ಟಿ ವಿ ಮೊಬೈಲ್ ಬಕಾಸುರರಯ್ಯ
ಕಂಪ್ಯೂಟರ್ ಕಲ್ಪವೃಕ್ಷವಯ್ಯ
ತಿಳಿಸಿ ಹೇಳುವವರು ಎಲ್ಲಿಹರಯ್ಯ ………………………………………………..ಅವ್ಯಕ್ತ
ಆಸ್ಪತ್ರೆಗಳು ಬೆಳೆಯುವ ಪರಿ ನೋಡಾ
ದೇವಾಲಯಗಳು ಬೆಳೆಯುವ ಪರಿನೋಡಾ
ರೋಗಿ ಭಕುತರ ಶೋಷಣೆ ಕಾಣದಾದೆಯಾ ………………………………………..ಅವ್ಯಕ್ತ
ಅನ್ಯರ ಆಡಂಬರದ ಮದುವೆಗೆ ಬೋದಿಪ
ತನ್ನ ಆಡಂಬರದ ಮದುವೆಗೆ ಕುರುಡಾಗಿಹ
ಭೋದನೆ ಶೋಭೆ ತರುವುದೆಂತು ……………………………………………………ಅವ್ಯಕ್ತ
ಮೂಖ ಪ್ರಾಣಿಗಳು ಮರಿಗಳನ್ನು ಬೆಳೆಸುತಿಹುದಯ್ಯ
ಜಗದೊಡೆಯ ಮಾನವ ಮಕ್ಕಳನ್ನು ರಾಕ್ಷಸರಾಗಿ ಪೋಷಿಸುತಿಹರಯ್ಯ
ಪ್ರಕೃತಿ ದಾಸನಾಗದ ಪ್ರಕೃತಿ ದೊರೆ ನರಕದಲ್ಲಿಹನಯ್ಯಾ ……………………………ಅವ್ಯಕ್ತ
ದುಡಿಸಿ ತಿಂಬ ಕಾಲ ಹೋಯಿತಯ್ಯ
ದುಡಿದು ತಿಂಬ ಕಾಲ ಬಂತಯ್ಯ
ಸಾವು ಬದುಕು ನಿನಗೆ ಬಿಟ್ಟುದಯ್ಯ …………………………………………………….ಅವ್ಯಕ್ತ
ನಾ ಮಲ್ಪೆ ನಾ ಮಲ್ಪೆ ಎನಬೇಡ
ನಿನ್ನ ದೇಹದ ಒಳಗಿಹ ನಾ ಇಲ್ಲದಿರುತಿರೆ
ನಿನ್ನ ದೇಹ ಹೆಣ ಸುಡಲು ನೀನಿಲ್ಲವಯ್ಯಾ ……………………………………………….ಅವ್ಯಕ್ತ
ಮಾನವನಾಗಿ ಹುಟ್ಟಿ ಪ್ರಾಣಿ ಬದುಕು ಬೇಡವೇ ಬೇಡ
ಮಾನವನಾಗಿ ಹುಟ್ಟಿ ಮಾನವ ಬದುಕು ಬೇಡ
ಮಾನವನಾಗಿ ಹುಟ್ಟಿ ದೇವ ಮಾನವ ಬದುಕು ಬೇಕೆಂದ …………………………………..ಅವ್ಯಕ್ತ
ಸೇವಕರ ಸೇವಕ ರಾಜರರಾಜ
ರಾಜರ ರಾಜ ಸೇವಕರ ಸೇವಕ
ಮರ್ಮವನರಿಯದಾತ ಚಾಲನೆಯಲ್ಲಿಲದ ನಾಣ್ಯವೆಂದ ……………………………………ಅವ್ಯಕ್ತ
ಕುರ್ಚಿಯ ಬಿಸಿ ತಿಕಕ್ಕೆ ತಾಗದಿದ್ದೊಡೆ
ಕಲ್ಲಿನ ಏಟಿನ ಪೆಟ್ಟು ತಲೆಗೆ ಬೀಳದಿದ್ದೊಡೆ
ಪ್ರಾಣಿ ಬದುಕು ದಾನವ ಬದುಕು ಗತಿಯೆಂದ …………………………………………………ಅವ್ಯಕ್ತ
ದೇಹವೆಂಬ ಗಂದದ ಕೊರದ
ದೇವಾಲಯವೆಂಬ ಕಲ್ಲಲ್ಲಿ ತೇಡಿದಾತ
ಗಂಧಪ್ರಸಾದಕ್ಕೆ ಅರ್ಹನೆಂದ ………………………………………………………………….ಅವ್ಯಕ್ತ
ಭೂಮಿ ಯಾವ ಜಾತಿ ಗಾಳಿ ಯಾವ ಜಾತಿ
ನೀರು ಯಾವ ಜಾತಿ ಬೆಂಕಿ ಯಾವ ಜಾತಿ
ಮಣ್ಣು ಗಾಳಿ ಮಿಲನದ ದೇಹಕ್ಕೆ ಏಕಯ್ಯ ಜಾತಿ ………………………………………………..ಅವ್ಯಕ್ತ
ಗಳಿಕೆಯ ಭಾಗ ಜೀರ್ಣೋದ್ಧಾರಕ್ಕೆ ಬಹ್ಮಕಲಶಕ್ಕೆ
ಗಳಿಕೆಯ ಭಾಗ ನಿತ್ಯ ಪೂಜಾ ನಿಧಿಗೆ
ವಿನಿಯೋಗಿಸದಾತ ಮಣ್ಣು ಮುಕ್ಕುತಿಹನು ………………………………………………………ಅವ್ಯಕ್ತ