ದೈವಾರಾಧನೆ ಅರಸು ಪದ್ಧತಿ ಆಡಳಿತದ ಬ್ರಹಮಾಸ್ತ್ರ. ಪ್ರಜಾಪದ್ದತಿ ಆಡಳಿತದ ಶಾಸಕಾಂಗ ಕಾರ್ಯಂಗ ಮತ್ತು ನ್ಯಾಯಾಂಗ ಮೂರು ವಿಭಾಗದ ಕೆಲಸಗಳನ್ನು ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸಿ ಸಮಾಜದ ದೇಶದ ಸುಖ ಶಾಂತಿ ನೆಮ್ಮದಿ ಬಾಳಿಗೆ ನಾಂದಿ ಹಾಡುತಿತ್ತು.
ದೈವ – ಸತ್ಯ ಧರ್ಮ ನ್ಯಾಯ ಪರಿಪಾಲನೆಗೆ ಜೀವರಾಶಿಗಳಾದ ವಿವಿಧ ಪ್ರಾಣಿಗಳ ರೂಪದಲ್ಲಿ ದೇವರು ಬಂದಿದ್ದಾರೆ ಎಂಬುದು ದೈವದ ಮಾತುಗಳಲ್ಲಿ ನಾವು ಕೇಳುತಿರುವುದು ವಾಸ್ತವ. ಆದುದರಿಂದ ದೈವ ದೇವರು ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.
ದೇವಸ್ಥಾನ ದೈವಸ್ಥಾನ – ದೇವರಾದನೆ ದೈವಾರಾಧನೆ – ನಿತ್ಯ ನಿರಂತರ ನಡೆಯುತಿದ್ದರು – ದೈವ ದೇವರು ಮತ್ತು ಮಾನವರ – ಸಂತುಷ್ಟ ಮತ್ತು ಸ್ವಾವಲಂಬಿ ಬದುಕು ಯಾಕೆ ಸಾದ್ಯವಾಗುತಿಲ್ಲ – ಎಂಬುದರ ಬಗ್ಗೆ ಚಿಂತನ ಮಂಥನ ಅನುಷ್ಠಾನ – ವೇದಿಕೆ ಮುಂದುವರಿಯುವುದು.
ದೈವ ದೇವರ ಪ್ರತಿಷ್ಠೆ ಮತ್ತು ಪೂಜೆ ಯಾರು ಎಲ್ಲಿ ಹೇಗೆ ಮಾಡಬೇಕು ಎಂಬುದು ಅರಿತು ಬಾಳಿದಾಗ ಮಾತ್ರ ಇಚ್ಚಿಸಿದ ಫಲ ಪ್ರಾಪ್ತಿಯಾಗಲು ಸಾಧ್ಯ
ಮನ ಮೈದಾನದಿ ದೈವಾಲಯ ದೇವಾಲಯ ಕಟ್ಟಿ
ನಿತ್ಯ ಬುದ್ದಿಯ ಸುತ್ತು ಗೋಪುರ ಕಟ್ಟಿದಾತನಲ್ಲಿ
ನಿತ್ಯ ದೇಹದೊಳಗೆ ದೈವ ದೇವರು ನಡೆದಾಡುತಿಹರು – ಅವ್ಯಕ್ತ
ಜಡ ವಸ್ತುಗಳಿಂದ ಮಾಡಿದ ಮೂರ್ತಿಗಳಲ್ಲಿ ಪೂಜಾ ತಂತ್ರ ಅರಿತ ತಂತ್ರಿಗಳು ದೈವ ದೇವರ ಪ್ರತಿಷ್ಠೆ ಮಾಡಿ – ಅವರ ಕೆಲಸ ಅವರು ಪೊರೈಸುತಾರೆ. ಭಕ್ತರು ಚೈತನ್ಯ ದೈವ ದೇವರ ಪ್ರತಿಷ್ಠೆ ತಮ್ಮ ತಮ್ಮ ಅಂತರಂಗದಲ್ಲಿ ಮಾಡಿಕೊಂಡು ಬದುಕಿನ ಮೆಟ್ಟಲುಗಳನ್ನು ಹತ್ತುತಿದ್ದರೆ – ನಮ್ಮ ಬದುಕು ಸಾರ್ಥಕ.