
ಸ್ವತಂತ್ರ ಬಂದು ಎಷ್ಟು ವರುಷ ಕಳೆದರು ಯಾಕೆ ಸರಿಯಾದ ಶಿಕ್ಷಣ ಪದ್ಧತಿ ಅಳವಡಿಸಿಲ್ಲ ?
ನಮ್ಮ ದೇಶದಲ್ಲಿ ೧೩೦ ಕೋಟಿ ಜನರು ೨೬೦ ಕೋಟಿ ಜನರ ಸ್ವಾತಂತ್ರಕ್ಕೆ ಹೋರಾಡುತಿದ್ದಾರೆ.ಅವರಿಗೆ ದೇಶದ ಬಗ್ಗೆ ಆಗಲಿ , ಶಿಕ್ಸಣ, ಆಡಳಿತ, ನ್ಯಾಯದಾನ ………ಬಗ್ಗೆ ಯೋಚನೆ ಮಾಡಲು ಸಮಯ ಸಿಗುವುದಿಲ್ಲ
ಹಾಗಾದರೆ ಪರಿಹಾರ ಇಲ್ಲವೇ ?
Macaulay ಸ್ಪೀಚ್ ೨/೨/೧೮೩೫ – ಇವರು ಅಂದು ಬ್ರಿಟಿಷ್ ಸಂಸತಿನಲ್ಲಿ ಮಾಡಿದ ಭಾಷಣ ಭಾರತದ ದಿಕ್ಕನೇ ತಿರುಗಿಸಿ ನಮ್ಮ ಅಧಪತನದ ಪ್ರಸ್ತುತ ಶಿಕ್ಷಣ ಪದ್ದತಿಗೆ ನಾಂದಿಯಾಯಿತು. ಆ ವ್ಯಕ್ತಿಗಿಂತ ನೂರು ಪಾಲು ಮಿಗಿಲಾದ ಜ್ಞಾನಿಗಳು ನಮ್ಮಲ್ಲಿದ್ದಾರೆ. ಅವರ ಮಾತುಗಳು ಅರ್ಥಪೂರ್ಣ ಎಂದು ಆಡಳಿತಕ್ಕೆ ಅರಿವಾದಾಗ ಖಂಡಿತಾ ಸಾಧ್ಯವಿದೆ.
ಶಾಲಾ ಶಿಕ್ಷಣ ಪದ್ಧತಿ ತಪ್ಪೇ ?
ತಪ್ಪು ಖಂಡಿತಾ ಅಲ್ಲ . ನಾವು ಯಾವ ರೀತಿಯ ಪ್ರಜೆಗಳನ್ನು ತಯಾರಿಸಿ ಸಮಾಜಕ್ಕೆ ಕಳುಹಿಸಬೇಕು ಎನ್ನುವ ಅರಿವು ಆ ಸಂಸ್ಥೆಗಳಿಗೆ ಗೊತ್ತಿರಬೇಕು.
ಎಲ್ಲಿ ತಪ್ಪು ಆಗುತ್ತಿದೆ ಎಂದು ನಿಖರವಾಗಿ ಹೇಳಿ ?
ಉತ್ತಮ ಸಂಸ್ಕಾರವಂತರನ್ನು ಸೃಷ್ಟಿಸಬೇಕು. ಇದಕ್ಕಾಗಿ ತಾನು ತಪ್ಪು ಮಾಡಿದರೆ , ಆದರೆ ಅದನ್ನು ಒಪ್ಪಿಕೊಳ್ಳುವ ಸಹಜ ಮಾನವ ಪ್ರವೃತಿ ಪ್ರಜೆಗಳಲ್ಲಿರಬೇಕು. ಇದು ಈ ದೇಶದಲ್ಲಿ ಯಾರಿಗೂ ಇಲ್ಲ. ತಪ್ಪು ಮಾಡಿದವರನ್ನು ಯಾರು ಕೂಡ ಕಾನೂನಿಂದ ರಕ್ಷಣೆ ಮಾಡುವ ಹಾಗಿಲ್ಲ. ಇದು ಇಲ್ಲಿ ನಿರಂತರ ನಡೆಯುತದೆ. ಇದರಿಂದಾಗಿ ಹುಲಿ ಮತ್ತು ದನಗಳನ್ನು ಒಂದೇ ಗೂಡಿನಲ್ಲಿ ಹಾಕಿದಂತಾಗಿದೆ ಮಾನವ ಬದುಕು.
ಇದು ಆಡಳಿತ ವೈಫಲ್ಯ . ಶಿಕ್ಸಣ ಪದ್ಧತಿ ಹೊಣೆ ಅಲ್ಲ
ಆಡಳಿತ ನಡೆಸುವವರು ಹೊರಗಿನವರು ಅಲ್ಲ . ನಮ್ಮವರೇ , ನಮ್ಮ ಶಾಲೆಯಲ್ಲಿ ಓದಿದವರೇ . ಅವರಿಗೆ ಸರಿಯಾದ ಶಿಕ್ಷಣ ದೊರೆತು ಮಾನವರಾಗಿ ಅಥವಾ ದೇವಮಾನವರಾಗಿ ಇರುತಿದ್ದರೆ ಸ್ವರ್ಗ ನಮ್ಮದಾಗುತಿತ್ತು. ಅದರ ಬದಲು ಕಿತ್ತು ತಿನ್ನುವ ರಾಕ್ಸಸರು ಹೊರಬರುತ್ತಿರುವುದು ನರಕ ಬದುಕಿಗೆ ಕಾರಣವಾಗಿದೆ ………………………………………………………….ಮುಂದುವರಿಯುವುದು