ಯಜಮಾನನಿಲ್ಲದ ದೈವಾರಾಧನೆ – ಫಲಿತಂಶ ಶೂನ್ಯ
ಪ್ರದಾನಿಯಿಲ್ಲದ ದೇಶ , ಮುಖ್ಯಮಂತ್ರಿ ಇಲ್ಲದ ರಾಜ್ಜ, ಅಧ್ಯಕ್ಷನಿಲ್ಲದ ಸಂಸ್ಥೆ ಹೇಗೆ ಏನುಕೂಡಾ ಪ್ರಗತಿ ಕಾಣಲು ಸಾಧ್ಯ ಇರುವುದಿಲ್ಲವೋ ಅದೇ ರೀತಿಯಲ್ಲಿ ಇಂದಿನ ದೈವಾರಾಧನೆ ಹೆಸರಿಗೆ ಮಾತ್ರ ಯಜಮಾನನ ಪಾತ್ರ ಮಾಡುವ ವ್ಯಕ್ತಿಯಿಂದ ಸುಮಾರು ಶೇಕಡಾ ೯೯% ನಡೆಯುತಿರುವ ದೈವಾರಾಧನೆ – ಕನಿಷ್ಠ ಪ್ರಯೋಜನ ಹೊಂದಿದ್ದು – ಸರಿಯಾದ ಸಮರ್ಪಕ ಯಜಮಾನನ ಆಯ್ಕೆ ಮಾಡಿ ಲೋಪ ರಹಿತವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ದೈವ ಆರಾಧಕರ ಆದ್ಯ ಕರ್ತವ್ಯವಾಗಿದೆ.
ಈ ಕ್ಷೇತ್ರದಲ್ಲಿ ಪರಿಚಾರಕರು ಮತ್ತು ಯಜಮಾನ ಎಂಬ ಎರಡು ವಿಭಾಗಗಳಲ್ಲಿ ಪರಿಚಾರಕರು ತಮ್ಮ ಕರ್ತವ್ಯ ಮಾಡಲು ಸೂಕ್ತ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡದೇ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಇದಕ್ಕೆ ಸಾಮಾನ್ಯವಾಗಿ ಬೂಲ್ಯೆ ಎಂದು ಕರೆಯಲ್ಪಡುತದೆ . ಬೂಲ್ಯೆ ಆಗದೆ ಪರಿಚಾರಕ ಕೆಲಸ ಮಾಡಿದರೆ ಕೆಟ್ಟ ಪರಿಣಾಮ ಎದುರಿಸುವ ಭಯ ಅವರನ್ನು ಕಾಡುತದೆ.
ಯಜಮಾನ – ಗಡಿ ಭಾಮಾ ಪಟ್ಟ ಎಂದು ವಿಭಿನ್ನ ಹೆಸರಿನಿಂದ ಕರೆಯಲ್ಪಡುವ ಸ್ಥಾನಗಳನ್ನು ದೈವಾರಾಧನೆಯ ಮೂಲದಲ್ಲಿ ತಿಳಿಸಿದಂತೆ ಮಾಡದೇ – ಪೂಜಾ ಕಾರ್ಯ ನಿರ್ವಹಿಸುವ ವ್ಯಕ್ತಿಗಳನ್ನು ಮದ್ಯದಲ್ಲಿ ಬಳಸಿಕೊಂಡು ವಿಧಿ ವಿಧಾನಗಳನ್ನು ಪೂರೈಸುವ ಪ್ರಸ್ತುತ ಪದ್ಧತಿ ಪ್ರೇಕ್ಶಕರಿಗೆ ಮನೋರಂಜನೆ ನೀಡುವ ನಾಟಕವಾಗಿದೆ ಮಾತ್ರವಲ್ಲದೆ ದೈವ ಭಕ್ತರಾದ ನಾವು ನಮ್ಮ ಕೈಯಿಂದಲೇ – ನಮ್ಮ ಹಿರಿಯರು ಹಾಕಿಕೊಟ್ಟ ಸುಖ ಶಾಂತಿ ನೆಮ್ಮದಿ ಬಾಳಿಗೆ ಕೊಲ್ಲಿ ಇಡುವ ಕಾರ್ಯವನ್ನು ಮುಂದುವರಿಸುತ್ತಾ ಇದ್ದೇವೆ.
ದೈವ ಭಕ್ತರು ಚಿಂತನ ಮಂಥನ ಮತ್ತು ಅನುಷ್ಠಾನ – ಅನಿವಾರ್ಯದತ್ತ ಸಲಹೆಗಳು
ಸೂಕ್ತ ರೀತಿಯಲ್ಲಿ ಆಯ್ಕೆ ಮಾಡದ ಯಜಮಾನನಿಲ್ಲದೆ ದೈವಾರಾಧನೆ ಮಾಡದಿರುವುದು
ಪೂರ್ತಿ ದೈವದ ಹೊಣೆ ಹಸ್ತಾಂತರ ಅಸಾಧ್ಯ – ಊರಿನ ಗುತ್ತಿನ ಆರರಸು ವ್ಯಾಪ್ತಿಯ ಕಷ್ಟ ಕಾರ್ಪಣ್ಯ ಯಥಾ ಸ್ಥಿತಿ
ಯಜಮಾನನಿಲ್ಲದೆ ನಡೆಯುವ ದೈವಾರಾಧನೆ ಸೂನ್ಯ
ಯಜಮಾನ ತನ್ನ ಸ್ಥಾನ ಮಾನ ಉಳಿಸಿ ಬೆಳೆಸುವುದು ಕಷ್ಟ ಎಂಬ ಅನುಮಾನ ಅಪ್ರಸ್ತುತ
ಸಮಾಜ ಅಭಿವೃದ್ಧಿಯತ್ತ ಸಾಗಲು ಪೂರಕವಾಗುತದೆ
ಉತ್ತಮ ಸಂಸ್ಕಾರವಂತರಿಗೆ ಮಾತ್ರ ಬಾಳು ಎಂಬ ಅರಿವು ಹುಟ್ಟಿ ರಾಮ ರಾಜ್ಯದ ಕನಸು ನನಸು
ದೈವದ ಭಯ ಹುಟ್ಟಿ ಸಮಾಜಘಾತಕ ವ್ಯಕ್ತಿಗಳು ಮಂಗಾ ಮಾಯಾ
ಸೇವಾ ಬದುಕು ಪುನಃ ಪ್ರಾರಂಭವಾಗಿ ದರೋಡೆ ಮತ್ತು ವ್ಯಾಪಾರ ಬದುಕು ಹಂತ ಹಂತವಾಗಿ ನಿರ್ಮೂಲನೆ
ಕನಿಷ್ಠ ವೆಚ್ಚದಲ್ಲಿ ನ್ಯಾಯ ಸಿಗುತದೆ
ಕನಿಷ್ಠ ಸಮಯದಲ್ಲಿ ನ್ಯಾಯ ಲಭ್ಯ
ನ್ಯಾಯಕ್ಕಾಗಿ ಅಲೆದಾಟ ತಪ್ಪುತ್ತದೆ
ಅಪರಾಧ ಮಾಡುವ ಸ್ವಭಾವ ಪರಿವರ್ತನೆ
ವಿದೇಶಿ ವಿಷ ಬೀಜ ಸ್ವದೇಶೀ ಅವಲಂಬನೆ ಮದ್ದು