ದೈವ ಮಾತಾಡುವ ದೇವರು – ಸತ್ಯ ಧರ್ಮ ನ್ಯಾಯ ಪರಿಪಾಲನೆಗೆ ವಿಭಿನ್ನ ಪಾತ್ರಗಳಲ್ಲಿ ದೇವರ ಅವತಾರ – ಮಾಯಾ ಜ್ಞಾನ ಯಾ ತಂತ್ರಗಾರಿಲ್ಕೆ ಬಳಕೆ ಅನಿವಾರ್ಯ- ನಮ್ಮ ನಮ್ಮಲ್ಲಿರುವ ಅನುಭವ ಹಂಚಿಕೊಂಡು ದೈವಾರಾಧನೆ ಜಾಗತಿಕ ಮಟ್ಟಕ್ಕೆ ಬೆಳೆಸೋಣ
ದೈವಾರಾಧನೆಯಲ್ಲಿ ನರ್ತಕನ ಪಾತ್ರ ನರ್ತನ ಸೇವೆಯಲ್ಲಿ ಬಲುಮುಖ್ಯ ಪಾತ್ರ – ನರ್ತನ ಸೇವೆಗೆ ಅಷ್ಟಮಂಗಲದ ಪ್ರಾಮುಖ್ಯತೆ ಇರುವುದನ್ನ್ತು ಬಲ್ಲವರು ಉಲ್ಲೇಕೀಸುತಾರೆ. ನಮ್ಮಲ್ಲಿರುವ ಬಳಕೆಗೆ ಸೂಕ್ತ ಅನುಭವಗಳನ್ನು ನರ್ತಕಪಾತ್ರದಾರಿಗೆ ಪೂರೈಸಿದರೆ ಮೂಲ ದೈವಾರಾಧನೆ ಫಲ ನಮಗೆ ಲಭಿಸಿ ನೆಮ್ಮದಿ ಬಾಳು ನಮ್ಮದಾಗಬಹುದು.
ಸ್ವ ಮತ್ತು ಕಲೆಹಾಕಿದ ಸಲಹೆಗಳು ಕೆಳಗಿನಂತಿವೆ
೧. ವಿಧಿವತ್ತಾಗಿ ಆಯ್ಕೆಯಾದ ಯಜಮಾನನ ಡರ್ಡಿಕರಣ
೨. ಹೆಸರಿಗೆ ಮಾತ್ರ ಯಜಮಾನ ಪರಿಣಾಮ ಸೂನ್ಯ – ಹಂಗಾಮಿ ಸರಕಾರವಿದ್ದಂತೆ
೩. ನಿಯಮ ಬದ್ದವಾಗಿ ಲೋಪರಹಿತ – ನರ್ತನ ಸೇವೆ ಅನಿವಾರ್ಯ
೪. ದೈವಾರಾಧನೆ ಮೂಲ – ಆಂತರಿಕ ಆಡಂಬರ
೫. ದೈವಾರಾಧನೆ ಮೂಲ – ಬಾಹ್ಯ ಆಡಂಬರ ಸಲ್ಲ
೬. ಕೇಪುಳ ಹೂವಿನಿಂದ ಮೂಲ ದೈವಾರಾಧನೆ – ಮುಂದಿನ ನಡೆ ಅತ್ತ ಸಾಗುವ ಸಂಕಲ್ಪ ಮಾಡಬೇಕಾಗಿದೆ
೭. ಶುಚಿತ್ವ – ಬಂಡಾರದ ಮನೆ , ಬಂಡಾರಬರುವ ಮಾರ್ಗ ಯಾ ಬೀದಿ , ಪರಿಚಾರಕರ ಮತ್ತು ಭಕುತರಲ್ಲಿ ಅತ್ಯಗತ್ಯ
೮ ಪ್ರತ್ಯೇಕ ಬೂಲ್ಯೇ ಬಿಕ್ಕಟಿನ ಸಂಕೇತ – ಸಾಮೂಹಿಕ ಬುಲ್ಯೇ ಒಗ್ಗಟಿನ ಸಂಕೇತ – ಒಂದೇ ಮನೆಯ ಮಕ್ಕಳು – ಊರು , ಗುತ್ತು, ಅರಸು ವ್ಯಾಪ್ತಿ ಇತ್ಯಾದಿ
೯. ಮೂಲ ದೈವಾರಾಧನೆ ಬಹಿರಂಗ ನ್ಯಾಯಾಲಯ
೧೦. ದೈವ ಪಾತ್ರದಾರಿ ಪಂಚಾತಿಗೆ ಮಾಡುವುದಕ್ಕೆ ನಿಷೇದ
೧೧. ದೈವಾರಾಧನೆ ಆಡಳಿತ ವಿಭಾಗ – ಪೂಜಾ ವಿಭಾಗದ ಹಸ್ತಕ್ಷೇಪ ಸಲ್ಲ
೧೨. ದೂರು ಕೊಟ್ಟವನಿಗೆ ಸತ್ಯ ಸುಳ್ಳು ಪರಾಮರ್ಶಿಸಿ ಅಭಯ ರಕ್ಸಣೆ ಯಾ ದಂಡ
೧೩. ಸಕಲ ರೀತಿಯ ಸಮಸ್ಯೆಗಳಿಗೆ ಪರಿಹಾರ – ನಿಗದಿತ ದರ ದೂರಿಗೆ – ಪರಿಹಾರವಾದರೆ ಎರಡುಪಟ್ಟು ಸೇವಾಶುಲ್ಕ ವಸೂಲಿ . ಚಿಂತನೆ – ಸೇವಾ ಮನೋಭಾವನೆ ವ್ಯಾಪಾರೀ ಸಂಸ್ಕೃತಿಯಾಗಿ ದರೋಡೆ ಬಾಳುವೆಯತ್ತ ದಾಪುಗಾಲಿಡುವ ಜಗತಿನಲ್ಲಿ ಅತ್ಯಗತ್ಯ
೧೪. ಹಿಂಗಾರ ಯಾ ಅಕ್ಕಿ ಕಾಲು ಬಳಸಿ – ಸರಿ ಮುಗುಳಿ ಆಧಾರದಲ್ಲಿ ಎಲ್ಲಾ ದೂರುಗಳ ಇತ್ಯರ್ಥ ಕೆಲವೇ ಕ್ಷಣಗಳಲ್ಲಿ – ದೈವ ಪಾತ್ರದಾರಿಯ ಹೊಣೆಗಾರಿಕೆ ದೈವಕ್ಕೆ ವರ್ಗಾವಣೆಯಾಗಿ – ದೈವ ತೀರ್ಪು ಪರಿಪಾಲನೆ
೧೫. ಪ್ರಜಾಪ್ರಭುತ್ವ ವಿದೇಶಿ ನ್ಯಾಯಾಂಗ ವ್ಯವಸ್ಥೆಯಿಂದ ನೂರರಿಂದ ಸಾವಿರಪಟ್ಟು ಮಿಗಿಲಾದ ಕಾರ್ಯಕ್ಷಮತೆ – ಮುಂದಿನ ವಿಚಾರಣೆಗೆ ಅವಕಾಶವಿಲ್ಲ
೧೬. ಉತ್ತಮ ಸಂಸ್ಕಾರದತ್ತ ಮಾನವ ಬದುಕೆಗೆ ರಹದಾರಿ
೧೭. ಅರಸು ಗುತ್ತು ಬಾರಿಕೆ ತಂತ್ರಿ ಇತ್ಯಾದಿ ಸ್ತಾನಗಳಿಗೆ – ನೇಮ (ನರ್ತನ ಸೇವಾ ಸ್ಥಳ ) ಸನ್ಮಾನ ವೇದಿಕೆಯಾಗಿ ಬಳಕೆ ನಿಷಿದ್ಧ – ನ್ಯಾಯಾಲಯ ಅಪರಾಧಿಯನ್ನು ಗುರುತಿಸಿ ಶಿಕ್ಷೆ ಪ್ರಮಾಣವನ್ನು ಯಜಮಾನವರ್ಗದಲ್ಲಿ ಸಮಾಲೋಚನೆಗೆ ಮಾತ್ರ ಬಳಕೆ ಸೂಕ್ತ
೧೮. ಹರಕೆ ಕಾಣಿಕೆ ವಸ್ತುಗಳು ತೆಂಗಿನಕಾಯಿ ಸಿಯಾಳ ಇತ್ಯಾದಿ ಬಳಕೆಗಳಲ್ಲಿ ಮಾರ್ಪಾಡು ಮಾಡುವ ಬಗ್ಗೆ ಚಿಂತನ ಮಂಥನ ಅನುಷ್ಠಾನ (ವ್ಯಾಪಕ ಭ್ರಷ್ಟಾಚಾರದ ಕಾರಣಕ್ಕಾಗಿ )
ತನ್ನ ತಪ್ಪನ್ನು ತಾನು ಒಪ್ಪಿಕೊಂಡು ಬದುಕುವ ಸಮಾಜದ ನಮ್ಮ ಕನಸು ನನಸಾದರೆ – ಸುಖ ಶಾಂತಿ ನೆಮ್ಮದಿ ಬಾಳು ನಮ್ಮ ಮುಂದೆ ಪ್ರತ್ಯಕ್ಷ